ತುಮಕೂರು ಪಾಲಿಕೆ ಭ್ರಷ್ಟಾಚಾರದ ಕೂಪ : ಮಾಜಿ ಸಚಿವ ಸೊಗಡುಶಿವಣ್ಣ ಆರೋಪ

ತುಮಕೂರು: ಮಹಾನಗರ ಪಾಲಿಕೆ ಭ್ರಷ್ಟಾಚಾರದ ಕೂಪವಾಗಿದೆ. ಮಧ್ಯವರ್ತಿಗಳು ಇಲ್ಲದೆ ಯಾವುದೇ ಕೆಲಸಗಳು ಪಾಲಿಕೆಯಲ್ಲಿ ಆಗುವುದಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಗಂಭೀರ ಆರೋಪ ಮಾಡಿದರು.

ಪಾಲಿಕೆಯಲ್ಲಿ ನಾಗರಿಕರು ನೇರವಾಗಿ ಹೋದರೆ ಯಾವುದೇ ಕೆಲಸಗಳು ಆಗುವುದಿಲ್ಲ. ಜನರ ಕೆಲಸ ಕಾರ್ಯಗಳಿಗೆ ಅಧಿಕಾರಿಗಳು, ಸಿಬ್ಬಂದಿ ಸ್ಪಂದಿಸುವುದಿಲ್ಲ. ದಾಖಲೆಗಳಿಲ್ಲ್ಲವೆಂದು ಅಲೆಸುತ್ತಾರೆ. ಆದರೆ, ಮಧ್ಯವರ್ತಿಗಳ ಮೂಲಕ ಹೋದರೆ ಕ್ಷಣರ್ಧಾದಲ್ಲಿ ಕೆಲಸವಾಗುತ್ತದೆ. ಲಂಚ ನೀಡದೆ ಇಲ್ಲಿ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ನರಭಕ್ಷಕರು!: ಪಾಲಿಕೆ ಅಧಿಕಾರಿಗಳು ನರಭಕ್ಷಕರಂತೆ ವರ್ತಿಸುತ್ತಿದ್ದಾರೆ. ಖಾತೆ ಬದಲಾವಣೆ, ಆಸ್ತಿ ತೆರಿಗೆ ಪಾವತಿ, ಮನೆ ನಿರ್ಮಾಣಕ್ಕೆ ಪರವಾನಗಿ ನೀಡುವುದೂ ಸೇರಿ ಯಾವುದೇ ಕೆಲಸಗಳಿಗೆ ದಾಖಲೆ ಸಮೇತ ಅರ್ಜಿ ಸಲ್ಲಿಸಿದರೂ, ದಾಖಲೆಗಳಲ್ಲಿ ಕೆಲವೊಂದನ್ನು ಲಪಟಾಯಿಸಿ ಅರ್ಜಿದಾರರನ್ನು ಅಲೆಸುತ್ತಾರೆ. ಹಣ ನೀಡಿದ ಮೇಲಷ್ಟೇ ಕೆಲಸ ಮಾಡಿಕೊಡುತ್ತಿದ್ದಾರೆ ಎಂದು ಶಿವಣ್ಣ ಹರಿಹಾಯ್ದರು.

ನಗರದಲ್ಲಿ ವಿವಿಧ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಜನ ಹೈರಾಣಾಗಿದ್ದಾರೆ. ಇಲಾಖೆಗಳ ನಡುವೆ ಪರಸ್ಪರ ಸಮನ್ವಯ ಇಲ್ಲದೆ ಕೆಲಸಗಳು ನಡೆಯುತ್ತಿದ್ದು ಪಾಲಿಕೆಯೋ, ಸ್ಮಾರ್ಟ್‌ಸಿಟಿಯೋ ಅಥವಾ ಲೋಕೋಪಯೋಗಿ ಇಲಾಖೆಯೋ ಎಂಬ ಗೊಂದಲ ಕಾಡುತ್ತಿದೆ. ಕೇವಲ ಎರಡೂ ಬದಿಯಲ್ಲಿದ್ದ ಚರಂಡಿಯ ಸ್ಲಾಬ್‌ಗಳನ್ನು ಮಾತ್ರ ಬದಲಾಯಿಸಿ, ಇಡೀ ಕಾಮಗಾರಿ ನಡೆಸಿರುವಂತೆ ಬಿಲ್ ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಲು ಮುಂದಾಗಿರುವುದಾಗಿ ಎಚ್ಚರಿಸಿದರು.

ಈ ಹಿಂದೆ ನಗರದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳೆಲ್ಲಿ? ಸ್ಮಾರ್ಟ್‌ಸಿಟಿ ಯೋಜನೆ ಅಡಿ ಎಲ್‌ಇಡಿ ದೀಪಗಳನ್ನು ಅಳವಡಿಸಿ ಬದಲಿಸಿರುವ ಬೀದಿದೀಪಗಳೆಲ್ಲಿ? ಶಿವಕುಮಾರ ಸ್ವಾಮೀಜಿ ವೃತ್ತದಿಂದ ಕೋತಿತೋಪು ರಸ್ತೆ ಮಾರ್ಗದಲ್ಲಿ ಅಳವಡಿಸಿದ್ದ ಸೋಲಾರ್ ದೀಪಗಳೆಲ್ಲಿ? ಎಂದು ಪ್ರಶ್ನಿಸಿದ ಶಿವಣ್ಣ, ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿಯಿಂದ ನಡೆದಿರುವ ಕಾಮಗಾರಿಗಳ ಬಗ್ಗೆ ಆರ್‌ಟಿಐ ಮೂಲಕ ಮಾಹಿತಿ ಪಡೆದು, ಅನ್ಯಾಯಗಳ ಬಗ್ಗೆ ಕರಪತ್ರ ಮುದ್ರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಭ್ರಷ್ಟಾಚಾರದ ಕೂಪವಾಗಿರುವ ಪಾಲಿಕೆ, ಸ್ಮಾರ್ಟ್‌ಸಿಟಿ ವಿರುದ್ಧ ಜನಾಂದೋಲನ ರೂಪಿಸುವುದಾಗಿ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜಯಸಿಂಹರಾವ್, ಹರೀಶ್, ಮದನ್‌ಸಿಂಗ್ ಹಾಜರಿದ್ದರು.

ಚಿನ್ನದ ತಗಡು ಹಾಕಬಹುದಿತ್ತು ! : ಕ್ಯಾತಸಂದ್ರ-ಗುಬ್ಬಿ ಗೇಟ್‌ವರೆಗಿನ ಹೊರವರ್ತುಲ ರಸ್ತೆ ಅಭಿವೃದ್ಧಿಗೆ 86 ಕೋ.ರೂ., ವೆಚ್ಚ ಮಾಡಲಾಗಿದೆ. 1 ಕಿ.ಮೀ.,ಗೆ 8-9 ಕೋ.ರೂ.,ನಂತೆ ವ್ಯಯಿಸಲಾಗಿದೆ. ಆ ದುಡ್ಡಿನಲ್ಲೇ ರಸ್ತೆಗೆ ಚಿನ್ನದ ತಗಡನ್ನೇ ಹಾಕಬಹುದಿತ್ತು. ಭ್ರಷ್ಟಾಚಾರದ ಕೂಪವಾಗಿರುವ ಪಾಲಿಕೆಯಲ್ಲಿ ಆಲಿಬಾಬ ಮತ್ತು ನಲವತ್ತು ಕಳ್ಳರಿದ್ದಾರೆ. ಅರ್ಹತೆಯೇ ಇಲ್ಲದ, ತಾಂತ್ರಿಕ ಪರಿಣಿತಿ ಹೊಂದಿಲ್ಲದವರನ್ನು ಕೆಲವು ಹುದ್ದೆಗಳಲ್ಲಿ ಕೂರಿಸಲಾಗಿದೆ ಎಂದು ಮಾಜಿ ಸಚಿವ ಸೊಗಡುಶಿವಣ್ಣ ಆರೋಪಿಸಿದರು.

ಪ್ರಸ್ತುತ ಪಾಲಿಕೆಯಲ್ಲಿ ಬಿಜೆಪಿಯದ್ದೇ ಆಡಳಿತ. ಮೇಯರ್ ಬಿಜೆಪಿ ಪಕ್ಷದವರಾಗಿದ್ದು ನಮ್ಮ ಪಕ್ಷದಲ್ಲೇನು ಸತ್ಯಹರಿಶ್ಚಂದ್ರರು ಇದ್ದಾರಾ? ಲಕ್ಷಗಟ್ಟಲೇ ಕೊಟ್ಟು ಬಂದಿದ್ದೀನಿ ಅಂತ ಜನರ ಮುಂದೆ ಆಯುಕ್ತೆ ಹೇಳುತ್ತಾರೆ ಅಂದರೆ ಇದೇ ಪಾಲಿಕೆ ಆಡಳಿತಕ್ಕೆ ಹಿಡಿದ ಕನ್ನಡಿ.
ಸೊಗಡು ಶಿವಣ್ಣ, ಮಾಜಿ ಸಚಿವ

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!

ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…