More

  ಲೋಕಸಭೆ ಅಖಾಡದಲ್ಲಿ ಇರುವುದಂತೂ ಪಕ್ಕಾ! ವೀಣಾ ಕಾಶಪ್ಪನವರ್​ಗೆ ಬಿಜೆಪಿ ಗಾಳ?

  ಬಾಗಲಕೋಟೆ: ಲೋಕಸಭಾ ಚುನಾವಣೆ 2024ರ ಕಾವು ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಸದ್ಯ ಬಾಗಲಕೋಟೆ ಕ್ಷೇತ್ರದಲ್ಲಿ ಭಾರೀ ಕುತೂಹಲ ಮೂಡುತ್ತಿದೆ. ಇಲ್ಲಿನ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್​ ಕಡೆಗೂ ಕೈ ಟಿಕೆಟ್​ನಿಂದ ವಂಚಿತರಾಗಿದ್ದಾರೆ. ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲಗೆ ಕಾಂಗ್ರೆಸ್​ ಅಂತಿಮವಾಗಿ ಟಿಕೆಟ್ ಘೋಷಿಸಿದ ಬೆನ್ನಲ್ಲೇ ಕಣ್ಣೀರಿಟ್ಟ ವೀಣಾ ಇಂದಿಗೂ ತಮ್ಮ ಅಸಮಾಧಾನದಿಂದ ಹೊರಬಂದಿಲ್ಲ. ಆದರೆ, ಈ ಬೆಳವಣಿಗೆಯ ನಡುವೆಯೇ ವೀಣಾಗೆ ಬಿಜೆಪಿ ಗಾಳ ಹಾಕುತ್ತಿದೆ ಎನ್ನಲಾಗಿದೆ.

  ಇದನ್ನೂ ಓದಿ: ಕಂತುಗಳಲ್ಲಿ ಭದ್ರತಾ ಠೇವಣಿ ಪಾವತಿಸಲು ಆಫರ್..! ಚುನಾವಣಾಧಿಕಾರಿ ಹೇಳಿದ್ದೇನು?

  ಕಾಂಗ್ರೆಸ್ ಟಿಕೆಟ್ ಘೋಷಿಸಿದ ವಿಚಾರಕ್ಕೆ ತೀವ್ರ ಅಸಮಾಧಾನಗೊಂಡ ವೀಣಾ ಕಾಶಪ್ಪನವರ್​, ನಾನು ಧೃತಿಗೆಡುವುದಿಲ್ಲ. ಟಿಕೆಟ್ ಕೈತಪ್ಪಿರಬಹುದು. ಆದರೆ, ಚುನಾವಣೆಯಿಂದ ನಾನು ಇನ್ನು ಹಿಂದೆ ಸರಿದಿಲ್ಲ. ಖಂಡಿತವಾಗಿ ಲೋಕಸಭಾ ಅಖಾಡದಲ್ಲಿ ನನ್ನ ಸ್ಪರ್ಧೆ ಖಚಿತ. ಅದರಲ್ಲಿ ಎರಡನೆ ಮಾತೇ ಇಲ್ಲ ಎಂದು ಬೆಂಬಲಿಗರಲ್ಲಿ ಭರವಸೆ ಮೂಡಿಸಿದರು.

  ಮತ್ತೊಂದೆಡೆ ವೀಣಾ ಕಾಶಪ್ಪನವರ್​ ಅವರಿಗೆ ಬಿಜೆಪಿ ಗಾಳ ಹಾಕುತ್ತಿದೆ ಎಂದು ಹೇಳಲಾಗಿದ್ದು, ಕೆಲ ಮುಖಂಡರ ಸೂಚನೆಯಂತೆ ಬಿಜೆಪಿಗೆ ಬರುವಂತೆ ಆಹ್ವಾನ ನೀಡಲಾಗಿದೆ. ಆದರೆ, ವೀಣಾ ಪತಿ ಕಾಂಗ್ರೆಸ್ ಶಾಸಕರಾದ ಕಾರಣ ಅವರು ಬಿಜೆಪಿ ಹೋಗ್ತಾರೆ ಎನ್ನುವುದು ಬಹುತೇಕ ಅನುಮಾನ. ಕಾಂಗ್ರೆಸ್ ಪಕ್ಷದಲ್ಲಿ ತನಗೆ ನ್ಯಾಯ ಕೊಡದಿದ್ರೆ ಲೋಕಸಭೆ ಅಖಾಡದಲ್ಲಿ ಇರುವುದು ಪಕ್ಕಾ ಎಂದು ಬಹಿರಂಗವಾಗಿ ಹೇಳಿದ್ದಾರೆ.

  ಇದನ್ನೂ ಓದಿ: KUWJ ದತ್ತಿ ನಿಧಿ ಪ್ರಶಸ್ತಿ ಪ್ರಕಟ: ವಿಜಯವಾಣಿ ಸಹಾಯಕ ಸಂಪಾದಕ ಪ್ರಭುದೇವ ಶಾಸ್ತ್ರಿಮಠಗೆ ಗರುಡನಗಿರಿ ನಾಗರಾಜ್ ಪ್ರಶಸ್ತಿ

  ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ. ಶಿವಕುಮಾರ್​ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಬಾಗಲಕೋಟೆ ಟಿಕೆಟ್ ಸಮಸ್ಯೆ ಬಗೆಹರಿಯುತ್ತಾ? ಅಥವಾ ಅಸಮಾಧಾನ ಮುಂದುವರೆಯುತ್ತಾ? ಎಂಬ ಚರ್ಚೆ ಸದ್ಯ ರಾಜಕೀಯ ವಲಯದಲ್ಲಿ ತೀವ್ರವಾಗುತ್ತಿದೆ. ಕಾಂಗ್ರೆಸ್​ನಲ್ಲಿ ಬಂಡಾಯ ಇಲ್ಲವೇ ಇಲ್ಲ ಎಂದ ಜಿಲ್ಲಾ ಅಧ್ಯಕ್ಷರು, ಸಿಎಂ, ಡಿಸಿಎಂ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಎಲ್ಲವೂ ಸರಿಯಾಗುತ್ತೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.

  ಅದೊಂದು ಪಾತ್ರ ನಾನು ಒಪ್ಪಬಾರದಿತ್ತು! ಆ ತಪ್ಪಿಂದ ನನ್ನ ಆಸೆಯೇ ನುಚ್ಚುನೂರಾಯ್ತು: ನಟಿ ಅರ್ಚನಾ

  ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts