More

    ಸೋಷಿಯಲ್​ ಮೀಡಿಯಾದಲ್ಲಿ ಚುನಾವಣೆ ಜಾಹೀರಾತು: ಕಾಂಗ್ರೆಸ್​ಗಿಂತ ಬಿಜೆಪಿ ಖರ್ಚು ಅಧಿಕ

    ನವದೆಹಲಿ: ಇತ್ತೀಚೆಗಷ್ಟೇ ಜರುಗಿದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿಯು ಹೊಸ ಮುಖಗಳನ್ನೇ ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡಿದೆ. ಈ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಸಾಕಷ್ಟು ಪೈಪೋಟಿ ಇತ್ತು. ಇದೇ ರೀತಿ ಪ್ರಚಾರವೂ ಜೋರಾಗಿತ್ತು. ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿಯು ಸಾಮಾಜಿಕ ಮಾಧ್ಯಮದ (ಸೋಷಿಯಲ್​ ಮೀಡಿಯಾ) ಜಾಹೀರಾತಿಗಳಿಗೆ ಹೆಚ್ಚು ಖರ್ಚು ಮಾಡಿದೆ.

    ಲೋಕನೀತಿ-ಸೆಂಟರ್ ಫಾರ್ ದಿ ಸ್ಟಡಿ ಸೊಸೈಟೀಸ್ ಕೈಗೊಂಡ ಅಧ್ಯಯನದಲ್ಲಿ ಸಂಗತಿಯನ್ನು ಬಹಿರಂಗವಾಗಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಖರ್ಚು ಮಾಡಿದ ಹಣವನ್ನು ಈ ಅಧ್ಯಯನವು ಆಧರಿಸಿದೆ. ಎರಡು ಪಕ್ಷಗಳ ಅಧಿಕೃತ ರಾಜ್ಯ ಖಾತೆಗಳಲ್ಲಿ (ವೈಯಕ್ತಿಕ ನಾಯಕರ ಖಾತೆಗಳನ್ನು ಅಥವಾ ಪಕ್ಷದ ವಿಷಯವನ್ನು ಪೋಸ್ಟ್ ಮಾಡುವ ಯಾವುದೇ ಅಧಿಕೃತವಲ್ಲದ ಖಾತೆಗಳನ್ನು ಪರಿಗಣಿಸದೆ) ಈ ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತದೆ.

    ಮಧ್ಯಪ್ರದೇಶದಲ್ಲಿ ಈ ಎರಡು ಪಕ್ಷಗಳ ನಡುವಿನ ವೆಚ್ಚದಲ್ಲಿ ಸಣ್ಣ ವ್ಯತ್ಯಾಸ ಮಾತ್ರವಿದೆ. “ಚುನಾವಣೆಯ ಹಿಂದಿನ 90 ದಿನಗಳಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿಯ ಖರ್ಚು ಕಾಂಗ್ರೆಸ್‌ಗಿಂತ ಹೆಚ್ಚಾಗಿದೆ” ಎಂದು ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದನ್ನು ಈ ಅಧ್ಯಯನದಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಮಧ್ಯಪ್ರದೇಶ ರಾಜ್ಯದಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಜಾಹೀರಾತುಗಳಿಗಾಗಿ ಬಿಜೆಪಿಯು 94 ಲಕ್ಷ ರೂ. ಹಾಗೂ ಕಾಂಗ್ರೆಸ್​ 92 ಲಕ್ಷ ರೂ. ವ್ಯಯಿಸಿವೆ.

    ಛತ್ತೀಸ್‌ಗಢದಲ್ಲಿ ಬಿಜೆಪಿಯ ಅಧಿಕೃತ ಖಾತೆಯು ಚುನಾವಣೆಗೆ 90 ದಿನಗಳ ಮೊದಲು 79.7 ಲಕ್ಷ ರೂ., ಕಾಂಗ್ರೆಸ್ 4.7 ಲಕ್ಷ ರೂ. ವ್ಯಯಿಸಿವೆ. ರಾಜಸ್ಥಾನದಲ್ಲಿ ಚುನಾವಣೆಗೆ ಮೊದಲು 90 ದಿನಗಳಲ್ಲಿ ಬಿಜೆಪಿ 94 ಲಕ್ಷ ರೂ. ಮತ್ತು ಕಾಂಗ್ರೆಸ್ 2.18 ಲಕ್ಷ ರೂ. ಖರ್ಚು ಮಾಡಿವೆ ಎಂಬುದು ಈ ಅಧ್ಯಯನದಲ್ಲಿ ಕಂಡುಬಂದಿದೆ.

    2026ಕ್ಕೆ ಬುಲೆಟ್​ ಟ್ರೇನ್ ಸಂಚಾರ ಆರಂಭ: ಮುಂಬೈ- ಅಹಮದಾಬಾದ್​ ನಡುವಿನ ಪಯಣ ಕೇವಲ 2 ಗಂಟೆ

    ಹಳೆಯ ಪಿಂಚಣಿ ಯೋಜನೆ ಮರುಜಾರಿ ಮಾಡಿದರೆ ರಾಜ್ಯಗಳ ಗತಿ ಏನು?: ಆರ್​ಬಿಐ ವರದಿಯಲ್ಲಿ ಆತಂಕಕಾರಿ ಸಂಗತಿ

    ‘ಅಮಿತ್ ಶಾಗೆ ಇತಿಹಾಸ ತಿಳಿಯುತ್ತದೆ ಎಂದು ನಿರೀಕ್ಷಿಸಲಾಗದು: ನೆಹರು ವಿರುದ್ಧದ ವಾಗ್ದಾಳಿಗೆ ರಾಹುಲ್ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts