More

    ಸಿಆರ್​ಪಿಎಫ್​ ಅಧಿಕಾರಿಗೆ ಸಿಗ್ತಾ ಇರುವ ಏಳನೇ ಗ್ಯಾಲಂಟರಿ ಮೆಡಲ್ ಇದು…

    ನವದೆಹಲಿ: ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್​ (ಸಿಆರ್​ಪಿಎಫ್​)ನ ಅಧಿಕಾರಿಯೊಬ್ಬರು ಕೇವಲ ನಾಲ್ಕೇ ವರ್ಷದಲ್ಲಿ ಏಳನೇ ಗ್ಯಾಲಂಟರಿ ಮೆಡಲ್​ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸಿಆರ್​ಪಿಎಫ್​ನ ಅಸಿಸ್ಟಂಟ್ ಕಮಾಂಡೆಂಟ್​ ನರೇಶ್ ಕುಮಾರ್ ಈ ಸಾಧಕ. ಸಿಆರ್​ಪಿಎಫ್​ ಈ ವರ್ಷ ಈಗಾಗಲೇ 55 ಗ್ಯಾಲಂಟರಿ ಮೆಡಲ್​ಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ 2,035 ಗ್ಯಾಲಂಟರಿ ಪದಕಗಳು ಸಿಆರ್​ಪಿಎಫ್​ ತೆಕ್ಕೆ ಸೇರಿವೆ.

    ಮೂವತ್ತೈದು ವರ್ಷ ವಯಸ್ಸಿನ ಅವರು, ಏಳನೇ ಗ್ಯಾಲಂಟರಿ ಪೊಲೀಸ್ ಮೆಡಲ್​(ಪಿಎಂಜಿ) ಸ್ವೀಕರಿಸಲಿದ್ದು, ಆ ಮೂಲಕ ಮತ್ತೊಂದು ಇತಿಹಾಸವನ್ನು ಸೃಷ್ಟಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಿಕ್ಕ ಮೆಡಲ್​ಗಳಿವು. ಇದು ಅವರನ್ನು ಅತಿ ಹೆಚ್ಚು ಪದಕ ಗಿಟ್ಟಿಸಿಕೊಂಡ ಯುವ ಅಧಿಕಾರಿ ಎಂಬ ಕೀರ್ತಿಗೆ ಭಾಜನರನ್ನಾಗಿ ಮಾಡಿದೆ.

    ಇದನ್ನೂ ಓದಿ: ಗ್ಯಾಸ್ಟ್ರಿಕ್ ನಿಯಂತ್ರಣಕ್ಕೆ ಯೋಗಾಭ್ಯಾಸ

    ನರೇಶ್ ಕುಮಾರ್ ಅವರು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ವ್ಯಾಲಿ ಕ್ವಿಕ್​ ಆ್ಯಕ್ಷನ್ ಟೀಮ್​ ಅನ್ನು ಮುನ್ನಡೆಸುತ್ತಿದ್ದು, ಈ ವರ್ಷ ಒಂದರಲ್ಲೇ ಇವರ ತಂಡ 15 ಗ್ಯಾಲೆಂಟರಿ ಮೆಡಲ್​ಗಳಿಗೆ ಭಾಜನವಾಗಿದೆ. ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಈ ಅಧಿಕಾರಿ ಮಾಡಿರುವ ಸಾಹಸ, ಸಾಧನೆಗಳು ಸಿಆರ್​ಪಿಎಫ್​ ಇತಿಹಾಸದ ಪುಟಗಳಲ್ಲಿ ಮೈಲಿಗಲ್ಲು ಸ್ಥಾಪಿಸಿದೆ ಎಂದು ಸಿಆರ್​ಪಿಎಫ್ ಹೇಳಿಕೊಂಡಿದೆ.

    ಇದನ್ನೂ ಓದಿ: ರಾಜಸ್ಥಾನದಲ್ಲಿ ಕರ್ನಾಟಕದ ಟೆಕ್ನಿಕ್ ನಡೆಯಲಿಲ್ಲ: ಸಂಭ್ರಮಿಸಿದ ಗೆಹ್ಲೋಟ್​

    ನರೇಶ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಶ್ರೀನಗರದಲ್ಲಿ 2016ರಲ್ಲಿ ನಡೆಸಿದ ಕಾರ್ಯಾಚರಣೆಗೆ 2017ರಲ್ಲಿ ಮೊದಲ ಗ್ಯಾಲೆಂಟರಿ ಅವಾರ್ಡ್ ಬಂತು. ಈ ಕಾರ್ಯಾಚರಣೆಯಲ್ಲಿ ಇಬ್ಬರು ವಿದೇಶಿ ಉಗ್ರರನ್ನು ನಾವು ನಿರ್ಮೂಲನಗೊಳಿಸಿದ್ದೆವು. ಇದೇ ರೀತಿ, 2018ರಲ್ಲಿ ನನಗೆ ಎರಡು ಗ್ಯಾಲಂಟರಿ ಮೆಡಲ್​ಗಳು ಸಿಕ್ಕವು. ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್​ ಉಗ್ರರನ್ನು ಹೊಡೆದುರುಳಿಸಿದ ಕಾರಣಕ್ಕೆ ಈ ಮೆಡಲ್​ಗಳು ಸಿಕ್ಕವು. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಂದರ್ಭದಲ್ಲಿ ಈ ಗ್ಯಾಲಂಟರಿ ಮೆಡಲ್​ಗಳನ್ನು ಪ್ರದಾನ ಮಾಡಿದ್ದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)

    ಕರ್ನಾಟಕದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts