More

    ಪ್ರಧಾನಿ ಮೋದಿ ವಿಷ ಸರ್ಪ ಎಂಬ ಹೇಳಿಕೆ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ದಾಖಲು

    ಬೆಂಗಳೂರು: ಪ್ರಧಾನಿ ಮೋದಿ ವಿಷ ಸರ್ಪ ಎಂಬ ಹೇಳಿಕೆ ವಿರೋಧಿಸಿ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೂರು ಸಲ್ಲಿಸಿದ್ದಾರೆ.

    ಸೂಕ್ತ ಕ್ರಮಕ್ಕಾಗಿ ದೂರು

    ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ಮೋದಿಯನ್ನು ವಿಷದ ಹಾವು ಇದ್ದಂಗೆ. ವಿಷದ ಹಾವು ನೆಕ್ಕಿದ್ರೆ ಸತ್ತು ಹೋಗ್ತಾರೆ ಎಂದು ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮೋದಿಯವರ ಬಗ್ಗೆ ಹಗುರವಾಗಿ ಮಾತಾಡುತ್ತಿರುವುದನ್ನು ಖರ್ಗೆ ಮುಂದುವರಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ ಎಂದರು.

    ಇದನ್ನೂ ಓದಿ: ಮಾವಿನ ಹಣ್ಣುಗಳನ್ನು ಕದ್ದಿದ್ದ ಪೊಲೀಸ್​ ಅಧಿಕಾರಿಗೆ ಬಿಗ್​ ಶಾಕ್​: ಸೇವೆಯಿಂದಲೇ ವಜಾ

    ಗುಜರಾತ್​ ರೀತಿ ಕರ್ನಾಟಕದಲ್ಲೂ

    ಖರ್ಗೆ ಅವರ ಸಭೆಗಳಿಗೆ ತಡೆ ಕೊಡಬೇಕು. ವಿಷ ಸರ್ಪ ಎಂದಿರುವ ಖರ್ಗೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಇದೇ ರೀತಿ ಈ ಹಿಂದೆ ಗುಜರಾತಿನಲ್ಲಿ ಮೋದಿ ಅವರನ್ನು ರಾವಣ ಎಂದಿದ್ದರು. ಆಗ ಕಾಂಗ್ರೆಸ್‌ ಅಲ್ಲಿ ಅಡ್ರೆಸ್ ಇಲ್ಲದಂಗೆ ಆಗಿತ್ತು. ಈಗ ಕರ್ನಾಟಕದಲ್ಲಿ ಹಗುರವಾಗಿ ಮಾತನಾಡುವುದರಿಂದ ಇಲ್ಲೂ ಕಾಂಗ್ರೆಸ್ ಅಡ್ರೆಸ್ ಇಲ್ಲದೇ ರೀತಿ ಆಗುತ್ತದೆ ಎಂದು ಗುಡುಗಿದರು.

    ಖರ್ಗೆ ಯೂಟರ್ನ್​

    ಗದಗ ಜಿಲ್ಲೆ ರೋಣ ಪಟ್ಟಣದಲ್ಲಿಂದು ಮಲ್ಲಿಕಾರ್ಜುನ ಖರ್ಗೆ ಅವರು ಈ ಹೇಳಿಕೆ ನೀಡಿದ್ದರು. ಆದರೆ, ಮರುಕ್ಷಣದಲ್ಲೇ ತಮ್ಮ ಹೇಳಿಕೆಯನ್ನು ಬದಲಿಸಿದರು. ನಾನು ಮೋದಿಗೆ ಆ ರೀತಿ ಹೇಳಿಲ್ಲ, ಬಿಜೆಪಿ ಪಾರ್ಟಿ ಹಾವು ಇದ್ದಂಗೆ ಎಂದು ಹೇಳಿದ್ದೇನೆ. ವೈಯಕ್ತಿಕವಾಗಿ ನಾನು ಯಾರಿಗೂ ಹೇಳಿಲ್ಲ. ಯಾರು ಹೆಸರು ಹೇಳಿಲ್ಲ ಎಂದು ಖರ್ಗೆ ಯೂಟರ್ನ್​ ಹೊಡೆದಿದ್ದರು. (ದಿಗ್ವಿಜಯ ನ್ಯೂಸ್​)

    ಅಕ್ರಮ ಸಂಬಂಧ ಪ್ರಶ್ನಿಸಿದಕ್ಕೆ ಗೆಳತಿಯನ್ನೇ ಕೊಂದ ಆಟೋ ಚಾಲಕ

    ಮದುವೆಯಾಗಲು ನಿರಾಕರಣೆ; ಯುವತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪಾಗಲ್​ ಪ್ರೇಮಿ

    ಅಕ್ರಮ ಹಣ ವರ್ಗಾವಣೆ; ಚೀನಾ ಮೂಲದ ಶಿಕ್ಷಣ ಸಂಸ್ಥೆ ಮೇಲೆ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts