More

  ಅಭ್ಯರ್ಥಿ ಅಂತಿಮಗೊಳಿಸುವ ಹಂತಕ್ಕೆ ಬಿಜೆಪಿ: ದಿಲ್ಲಿಯಲ್ಲಿ ಸಭೆ, 5 ಕ್ಷೇತ್ರಗಳ ಬಗ್ಗೆ ಚರ್ಚೆ

  ನವದೆಹಲಿ: ಲೋಕಸಭೆ ಚುನಾವಣೆಗೆ ಈಗಾಗಲೇ 20 ಸೀಟುಗಳಲ್ಲಿ ಅಭ್ಯರ್ಥಿ ಘೋಷಣೆ ಮಾಡಿರುವ ಬಿಜೆಪಿ, 5 ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮಗೊಳಿಸುವ ಕುರಿತು ದಿಲ್ಲಿಯಲ್ಲಿ ಮಂಗಳವಾರ ತಡರಾತ್ರಿ ಮಹತ್ವದ ಸಭೆ ನಡೆಸಿದೆ.

  ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತಿತರ ನಾಯಕರು ಬಿಜೆಪಿ ದಿಲ್ಲಿ ವರಿಷ್ಠರ ಜತೆ ಸಭೆ ನಡೆಸಿದ್ದಾರೆ.

  ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡಲು ರಾಜ್ಯ ನಾಯಕರು ಮತ್ತು ವರಿಷ್ಠರು ವಿರೋಧಿಸಿರುವುದರಿಂದ ಚಕ್ರವರ್ತಿ ಸೂಲಿಬೆಲೆ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಹೆಸರು ಚರ್ಚೆಯಾಗಿದೆ. ಟಿಕೆಟ್​​​​ಗಾಗಿ ಅನಂತ್ ಹೆಗಡೆ ಭಾರೀ ಯತ್ನ ಮಾಡಿದ್ದಾರೆ. ಒಟ್ಟಿನಲ್ಲಿ ವರಿಷ್ಠರ ತೀರ್ಮಾನ ಕುತೂಹಲ ಮೂಡಿಸಿದೆ.

  ಬೆಳಗಾವಿ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರೂ, ಶೆಟ್ಟರ್ ಹೆಸರಿಗೆ ಪಕ್ಷದಲ್ಲಿ, ಸ್ಥಳೀಯ ಮಟ್ಟದಲ್ಲಿ ವ್ಯಾಪಕ ವಿರೋಧವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಗಾಗಿ ಖುದ್ದು ಶೆಟ್ಟರ್ ಕೂಡ ದಿಲ್ಲಿ ವರಿಷ್ಠರಿಗೆ ಟಿಕೆಟ್ ಖಚಿತಪಡಿಸುವ ಬಗ್ಗೆ ಮನವಿ ಮಾಡಿದ್ದಾರೆನ್ನಲಾಗಿದೆ.

  ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾಜಿ ಸಚಿವ ಡಾ. ಸುಧಾಕರ್ ಟಿಕೆಟ್ ಕೇಳಿದ್ದರೂ, ಬಿಜೆಪಿ ನಾಯಕ ಎಸ್ ಆರ್ ವಿಶ್ವನಾಥ್ ಅವರು ತಮ್ಮ ಪುತ್ರ ಅಲೋಕ್ ವಿಶ್ವನಾಥ್ ಗೆ ಕೊಡಿಸಲು ಭಾರಿ ಯತ್ನ ಮುಂದುವರಿಸಿದ್ದಾರೆ. ರಾಯಚೂರಿಗೆ ಬಿವಿ ನಾಯಕ್ ಮತ್ತು ಹಾಲಿ ಸಂಸದ ರಾಜಾ ಅಮರೇಶ್ವರ್ ನಾಯಕ್ ಮಧ್ಯೆ ಪೈಪೋಟಿಯಿದ್ದು, ಚಿತ್ರದುರ್ಗದಲ್ಲಿ ಹಾಲಿ ಸಂಸದ, ಕೇಂದ್ರ ಸಚಿವ ನಾರಾಯಣ ಸ್ವಾಮಿಗೆ ಮತ್ತೊಂದು ಅವಕಾಶ ಸಿಗುವುದೇ ಎನ್ನುವುದನ್ನು ಕಾದುನೋಡಬೇಕಿದೆ.

  ಕಾವೇರಿ ಹೆಚ್ಚುವರಿ ನೀರು ಕರ್ನಾಟಕ ಬಳಸಿಕೊಳ್ಳಬಹುದೇ?; ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts