More

    ಗ್ಯಾಸ್ಟ್ರಿಕ್ ನಿಯಂತ್ರಣಕ್ಕೆ ಯೋಗಾಭ್ಯಾಸ

    ಗ್ಯಾಸ್ಟ್ರಿಕ್ ನಿಯಂತ್ರಣಕ್ಕೆ ಯೋಗಾಭ್ಯಾಸನನ್ನ ತಾಯಿಗೆ 62 ವರ್ಷ. 22 ವರ್ಷದಿಂದ ಗ್ಯಾಸ್ಟ್ರಿಕ್, ಅಸಿಡಿಟಿಯಿಂದ ಬಳಲುತ್ತಿದ್ದಾರೆ. ವೈದ್ಯರ ಉಪಚಾರ ಮಾಡಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಪರಿಹಾರಕ್ಕಾಗಿ ಸೂಕ್ತ ಯೋಗಾಸನಗಳನ್ನು ಸೂಚಿಸಿ.
    | ಸುಷ್ಮಾ ಶೆಟ್ಟಿ ಊರು ಬೇಡ

    ಹೊಟ್ಟೆಯಲ್ಲಿ ಸುಡುವ ಸಂವೇದನೆಯ ಹೈಡ್ರೋಕ್ಲೋರಿಕ್ ಆಮ್ಲದ (ಎಚ್​ಸಿಎಲ್) ಅತಿಯಾದ ಸ್ರವಿಸುವಿಕೆಯಿಂದ ಅಸಿಡಿಟಿ ಉಂಟಾಗುತ್ತದೆ. ಇದು ದೀರ್ಘಕಾಲದವರೆಗೆ ಹೊಟ್ಟೆಯ ಒಳಪದರವನ್ನು ನಾಶಪಡಿಸುತ್ತದೆ. ಯೋಗವು ಆಮ್ಲೀಯತೆಯನ್ನು ಸಮತೋಲನದಲ್ಲಿಡುವುದು. ಜೀರ್ಣಕಾರಿ ವ್ಯವಸ್ಥೆಯನ್ನು ಬಲಪಡಿಸುತ್ತದೆ.

    ಸೂಚಿತ ಆಸನಗಳು: ಪವನಮುಕ್ತಾಸನ, ಸೇತುಬಂದ, ಹಲಾಸನ, ಉತ್ಥಿತ ಏಕಪಾದಾಸನ, ವಜ್ರಾಸನ, ಶಶಾಂಕಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ಪಶ್ಚಿಮೋತ್ಥಾನಾಸನ, ಅರ್ಧ ಉಷ್ಟ್ರಾಸನ, ಶವಾಸನ, ಮಲಗಿಕೊಂಡು ತಿರುಚುವಿಕೆಯ ವ್ಯಾಯಾಮಗಳು, ಪ್ರಾಣಾಯಾಮ, ಬೆಳಗ್ಗೆ-ಸಂಜೆ ತಲಾ ಹತ್ತು ನಿಮಿಷದಂತೆ ಧ್ಯಾನ ಅಭ್ಯಾಸ ಮಾಡಿ. ಜತೆಗೆ ಪ್ರಾಣಮುದ್ರೆಯಲ್ಲಿ ಅಗ್ನಿ ಪಂಚಾಕ್ಷರಿ ಮಂತ್ರ ಓಂ ಅಗ್ನಿಂ ಶಿವಾಯ ನಮಃ ಎಂದು 108 ಬಾರಿ ಪಠಿಸಿ. ವಾಯುಮುದ್ರೆ ಇಪ್ಪತ್ತು ನಿಮಿಷ ಮಾಡಿ. ಚಿಂತೆ ಮಾಡಬೇಡಿ.

    ಜಠರದ ಉರಿ ಸಮಸ್ಯೆಯನ್ನು ತಪ್ಪಿಸಲು ಉಪಯುಕ್ತ ಸಲಹೆಗಳು: ಯೋಗದ ಜತೆಗೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಮಸಾಲೆಯುಕ್ತ ಆಹಾರ ಸೇವಿಸುವುದನ್ನು ತಪ್ಪಿಸಿ. ಹಸಿವಾಗಿದ್ದಾಗ ಮಾತ್ರ ಆಹಾರ ಸೇವಿಸಿ. ಆಹಾರಸೇವನೆ ಸಂದರ್ಭದಲ್ಲಿ ತುಟಿ ಮುಚ್ಚಿ ಜಗಿದು, ತಿನ್ನಿ. ಜೀರ್ಣಿಸಿಕೊಳ್ಳಲು ಸುಲಭವಾದ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ. ಅತಿಯಾದ ಹುಳಿ, ಖಾರ, ಮಸಾಲೆ ಬೇಡ. ಹಣ್ಣುಗಳಲ್ಲಿ ಬಾಳೆಹಣ್ಣು, ಆಪಲ್, ಚೆರ್ರಿ ಹಣ್ಣುಗಳು ಹಾಗೂ ಹಸಿರು ತರಕಾರಿ ಸೇವಿಸಿ. ತೆಂಗಿನ ನೀರು, ಕ್ಯಾರೆಟ್ ರಸ, ಪಾಲಕ್ ರಸ, ಸೇವಿಸಿ. ಇದನ್ನೂ ಓದಿ: ಯೋಗಕ್ಷೇಮ | ಮನಸ್ಸಿಗೆ ಶಾಂತತೆ ಮತ್ತು ಸ್ಥಿರತೆಗೆ ಪ್ರಾಣಾಯಾಮ

    ಸಂಪೂರ್ಣ ಪವನ ಮುಕ್ತಾಸನದ ಬಗ್ಗೆ ತಿಳಿಸಿ.
    | ಜಾನಕಿ 48 ವರ್ಷ, ಬೆಳಗಾವಿ

    ಪವನ ಮುಕ್ತಾಸನ ಗಾಳಿ ನಿವಾರಿಸುವ ಭಂಗಿ, ಗಾಳಿ ತೆಗೆಯುವ ಭಂಗಿ ಅಥವಾ ಗಾಳಿ ವಿಮೋಚನೆ ಭಂಗಿಯಾಗಿದೆ. ಪವನ ಎಂದರೆ ಗಾಳಿ, ಮುಕ್ತ ಎಂದರೆ ನಿವಾರಿಸು ಅಥವಾ ಬಿಡುಗಡೆ. ಈ ಭಂಗಿಯು ಕರುಳು ಮತ್ತು ಹೊಟ್ಟೆಯಿಂದ ಜೀರ್ಣಾಕಾರಿ ಅನಿಲಗಳನ್ನು ಬಹಳ ಸುಲಭವಾಗಿ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿ ಸರಿಯಾದ ರಕ್ತ ಪರಿಚಲನೆಯೊಂದಿಗೆ ನರಮಂಡಲವನ್ನು ಶಾಂತಗೊಳಿಸುತ್ತದೆ. ಇದನ್ನೂ ಓದಿ: ಯೋಗಕ್ಷೇಮ: ಅಧಿಕ ರಕ್ತದೊತ್ತಡ ತಡೆಗೆ ಯೋಗ-ಮುದ್ರೆ

    ವಿಧಾನ: ಜಮಖಾನ ಹಾಸಿದ ನೆಲದ ಮೇಲೆ ಮಲಗಿ, ಎರಡೂ ಕೈಗಳ ಸಹಾಯದಿಂದ ಎರಡೂ ಕಾಲುಗಳನ್ನು ಜೋಡಿಸಿ ಮಡಚಿ ಉಸಿರನ್ನು ತೆಗೆದುಕೊಂಡು ಮೊಣಕಾಲುಗಳನ್ನು ಎದೆಯ ಹತ್ತಿರ ತಂದು ಗಲ್ಲಕ್ಕೆ ರ್ಸ³ಸಿ, ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸುತ್ತ ಅನಂತರ ಬಿಡುತ್ತ ಕಾಲುಗಳನ್ನು ಬಿಡುಗಡೆಗೊಳಿಸಿ. ಸುಮಾರು ಮೂರರಿಂದ ಐದು ಬಾರಿ ಅಭ್ಯಾಸ ಮಾಡಿ.
    ವಿಶೇಷ ಸೂಚನೆ: ಅಧಿಕ ರಕ್ತದೊತ್ತಡ ಇದ್ದವರು ಈ ಆಸನದ ಅಭ್ಯಾಸ ಮಾಡುವುದು ಬೇಡ.

    ಯೋಗಕ್ಷೇಮ: ಸಮರ್ಥ ಪಿನಿಯಲ್ ಗ್ರಂಥಿಗಾಗಿ ಸೂರ್ಯಪಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts