More

    ಕನ್ನಡದ ಭಾಷೆ, ಗಡಿ ತಂಟೆಗೆ ಬಂದ್ರೆ ಹುಷಾರ್​: ಮಹಾರಾಷ್ಟ್ರ ಸರ್ಕಾರಕ್ಕೆ ಶಿವರಾಜ್ ತಂಗಡಗಿ ಎಚ್ಚರಿಕೆ

    ಬೆಂಗಳೂರು: ಬೆಂಗಳೂರಿನ ಕೈಗಾರಿಕೆ, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯವಾಗಿ ಬಳಸುವ ಸಂಬಂದ ಕ್ರಮ ಕೈಗೊಳ್ಳುವಂತೆ ಪಾಲಿಕೆ‌ ಆಯುಕ್ತರಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾ ಣ ಇಲಾಖೆ‌ ಸಚಿವ ಶಿವರಾಜ್ ತಂಗಡಗಿ ಅವರು ಸೂಚಿಸಿದ್ದಾರೆ.

    ಇದನ್ನೂ ಓದಿ:ಡಿಸ್ಕೌಂಟ್​ ರೇಟಿನಲ್ಲಿ ಹೊಸ ಷೇರು ವಿತರಣೆ: ಬ್ಯಾಂಕ್ ಸ್ಟಾಕ್​ ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದರಿಂದ ಒಂದೇ ದಿನದಲ್ಲಿ 10% ಹೆಚ್ಚಳ

    ವಿಧಾನಸೌಧದಲ್ಲಿ ಬಿಬಿಎಂಪಿ‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾಧಿಕಾರಿಗಳ ಸಭೆ ನಡೆಸಿ ಅವರು ಈ ಸೂಚನೆ ನೀಡಿದರು.

    ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯ ಮಾಡಲಾಗಿದ್ದು, ಇದನ್ನು ಅಳವಡಿಸಲು ಫೆ.28 ಕೊನೆಯ ದಿನವಾಗಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು, ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.

    ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಳವಡಿಕೆ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವ ಶಿವರಾಜ್ ತಂಗಡಗಿ ಅವರು ಇದು ಮೊದಲು ಬೆಂಗಳೂರಿನಲ್ಲಿ ಜಾರಿಗೆ ಬರಬೇಕು, ಮುಂದೆ ಶೀಘ್ರವೇ ಗಡಿಜಿಲ್ಲೆ ಹಾಗೂ ಎಲ್ಲಾ ಪಾಲಿಕೆ‌ ವ್ಯಾಪ್ತಿಯಲ್ಲಿ ಸಭೆ ಮಾಡಲಾಗುವುದು ಎಂದು ಹೇಳಿದರು ನಮ್ಮ ರಾಜ್ಯ ನಾವು ಕಾಯ್ದೆ ರೂಪಿಸುತ್ತೇವೆ. ಮಹಾರಾಷ್ಟ್ರದಲ್ಲಿ ಏನಾದರೂ ನಾಮಫಲಕ‌ದಲ್ಲಿ ಕನ್ನಡ ಹಾಕಿ ಎಂದು ಹೇಳಿದ್ದೇವೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ವಿಧೇಯಕವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ‌ತಂದೆ ತರುತ್ತೇವೆ. ಅದರಲ್ಲಿ‌ ಎರಡು ಮಾತಿಲ್ಲ. ಕರ್ನಾಟಕದ ಬಗ್ಗೆ ನಾವು ಚಿಂತನೆ‌ ಮಾಡುತ್ತೇವೆ. ಬೆಳಗಾವಿ ಜಿಲ್ಲೆ ರಾಜ್ಯದ ಅವಿಭಾಜ್ಯ ಅಂಗ. ಈ‌ ನೆಲದ‌ ಶಾಸನವನ್ನು ಪ್ರಶ್ನೆ ಮಾಡಲು ಮಹಾರಾಷ್ಟ್ರ ದವರು ಯಾರು? ಈ ಬಗ್ಗೆ ಪ್ರಶ್ನೆ ಅಲ್ಲ, ಕೇಳಲು ಕೂಡ ‘ಮಹಾರಾಷ್ಟ್ರ ಕ್ಕೆ ಅಧಿಕಾರ ಇಲ್ಲ. ಯಾರು ಎಲ್ಲಿಗೆ ಹೋದರೂ ನಾಮಫಲಕ ಅಳವಡಿಕೆ‌ ಕೆಲಸವನ್ನು ಮಾಡುವುದು ನಿಶ್ಚಿತ ಎಂದು ಹೇಳಿದರು.

    ಕನ್ನಡಿಗರ ಶಾಂತಿ‌ ಪ್ರಿಯರು. ಕನ್ನಡದ ವಿಚಾರಕ್ಕೆ ಬಂದಾಗ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಸಚಿವ ತಂಗಡಗಿ ಎಚ್ಚರಿಕೆ ನೀಡಿದರು.
    ಇಲ್ಲಿ ಗಡಿ ಜಿಲ್ಲೆ, ಮಧ್ಯ ಕರ್ನಾಟಕ ಎಂಬ ಮಾತಿಲ್ಲ. ಇಡೀ ರಾಜ್ಯಾದ್ಯಂತ‌ ನಾಮಫಲಕಗಳಲ್ಲಿ ಕಡ್ಡಾಯವಾಗಿ ‌ಶೇ.60ರಷ್ಟು ಕನ್ನಡ ಬಳಕೆ‌ ಆಗಬೇಕು ಎಂದು ತಿಳಿಸಿದರು.

    ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡು ಮನೆಯಲ್ಲೂ ಪಕ್ಷತೀತವಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕಕ್ಕೆ ಒಪ್ಪಿಗೆ ದೊರೆತಿದೆ. ಕರ್ನಾಟಕದಲ್ಲಿ ಕನ್ನಡ‌ ಭಾಷೆಯೇ ಸಾರ್ವಭೌಮ. ಕನ್ನಡದ ವಿಚಾರದಲ್ಲಿ ಬೇರೆ ಯಾರದ್ದೋ ಮಾತನ್ನು ಕೇಳುವ ಮಾತಿಲ್ಲ. ಭಾಷೆ, ನೆಲ,‌‌ ಜಲದ ವಿಚಾರದಲ್ಲಿ ಯಾವುದೇ ರಾಜೀ ಪ್ರಶ್ನೆಯೇ ಇಲ್ಲ ಎಂದು ಶಿವರಾಜ್ ತಂಗಡಗಿ ಖಡಕ್ ಆಗಿ ಉತ್ತರಿಸಿದರು.

    IPL 2024: ಆರ್​ಸಿಬಿಗೆ ಮೊದಲ ಪಂದ್ಯ, ಎದುರಾಳಿ ಯಾರು? ಇಲ್ಲಿದೆ ವೇಳಾಪಟ್ಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts