More

    ಬಿಜೆಪಿ ಜಿಲ್ಲಾ ಕಚೇರಿ ಭವನಗಳ ನಿರ್ಮಾಣಕ್ಕೆ ಶಿಲಾನ್ಯಾಸ | ಕಾರ್ಯಕರ್ತರಲ್ಲಿ ಹುರುಪು ತುಂಬಿದ ನಡ್ಡಾ

    ಬೆಂಗಳೂರು: ಕರೊನಾ ಪಿಡುಗು ನಿಯಂತ್ರಣ, ಸಂಕಷ್ಟಕ್ಕೆ ಸಿಲುಕಿದವರಿಗೆ ಆಸರೆ, ಕೇಂದ್ರ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ. ಹೀಗೆ ಪ್ರತಿಯೊಂದು ಹಂತದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಆಡಳಿತ ಭಲೇ ಭೇಷ್ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆನ್ನು ತಟ್ಟಿದ್ದಾರೆ.

    ಪಕ್ಷದ 8 ಜಿಲ್ಲಾ ಹಾಗೂ 1 ಮಂಡಲ ಕಚೇರಿಗೆ ಸುಸಜ್ಜಿತ ಭವನ ನಿರ್ವಣಕ್ಕಾಗಿ ವರ್ಚುವಲ್ ರ‍್ಯಾಲಿ ಮೂಲಕ ಶುಕ್ರವಾರ ಏಕಕಾಲಕ್ಕೆ ಶಿಲಾನ್ಯಾಸ ನೇರವೇರಿಸಿದ ನಂತರ ಅವರು ಮಾತನಾಡಿದರು. ಮಾರಕ ಸೋಂಕು ನಿಯಂತ್ರಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ದಿಟ್ಟ ನಿರ್ಧಾರ, ದೂರದೃಷ್ಟಿಯ ಕ್ರಮಗಳನ್ನು ಕೈಗೊಂಡು ವಿಶ್ವಕ್ಕೆ ಮಾದರಿಯಾದರೆ, ಇದರಿಂದ ಸ್ಪೂರ್ತಿ ಪಡೆದ ಸಿಎಂ ಬಿಎಸ್​ವೈ ಹಲವಾರು ಮೇಲ್ಪಂಕ್ತಿ ಉಪ ಕ್ರಮಗಳನ್ನು ಕೈಗೊಂಡಿದ್ದಾರೆ. ಮುಖ್ಯವಾಗಿ ಕುಲಕಸಬು ಅವಲಂಬಿತರು, ಅಸಂಘಟಿತ, ಸಂಘಟಿತ ಕಾರ್ವಿುಕರಿಗೆ ಸಹಾಯಧನ, ಕರೊನಾ ವಾರಿಯರ್ಸ್​ಗೆ ಪೋ›ತ್ಸಾಹ, ಬೆಳೆ ನಷ್ಟ ಅನುಭವಿಸಿದ ಹೂ, ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ, ನೇಕಾರರಿಗೆ ವಾರ್ಷಿಕ ಪೋ›ತ್ಸಾಹಧನ ಮುಂತಾದ ಯೋಜನೆಗಳನ್ನು ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಗ್ಯಾಸ್ಟ್ರಿಕ್ ನಿಯಂತ್ರಣಕ್ಕೆ ಯೋಗಾಭ್ಯಾಸ

    ತಲಾ 25 ಲಕ್ಷ ರೂ. ದೇಣಿಗೆ

     ರಾಯಚೂರು ನಗರದಲ್ಲಿ ಬಿಜೆಪಿ ಜಿಲ್ಲಾ ಕಚೇರಿ ನಿರ್ಮಾಣಕ್ಕೆ ವೈಯಕ್ತಿಕವಾಗಿ 25 ಲಕ್ಷ ರೂ. ನೀಡುವುದಾಗಿ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು. ಕಟ್ಟಡ ನಿರ್ವಣಕ್ಕೆ ಸುಮಾರು 1.50 ಕೋಟಿ ರೂ. ಸಂಗ್ರಹಿಸಬೇಕಾಗಿದ್ದು, ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಹಾಗೂ ಮಾಜಿ ಶಾಸಕ ಮಾನಪ್ಪ ವಜ್ಜಲ್ ತಲಾ 25 ಲಕ್ಷ ರೂ. ವೈಯಕ್ತಿಕವಾಗಿ ನೀಡಲಿದ್ದಾರೆ ಎಂದರು.

    ಕಾರ್ಯಕರ್ತರಿಗೆ ಹುರುಪು: ಕೃಷಿ ಮೂಲ ಸವಲತ್ತು ಅಭಿವೃದ್ಧಿ, ಕೃಷಿ ಉತ್ಪನ್ನಗಳ ಸಾಗಣೆ, ಮಾರಾಟ, ಮೌಲ್ಯವರ್ಧನೆಗೆ ಪ್ರಧಾನಿ ಮೋದಿ 1 ಲಕ್ಷ ಕೋಟಿ ರೂ. ನಿಧಿ ಸ್ಥಾಪಿಸಿರುವುದು ರೈತಪರ ನಾಯಕ ಯಡಿಯೂರಪ್ಪ ಅವರಿಗೂ ಸಂತಸ ತಂದಿರುತ್ತದೆ ಎಂದ ನಡ್ಡಾ, ಲಾಕ್​ಡೌನ್ ಅವಧಿಯಲ್ಲಿ ಸಂಘಟನೆಯೇ ಸೇವೆ ಸಂಕಲ್ಪ ತೊಟ್ಟು ತೊಂದರೆಯಲ್ಲಿದ್ದ ಜನರಿಗೆ ಸಹಾಯಹಸ್ತ ಚಾಚಿದ ಪರಿ ಅನನ್ಯವಾಗಿದೆ. ಅದೇ ರೀತಿ ಆತ್ಮನಿರ್ಭರ ಭಾರತ ಯೋಜನೆ ಪರಿಪೂರ್ಣವಾಗಿ ಸಾಕಾರಗೊಳ್ಳುವುದಕ್ಕೆ ಕಾರ್ಯಕರ್ತರ ಪರಿಶ್ರಮ ಮಹತ್ವದ ಪಾತ್ರನಿರ್ವಹಿಸಲಿದೆ ಎಂದು ಹುರುಪು ತುಂಬಿದರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದಣಿವರಿಯದ ಪ್ರವಾಸ, ರಚನಾತ್ಮಕ ಚಟುವಟಿಕೆಗಳನ್ನು ಕೊಂಡಾಡಿದರು.

    ಎಲ್ಲೆಡೆ ಕಮಲ ಅರಳಲಿ

    ರಾಜ್ಯದಲ್ಲಿ ಗ್ರಾಪಂನಿಂದ ಹಿಡಿದು ಮುಂಬರುವ ಎಲ್ಲ ಹಂತದ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಕಾರ್ಯಕರ್ತರು ಪಣ ತೊಡಬೇಕು. ಆ ಮೂಲಕ ಎಲ್ಲ 224 ವಿಧಾನಸಭೆ ಕ್ಷೇತ್ರಗಳಲ್ಲಿ ಕಮಲ ಅರಳುವುದಕ್ಕೆ ಈಗಿನಿಂದಲೇ ಸಜ್ಜಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ನೀಡಿದರು.

    1 ವರ್ಷದಲ್ಲಿ ಪೂರ್ಣ: ಭೂಮಿ ಪೂಜೆ ನೆರವೇರಿಸಿದ ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಕೋಲಾರ, ಚಾಮರಾಜನಗರ ಜಿಲ್ಲಾ ಕಚೇರಿ ಭವನಗಳು ಹಾಗೂ ತಿಪಟೂರು ಮಂಡಲ ಭವನಗಳ ನಿರ್ಮಾಣ ಕಾರ್ಯ 1 ವರ್ಷದೊಳಗೆ ಪೂರ್ಣಗೊಳಿಸುವ ದೃಢ ಸಂಕಲ್ಪ ಮಾಡಿದ್ದು, ಕಾರ್ಯಕರ್ತರ ನಿಧಿಯಿಂದಲೇ ಈ ವೆಚ್ಚ ಭರಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಹೇಳಿದರು.

    ವರ್ಚುವಲ್ ಕಾರ್ಯಕ್ರಮದಲ್ಲಿ ದೆಹಲಿಯಿಂದ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಲ್ಹಾದ ಜೋಶಿ, ಪಕ್ಷದ ರಾಜ್ಯ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಜಿಲ್ಲಾ ಭವನಗಳ ನಿರ್ಮಾಣ ಸಮಿತಿ ರಾಜ್ಯ ಸಂಚಾಲಕ ಡಾ.ಮಾ.ನಾಗರಾಜ್, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರ ಪದಾಧಿಕಾರಿಗಳು ಇದ್ದರು.

    ಇದನ್ನೂ ಓದಿ: ರಾಜಸ್ಥಾನದಲ್ಲಿ ಕರ್ನಾಟಕದ ಟೆಕ್ನಿಕ್ ನಡೆಯಲಿಲ್ಲ: ಸಂಭ್ರಮಿಸಿದ ಗೆಹ್ಲೋಟ್​

    ಬಿಜೆಪಿಗೆ ಪರ್ಯಾಯವಿಲ್ಲ: ವಿಶ್ವದ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಮೋದಿ ನಾಯಕತ್ವದಲ್ಲಿ ಎಲ್ಲ ಸಮುದಾಯ ಹಾಗೂ ವರ್ಗಗಳ ಪ್ರೀತಿ, ವಿಶ್ವಾಸ ಗಳಿಸಿ ಇನ್ನಷ್ಟು ಬಲಿಷ್ಠವಾಗಿದ್ದು, ರಾಷ್ಟ್ರದಲ್ಲಿ ಬಿಜೆಪಿಗೆ ಪರ್ಯಾಯ ರಾಜಕೀಯ ಪಕ್ಷಗಳಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅಧಿಕೃತ ನಿವಾಸ ಕಾವೇರಿಯಿಂದಲೇ ವರ್ಚುವಲ್ ವೇದಿಕೆ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಷ್ಠಾವಂತ ಕಾರ್ಯಕರ್ತರೇ ಪಕ್ಷದ ಜೀವಾಳ. ಪಕ್ಷದ ಕಚೇರಿಗಳು ಸ್ವಂತ ಕಟ್ಟಡ ಹೊಂದುವುದರಿಂದ ಪೋ›ತ್ಸಾಹ ಮತ್ತು ಶಕ್ತಿ ತುಂಬುತ್ತವೆ ಎಂದರು. ಪಕ್ಷದ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ, ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಪರಿಕಲ್ಪನೆಯಂತೆ ಭವನಗಳು ನಿರ್ವಣವಾಗುತ್ತಿದ್ದು, ತಾಲೂಕು ಕಚೇರಿಗಳು ಇದೇ ರೀತಿ ಸ್ವಂತ ಕಟ್ಟಡ ಹೊಂದಬೇಕು ಎಂಬುದು ತಮ್ಮಅಪೇಕ್ಷೆಯಾಗಿದೆ ಎಂದು ಬಿಎಸ್​ವೈ ಹೇಳಿದರು.

    ಸಿಆರ್​ಪಿಎಫ್​ ಅಧಿಕಾರಿಗೆ ಸಿಗ್ತಾ ಇರುವ ಏಳನೇ ಗ್ಯಾಲಂಟರಿ ಮೆಡಲ್ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts