More

    ಡ್ಯಾಮೇಜಿಂಗ್ ಹೇಳಿಕೆ ಕೊಡುವವರಿಗೆ ಕಡಿವಾಣ ಹಾಕಿ : ಕೋರ್​ ಕಮಿಟಿ ಸಭೆಯಲ್ಲಿ ಸದಾನಂದ ಗೌಡ

    ಬೆಂಗಳೂರು : ಇಂದು ನಗರದಲ್ಲಿ ನಡೆದ ಬಿಜೆಪಿ ಕೋರ್‌‌ ಕಮಿಟಿ ಸಭೆಯಲ್ಲಿ ಪಕ್ಷದ ಶಾಸಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು, ಗೊಂದಲದ ಹೇಳಿಕೆಗಳಿಂದ‌ ಪಕ್ಷ‌ ಹಾಗೂ ಸರ್ಕಾರದ ಇಮೇಜಿಗೆ ಹೊಡೆತ ಬೀಳುತ್ತದೆ ಎಂಬ ಅಭಿಪ್ರಾಯ ಕೇಳಿಬಂತು. “ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ನಮ್ಮ ಮುಂದಿರುವುದು ಪಕ್ಷದ ಸಂಘಟನೆ ಹಾಗೂ ‌ಮುಂದಿನ ವಿಧಾನಸಭೆ ಚುನಾವಣೆ” ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

    ನಾಯಕತ್ವ ಬದಲಾವಣೆ ವಿಚಾರದಲ್ಲಿ ಆದ ಗೊಂದಲಗಳ ನಿವಾರಣೆಗಾಗಿ ಸಭೆಯಲ್ಲಿ ಮುಕ್ತ ಚರ್ಚೆ ನಡೆಯಿತು. ನಾಯಕತ್ವದ ಗೊಂದಲ ಬಗೆಹರಿಸಿ ಎಂದು ಸಭೆಯಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರ ಕೆಲಸ ಮಾಡಿದ್ರೂ ನಾಯಕತ್ವದ ವಿರುದ್ಧ ಹೇಳಿಕೆಗಳಿಂದ ಸಂಘಟನೆಗೆ ಫಲ ಕೊಡ್ತಿಲ್ಲ. ಈ ಎಲ್ಲ ಚರ್ಚೆಗಳಿಗೆ ತೆರೆ ಎಳೆಯಿರಿ ಎಂಬ ಒಟ್ಟಾರೆ ಅಭಿಪ್ರಾಯ ಮೂಡಿಬಂದಿತು ಎನ್ನಲಾಗಿದೆ.

    ಇದನ್ನೂ ಓದಿ: ‘ವಿಶ್ವನಾಥ್ ಬಗ್ಗೆ ಮಾತಾಡಿದರೆ ನನ್ನ ಬಾಯಿ ಹೊಲಸು’ – ಹಳ್ಳಿ ಹಕ್ಕಿಗೆ ಕುಟುಕಿದ ರೇಣುಕಾಚಾರ್ಯ

    ಪದೇ ಪದೇ ದೆಹಲಿಗೆ ಬರುವ ನಾಯಕರನ್ನ ಕಡೆಗಣಿಸಿ. ಭೇಟಿಗೆ ಅವಕಾಶ ಕೊಟ್ರೆ ಅವರು ಇಲ್ಲಿ ಬಂದು ಮಾಧ್ಯಮಗಳ ಮುಂದೆ ಅವರಿಗೆ ಬೇಕಾದ ರೀತಿ ವ್ಯಾಖ್ಯಾನ ಮಾಡ್ತಾರೆ. ಗೊಂದಲಗಳಿಗೆ ಅವಕಾಶ ಕೊಡದಂತೆ ಬಗೆಹರಿಸಿ ಎಂದು ಸಭೆಯಲ್ಲಿ ಹಿರಿಯ ಸಚಿವರು ಪ್ರಸ್ತಾಪ ಮಾಡಿದರು.

    ‘ಪಕ್ಷಕ್ಕೆ ಡ್ಯಾಮೇಜ್ ಆಗುವಂಥ ಹೇಳಿಕೆ ಕೊಡುವವರಿಗೆ ಕಡಿವಾಣ ಹಾಕಿ. ಪಕ್ಷದ ಸಂಪ್ರದಾಯ ತಪ್ಪುವುದು ಬೇಡ. ಶಿಸ್ತಿನ ಪಕ್ಷದಲ್ಲಿ ಅಶಿಸ್ತು ಸಹಿಸಲ್ಲ ಎಂದು ಸಂದೇಶ ರವಾನೆ ಮಾಡಿ. ಹಲವು ಬಾರಿ ಇಂತಹ ಘಟನೆಗಳು ಆದಾಗ ಕ್ರಮ ಆಗಿದೆ. ಸಂಪ್ರದಾಯ ಮುರಿಯಬೇಡಿ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸಲಹೆ ನೀಡಿದರು. ಪಕ್ಷ ಎಲ್ಲ ವಿಚಾರದಲ್ಲೂ ನಿಷ್ಠುರವಾಗಿ ಇರಬೇಕು. ಅಧ್ಯಕ್ಷರು ಯಾರ ಮುಲಾಜು ನೋಡುವುದೂ ಬೇಡ. ಸ್ಪಷ್ಟ ಸಂದೇಶ ರವಾನೆ ಮಾಡುವ ಕೆಲಸ ಮಾಡಿ ಎಂದು ಸದಾನಂದ ಗೌಡ ಹೇಳಿದರು ಎನ್ನಲಾಗಿದೆ.

    ನಾಯಕತ್ವ ವಿಚಾರದಲ್ಲಿ ಗೊಂದಲವಿಲ್ಲ… ಅಪಸ್ವರ ಎತ್ತಿದವರ ವಿರುದ್ಧ ಕ್ರಮ : ಸಿಎಂ ಯಡಿಯೂರಪ್ಪ

    ರಸ್ತೆ ದಾಟುತ್ತಿದ್ದ ಹುಲಿಗೆ ವಾಹನ ಡಿಕ್ಕಿ; ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts