More

    Black Tea benefits: ಪ್ರತಿದಿನ ಬ್ಲ್ಯಾಕ್​ ಟೀ ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ನೋಡಿ…

    ಜಗತ್ತಿನಲ್ಲಿ ಚಹಾವನ್ನು ಇಷ್ಟಪಡದವರು ಯಾರೂ ಇಲ್ಲ ಎಂದು ಹೇಳಬಹುದು. ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲದೆ ಎಲ್ಲರೂ ಆಗಾಗ ಟೀ ಕುಡಿಯುತ್ತಾರೆ. ಅನೇಕರು ಟೀಗೆ ದಾಸರಾಗಿರುತ್ತಾರೆ. ಊಟ ಮಾಡದಿದ್ದರೂ ಪರವಾಗಿಲ್ಲ, ಒಂದು ಕಪ್​ ಟೀ ಕುಡಿಯದಿದ್ದರೆ ದಿನ ಪೂರ್ಣವಾಗುವುದಿಲ್ಲ ಎಂದು ಹೇಳುವರು ಇದ್ದಾರೆ.

    ಟೀ ಕುಡಿಯುವುದರಿಂದ ದೇಹಕ್ಕೆ ತ್ವರಿತ ಶಕ್ತಿ ಮಾತ್ರವಲ್ಲದೆ ಅನೇಕ ಪ್ರಯೋಜನಗಳು ಸಿಗುತ್ತವೆ ಎಂದು ಹಲವರು ನಂಬಿದ್ದಾರೆ. ಆದರೆ, ಪ್ರತಿದಿನ ಹಾಲಿನಿಂದ ಮಾಡಿದ ಟೀ ಕುಡಿಯುವುದರಿಂದ ದೇಹಕ್ಕೆ ಹಲವಾರು ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಬದಲಾಗಿ, ಉತ್ತಮ ಆರೋಗ್ಯ ಫಲಿತಾಂಶಕ್ಕಾಗಿ ಪ್ರತಿದಿನ ಬ್ಲ್ಯಾಕ್​ ಟೀ ತೆಗೆದುಕೊಳ್ಳಬೇಕು. ಇದರಲ್ಲಿ ದೇಹಕ್ಕೆ ಬೇಕಾದ ಹಲವಾರು ಔಷಧೀಯ ಗುಣಗಳಿವೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಪ್ರತಿದಿನ ಬ್ಲ್ಯಾಕ್ ಟೀ ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ಏನೆಂಬುದನ್ನು ನಾವೀಗ ತಿಳಿದುಕೊಳ್ಳೋಣ.

    ಆ್ಯಂಟಿಆಕ್ಸಿಡೆಂಟ್ಸ್​
    ಬ್ಲ್ಯಾಕ್​ ಟೀನಲ್ಲಿ ಆ್ಯಂಟಿಆಕ್ಸಿಡೆಂಟ್ಸ್​ ಸಮೃದ್ಧವಾಗಿವೆ. ಇವು ಅನೇಕ ರೋಗಗಳನ್ನು ದೂರ ಮಾಡುತ್ತವೆ. ಇದರ ಜೊತೆಗೆ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಸಹ ಹೊರ ತೆಗೆಯುತ್ತವೆ. ಹೀಗಾಗಿ ನೀವು ಪ್ರತಿದಿನ ಬ್ಲ್ಯಾಕ್​ ಟೀ ಸೇವಿಸಿದರೆ, ದೀರ್ಘಕಾಲದ ಕಾಯಿಲೆಗಳಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು.

    ಇದನ್ನೂ ಓದಿ: ಏಕದಿನ ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾಗೆ ಇಂದು ಆಫ್ಘಾನಿಸ್ತಾನ ​ ಸವಾಲು; ರೋಹಿತ್​ ಪಡೆಗೆ ಸುಲಭ ಗೆಲುವಿನ ನಿರೀಕ್ಷೆ

    ಹೃದಯದ ಆರೋಗ್ಯಕ್ಕೆ ಒಳ್ಳೆಯದು
    ಬ್ಲ್ಯಾಕ್ ಟೀಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಇದನ್ನು ಸೇವಿಸುವುದರಿಂದ ನಮ್ಮ ಹೃದಯವೂ ಆರೋಗ್ಯವಾಗಿರುತ್ತದೆ. ಫ್ಲೇವನಾಯ್ಡ್‌ಗಳು ಎಂದು ಕರೆಯಲ್ಪಡುವ ಆ್ಯಂಟಿಆಕ್ಸಿಡೆಂಟ್​ಗಳು ಹೃದಯವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೃದಯಾಘಾತದ ಸಮಸ್ಯೆಗಳಿಂದ ಹೃದಯವನ್ನು ರಕ್ಷಿಸುತ್ತದೆ. ಈ ಬ್ಲ್ಯಾಕ್ ಟೀಯನ್ನು ಪ್ರತಿದಿನ ಕುಡಿದರೆ ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಬೊಜ್ಜಿನಿಂದ ಮುಕ್ತಿ ಪಡೆಯಬಹುದು.

    ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ
    ಪ್ರತಿದಿನ ಬ್ಲ್ಯಾಕ್ ಟೀ ಕುಡಿಯುವುದರಿಂದ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಲ್ಲಿರುವ ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಎಲ್ಲಾ ರೀತಿಯ ದೀರ್ಘಕಾಲದ ಕಾಯಿಲೆಗಳಿಗೆ ಪರಿಹಾರವನ್ನು ನೀಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

    ಇದಿಷ್ಟೇ ಅಲ್ಲದೆ, ಬ್ಲ್ಯಾಕ್​ ಟೀ ಸೇವನೆಯು ರಕ್ತದಲ್ಲಿನ ಶುಗರ್​ ಮಟ್ಟವನ್ನು ಕಡಿಮೆ ಮಾಡುತ್ತದೆ. ಸ್ಟ್ರೋಕ್​ ಅಪಾಯವನ್ನು ತಪ್ಪಿಸುತ್ತದೆ. ಕೆಲ ಕ್ಯಾನ್ಸರ್​ ಸಂಭವಗಳನ್ನು ತಡೆಯುತ್ತದೆ.

    ಬ್ಲ್ಯಾಕ್​ ಟೀ ಎಷ್ಟು ಸೇವನೆ ಮಾಡಬೇಕು?
    ಇತರೆ ಟೀಗಳಿಗಿಂತ ಬ್ಲ್ಯಾಕ್​ ಟೀನಲ್ಲಿ ಹೆಚ್ಚು ಕೆಫೀನ್ ಅಂಶ ಇರುತ್ತದೆ. ಪ್ರತಿ ಕಪ್​ಗೆ ಸುಮಾರು 50 ರಿಂದ 90 ಮಿಲಿಗ್ರಾಂನಷ್ಟು ಕೆಫಿನ್​ ಇರುತ್ತದೆ. ಹೆಚ್ಚು ಕೆಫೀನ್ ನಿಮಗೆ ಆತಂಕ, ಒತ್ತಡ ಮತ್ತು ನಿದ್ರೆಗೆ ಭಂಗ ಉಂಟು ಮಾಡಬಲ್ಲದು. ಹೀಗಾಗಿ ಅತಿಯಾದ ಕೆಫೀನ್​ ಸೇವನೆಯನ್ನು ತಪ್ಪಿಸಿ. ಪ್ರತಿ ದಿನಕ್ಕೆ 400 ಮಿಲಿಗ್ರಾಂಗಳಿಗಿಂತ ಕಡಿಮೆ ಇರಲಿ. ಇದು ಕೇವಲ ಟೀಗೆ ಮಾತ್ರ ಸೀಮಿತವಾಗಿರುವುದಿಲ್ಲ. ನೀವು ಪ್ರತಿನಿತ್ಯ ಸೇವಿಸುವ ಪದಾರ್ಥಗಳಲ್ಲೂ ಕೆಫೀನ್​ ಅಂಶ ಇರುತ್ತದೆ. ಒಟ್ಟಾರೆ, ಕೆಫೀನ್​ ಅಂಶ 400 ಮಿಲಿಗ್ರಾಂಗಳಿಂಗ ಹೆಚ್ಚಿರಬಾರದು. (ಏಜೆನ್ಸೀಸ್​)

    ಹಮಾಸ್​ ಉಗ್ರರಿಂದ ಗಾಜಾ ಗಡಿ ಪ್ರದೇಶಗಳನ್ನು ಮತ್ತೆ ವಶಕ್ಕೆ ಪಡೆದ ಇಸ್ರೇಲ್​: 3000 ದಾಟಿದ ಸಾವಿನ ಸಂಖ್ಯೆ

    ಹರ್​ದೀಪ್ ನಿಜವಾಗಿ ಆರಿದ್ದು ಹೇಗೆ?; ಟ್ರೂಡೋ ತರಲೆಯಾಟ ಭಾಗ 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts