More

    ‘ವಿಶ್ವನಾಥ್ ಬಗ್ಗೆ ಮಾತಾಡಿದರೆ ನನ್ನ ಬಾಯಿ ಹೊಲಸು’ – ಹಳ್ಳಿ ಹಕ್ಕಿಗೆ ಕುಟುಕಿದ ರೇಣುಕಾಚಾರ್ಯ

    ಬೆಂಗಳೂರು : ಯಾವುದೇ ಪಕ್ಷದೊಂದಿಗೆ ನಿಷ್ಠರಲ್ಲದ, ನಾಯಕರ ಬಗ್ಗೆಯೇ ಲಘು ಮಾತು – ಇಲ್ಲಸಲ್ಲದ ಆರೋಪ ಹೊರಿಸುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬಗ್ಗೆ ಮಾತಾಡಿದರೆ ನನ್ನ ಬಾಯಿ ಹೊಲಸಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕುಟುಕಿದ್ದಾರೆ.

    ಇಂದು ಬೆಳಗ್ಗೆಯ ಸುದ್ದಿಗೋಷ್ಠಿಯಲ್ಲಿ ಎಚ್.ವಿಶ್ವನಾಥ್ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಎಂಬ ಹೇಳಿಕೆಯನ್ನು ನೀಡುವುದರ ಜೊತೆಗೆ ಭದ್ರಾ ಮೇಲ್ಡಂಡೆ ಯೋಜನೆಯಲ್ಲಿ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದ್ದಾರೆ. ಈ ಬಗ್ಗೆ ರೇಣುಕಾಚಾರ್ಯ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಯೋಗೇಶ್ವರ್​ ಹೇಳಿದ್ದು ಸತ್ಯ, ವಿಜಯೇಂದ್ರ ಹಸ್ತಕ್ಷೇಪ ಇದೆ, ನಾಯಕತ್ವ ಬದಲಾವಣೆ ಆಗ್ಲೇಬೇಕು…

    ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ವಿಶ್ವನಾಥ್ ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದೀಗ ಯಡಿಯೂರಪ್ಪ ಸೇರಿದಂತೆ ಯಾರನ್ನೂ ಬಿಟ್ಟಿಲ್ಲ, ಎಲ್ಲರ ಬಗ್ಗೆಯೂ‌ ಹಗುರವಾಗಿ ಮಾತನಾಡಿದ್ದಾರೆ. ವಿಶ್ವನಾಥ್ ರಾಜಕೀಯದಲ್ಲಿ ಹಿರಿಯರು, ಅವರ ಬಾಯಲ್ಲಿ ಅಂತಹ ಶಬ್ಧ ಬರಬಾರದು. ‌ಅವರ ಬಗ್ಗೆ ಮಾತನಾಡಿದರೆ ನನ್ನ ಬಾಯಿ ಹೊಲಸಾಗುತ್ತದೆ ಎಂದು ಕಿಡಿಕಾರಿದರು.

    ಭ್ರಷ್ಟಾಚಾರ ಆರೋಪ ಹೊರಿಸಿದ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, “ಮುಖ್ಯಮಂತ್ರಿಗಳ ಬಗ್ಗೆ ಹೀಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ.‌ ವಿಶ್ವನಾಥ್ ಯಾವ ಪಕ್ಷಕ್ಕೂ ನಿಷ್ಠವಾಗಿಲ್ಲ ಎಂದು ಹೇಳಿದ್ದು ನಿಜ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಚುನಾವಣೆಗೆ ನಿಲ್ಲುವುದು ಬೇಡ ಎಂದಾಗಲೂ ನಿಂತು‌ ಸೋತರು, ನಂತರದಲ್ಲಿ ಅವರನ್ನು ಎಂಎಲ್​​ಸಿ ಮಾಡಲಾಯಿತು. ಇದೀಗ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಹತಾಶರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ” ಎಂದರು.‌

    ಬಿಜೆಪಿ ಪದಾಧಿಕಾರಿಗಳ ಸಭೆ : ಅಂತಃಕಲಹದ‌ ಅಡ್ಡ‌ಪರಿಣಾಮ ತಪ್ಪಿಸಲು ಕಸರತ್ತು

    ಒಲಂಪಿಕ್ಸ್​​​ಗೆ ಸಿದ್ಧವಾಯ್ತು ಹಾಕಿ ಮಹಿಳಾ ತಂಡ; ಕ್ಯಾಪ್ಟನ್​ ಆಗಿ ರಾಣಿ ರಾಂಪಾಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts