More

    ರಾಜಸ್ಥಾನ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್​​; ಗೆಹ್ಲೋಟ್​ ಸರ್ಕಾರ ಉಳಿಸಲು ಪಣ ತೊಟ್ಟ ಬಿಜೆಪಿ ನಾಯಕಿ !

    ಜೈಪುರ: ರಾಜಸ್ಥಾನ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಒಂದೆಡೆ ಕಾಂಗ್ರೆಸ್​​ನಲ್ಲಿ ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಲಟ್​ ಬಣಗಳ ನಡುವಿನ ಹೋರಾಟ ಹೈಕೋರ್ಟ್​ ಮೆಟ್ಟಿಲೇರಿದೆ.

    ಈಗ ಇನ್ನೊಂದೆಡೆ ಬಿಜೆಪಿಯ ಮೈತ್ರಿ ಪಕ್ಷ ವಸುಂಧರಾ ರಾಜೆ ಅವರ ವಿರುದ್ಧವೇ ಗಂಭೀರ ಆರೋಪ ಮಾಡಿದೆ. ಬಿಜೆಪಿ ಮೈತ್ರಿ ಪಕ್ಷವಾದ ರಾಷ್ಟ್ರೀಯ ಲೋಕ್​ತಾಂತ್ರಿಕ್​ ಪಾರ್ಟಿ ಅಧ್ಯಕ್ಷ ಹನುಮಾನ್​ ಬೆನಿವಾಲ್ ಅವರು ಟ್ವೀಟ್​ ಮೂಲಕ ರಾಜಸ್ಥಾನ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಪ್ರಮುಖ ನಾಯಕಿ ವಸುಂಧರಾ ರಾಜೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
    ವಸುಂಧರಾ ರಾಜೆ ಅವರು ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಉಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹನುಮಾನ್​ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕರೊನಾ ಮಣಿಸಿ ಮನೆಗೆ ಮರಳಿದ 103 ವರ್ಷದ ಅಜ್ಜಿಗೆ ಎದುರಾಗಿದ್ದು ನೋವು; ಸಂಕಟ ತೋಡಿಕೊಂಡ ಮೊಮ್ಮಗಳು

    ರಾಜೆ ಹಾಗೂ ಗೆಹ್ಲೋಟ್​ಗೆ ತಮ್ಮಿಬ್ಬರ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಬೇಕಾದರೆ ಪರಸ್ಪರ ಸಹಕಾರ ಕೊಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ವಸುಂಧರಾ ರಾಜೆ ಅವರು ಕಾಂಗ್ರೆಸ್​ ಶಾಸಕರನ್ನು ಕರೆದು, ಪ್ರತಿಯೊಬ್ಬರೂ ಅಶೋಕ್ ಗೆಹ್ಲೋಟ್ ಅವರಿಗೆ ಬೆಂಬಲ ನೀಡುವಂತೆ ಸೂಚಿಸಿದ್ದಾರೆ. ರಾಜೆ ಅವರು ಹೀಗೆ ಮಾಡಿದ್ದಾರೆ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದು ಹನುಮಾನ್​ ಹೊಸ ಬಾಂಬ್​ ಸಿಡಿಸಿದ್ದಾರೆ.

    ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟುಗಳ ಮಧ್ಯೆ ಬಿಜೆಪಿ ಎರಡು ಮೂರು ಸಭೆಗಳನ್ನು ಕರೆದಿತ್ತು. ವಸುಂಧರಾ ರಾಜೆಯವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅವರು ಒಂದೂ ಸಭೆಗೆ ಆಗಮಿಸಿರಲಿಲ್ಲ. ಇದರ ಬೆನ್ನಲ್ಲೇ ಹನುಮಾನ್​ ಬೆನಿವಾಲ್ ಈ ಹೊಸ ಬಾಂಬ್​ ಸಿಡಿಸಿದ್ದಾರೆ. (ಏಜೆನ್ಸೀಸ್)

    ಎನ್​ಕೌಂಟರ್​ಗೆ ಬಲಿಯಾದ ವಿಕಾಸ್​ ದುಬೆ ಸಹಚರನ ವಯಸ್ಸು ಕೇವಲ ಹದಿನಾರು; ಪಿಯುಸಿನಲ್ಲಿ ಫಸ್ಟ್ ಕ್ಲಾಸ್…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts