More

  ಪಾ”ಕೈ”ಸ್ತಾನ ಎಂದ ಬಿಜೆಪಿ: ಕಾನುನು ಕ್ರಮ ನಿಶ್ಚಿತ ಎಂದ ‘ಕೈ’

  ಬೆಂಗಳೂರು: ಮಂಗಳವಾರ ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಸೈಯದ್‌ ನಾಸಿರ್‌ ಹುಸೇನ್‌ ಬೆಂಬಲಿಗರು ವಿಧಾನಸೌಧದ ಮೊಗಸಾಲೆಯಲ್ಲೇ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದಾರೆ ಎಂಬ ಬಿಜೆಪಿ ಆರೋಪ ಮಾಡಿದ್ದು ಕಾಂಗ್ರೆಸ್​ ಮತ್ತು ಬೆಜೆಪಿ ಪಕ್ಷಗಳ ನಡುವೆ ವಾಕ್ಸಮರ ತೀವ್ರಗೊಂಡಿದೆ.

  ಇದನ್ನೂ ಓದಿ:IPL​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬಿಗ್ ಶಾಕ್! ಸ್ಟಾರ್​ ಆಟಗಾರನಿಗೆ ಗಾಯ! ತಂಡದಿಂದ ಹೊರಕ್ಕೆ?

  ಬುಧವಾರ ಬಿಜೆಪಿ ಕರ್ನಾಟಕ ತಮ್ಮ ಎಕ್ಸ್​ ಖಾತೆಯಲ್ಲಿ ಹಾಕಿರುವ ಒಂದು ಪೋಸ್ಟರ್​​ ಕಾಂಗ್ರೆಸ್​ನ​ ಆಕ್ರೋಶಕ್ಕೆ ಕಾರಣವಾಗಿದೆ. ಈ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಾಂಗ್ರೆಸ್ ಪಕ್ಷ ಕಠಿಣ ಕಾನೂನು ಕ್ರಮ ಜರುಗಿಸುವುದು ನಿಶ್ಚಿತ ಎಂದು ರೀ ಟ್ಟೀಟ್​ ಮಾಡಿ ಎಚ್ಚರಿಕೆ ನೀಡಿದೆ.

  ಬುಧವಾರ ಮಧ್ಯಾಹ್ನ ಟ್ಟೀಟ್​ ಮಾಡಿರುವ ಬಿಜೆಪಿ ಭಾರತದಲ್ಲಿ ಪಾ”ಕೈ”ಸ್ತಾನವನ್ನು ಬೆಂಬಲಿಸುವವರ “ಕೈ”ಗಳನ್ನು ಹೆಡೆಮುರಿ ಕಟ್ಟಿ ಎಂದಿದೆ. ಹಾಗೂ ಕೈ ಸಿಂಬಲ್​ನಲ್ಲಿ ಪಾಕೈಸ್ತಾನ ಎಂದು ವಿಶೇಷ ಪೋಸ್ಟರ್​ ಪ್ರಕಟಿಸಿದೆ. ನೀವು ದೂರು ದಾಖಲಿಸುವುದು ಪಾಕಿಸ್ತಾನದಲ್ಲೋ ಅಥವಾ ಭಾರತದಲ್ಲೋ ಎಂದು ಕಾಂಗ್ರೆಸ್​ನ್ನು ಪ್ರಶ್ನೆ ಮಾಡಿದೆ.

  ಅದನ್ನೇ ರೀಟ್ಟೀಟ್​ ಮಾಡಿರುವ ಕಾಂಗ್ರೆಸ್​ ಈ ಅವಹೇಳನಕಾರಿ ಪೋಸ್ಟ್ ಡಿಲೀಟ್ ಮಾಡದಿದ್ದರೆ ಕಾಂಗ್ರೆಸ್ ಪಕ್ಷ ಕಠಿಣ ಕಾನೂನು ಕ್ರಮ ಜರುಗಿಸುವುದು ನಿಶ್ಚಿತ ಎಂದು ಎಚ್ಚರಿಕೆಯನ್ನೂ ನೀಡಿದೆ.

  IPL​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬಿಗ್ ಶಾಕ್! ಸ್ಟಾರ್​ ಆಟಗಾರನಿಗೆ ಗಾಯ! ತಂಡದಿಂದ ಹೊರಕ್ಕೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts