More

    ಬಿಜೆಪಿ ಪೋಸ್ಟರ್ ವಾರ್; ಕಾಂಗ್ರೆಸ್‌ಗೆ ತಿರುಗುಬಾಣ

    ಬೆಂಗಳೂರು: ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಕಾಂಗ್ರೆಸ್ ಬಳಸಿದ ಅಸಗಳನ್ನೇ ಬಿಜೆಪಿ ತಿರುಗು ಬಾಣವಾಗಿಸಿ, ಕಮಿಷನ್ ಹಾಗೂ ಭ್ರಷ್ಟಾಚಾರದ ಪೋಸ್ಟರ್ ವಾರ್‌ಗೆ ಇಳಿದಿದ್ದು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದಿದ್ದ ಕಾಂಗ್ರೆಸ್ ನಾಯಕರನ್ನು ಗೇಲಿ ಮಾಡಿದೆ.

    ಬಿಲ್ ಪಾವತಿಗೆ ಕಮಿಷನ್ ನೀಡಲು ಒತ್ತಡ ಹೇರಲಾಗುತ್ತಿದೆ ಎಂಬ ಗುತ್ತಿಗೆದಾರರ ಬಹಿರಂಗ ಆರೋಪ, ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದನ್ನು ಮುಂದೆ ಮಾಡಿ ಪ್ರತಿಪಕ್ಷ ಬಿಜೆಪಿ ಮುಗಿಬಿದ್ದಿದೆ.
    ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕೆ.ಗೋಪಾಲಯ್ಯ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಜತೆಗಿದ್ದ ಶಾಸಕ ಎಸ್.ಆರ್.ವಿಶ್ವನಾಥ್ ಕುತೂಹಲದಿಂದ ವೀಕ್ಷಿಸಿದರು.

    ಅಧಿಕಾರಕ್ಕೆ ಬಂದ ಮೂರು ತಿಂಗಳ ಅವಧಿಯಲ್ಲೇ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ. ಲೋಕಸಭೆ ಚುನಾವಣೆಗೆ ಂಡ್ ಕಲೆಕ್ಷನ್ ಮಾಡಿ ವರಿಷ್ಠರಿಗೆ ಕಳುಹಿಸಲು ಮುಂದಾಗಿದೆ ಎಂಬ ಗಂಭೀರ ಆರೋಪವನ್ನು ಪೋಸ್ಟರ್‌ಗಳಲ್ಲಿ ಬಿಂಬಿಸಿದೆ.

    ‘ಕರ್ನಾಟಕ ಕಾಂಗ್ರೆಸ್ ಎಟಿಎಂ ಸರ್ಕಾರ’ವೆಂದು ಬರೆದ ಎಟಿಎಂ ಮಷಿನ್ ಮುಂದೆ ನೋಟಿನ ಕಂತೆಗಳನ್ನು ಹಿಡಿದುಕೊಂಡು ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲಾ ನಿಂತ ಭಂಗಿ ಪೋಸ್ಟರ್ ಮೂಲಕ ಬಿಜೆಪಿ ತಿರುಗೇಟು ನೀಡಿದೆ.

    ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜತೆಯಾಗಿ ಹಿಡಿದುಕೊಂಡ ಸೂಟ್‌ಕೇಸ್ ಮೇಲೆ ಕರ್ನಾಟಕ ನಕ್ಷೆ ಚಿತ್ರಿಸಿ, ‘್ರಮ್ ಕರ್ನಾಟಕ ಟು ಗಾಂಧಿ ್ಯಾಮಿಲಿ’ ಎಂದು ಬರೆಯಲಾಗಿದೆ. ಇದೇ ಚಿತ್ರದ ಹಿಂಬದಿಯಲ್ಲಿ ಸೋನಿಯಾಗಾಂಧಿ, ಸುರ್ಜೆವಾಲಾ ಮತ್ತು ರಾಹುಲ್‌ಗಾಂಧಿ ಭಾವಚಿತ್ರವಿದೆ.
    ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ರಾಹುಲ್‌ಗಾಂಧಿ ಒಟ್ಟಾಗಿ ಸೂಟ್‌ಕೇಸ್ ಹಿಡಿದ ‘್ರಮ್ ಕರ್ನಾಟಕ ಟು ಗಾಂಧಿ ್ಯಾಮಿಲಿ’ ಎಂದು ಮುದ್ರಿಸಲಾಗಿದೆ.

    ಎಟಿಎಂ ಸರ್ಕಾರವೆಂದು ಬರೆದ ಎಟಿಎಂ ಮಷಿನ್ ಮೇಲೆ ನೋಟುಗಳ ಕಂತೆ ಹಿಡಿದ ಡಿ.ಕೆ.ಶಿವಕುಮಾರ್‌ರನ್ನು ಸಿದ್ದರಾಮಯ್ಯ ನಗುತ್ತಾ ನೋಡುತ್ತಿರುವ ಪೋಸ್ಟರ್‌ನ್ನು ಬಿಜೆಪಿ ಬಿಡುಗಡೆ ಮಾಡಿದೆ. ಅಲ್ಲದೆ, ಮಂಡ್ಯ ಜಿಲ್ಲೆಯಲ್ಲಿ ಚೆಲುವರಾಯಸ್ವಾಮಿ ಭಾವಚಿತ್ರವುಳ್ಳ ‘ಪೇಸಿಎಸ್’ ಪೇ ಾರ್ ಕರ್ನಾಟಕ ಕಾಂಗ್ರೆಸ್ ಕರೆಪ್ಷನ್ ಎಂಬ ಅಭಿಯಾನವನ್ನೇ ಶುರುವಿಟ್ಟುಕೊಂಡಿದೆ.

    ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲೇ ಭ್ರಷ್ಟಾಚಾರಕ್ಕೆ ಇಳಿದಿದೆ. ಲೋಕಸಭೆ ಚುನಾವಣೆಗೆ ಬೇಕಾದ ಹಣ ಸಂಗ್ರಹಿಸಿ ವರಿಷ್ಠರಿಗೆ ಕೊಡಲು ಂಡ್ ಕಲೆಕ್ಷನ್‌ಗೆ ಇಳಿದಿದೆ ಎಂದು ಈ ಪೋಸ್ಟರ್‌ಗಳ ಮೂಲಕ ಆರೋಪಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts