More

    ಕರೊನಾ ಮಣಿಸಿ ಮನೆಗೆ ಮರಳಿದ 103 ವರ್ಷದ ಅಜ್ಜಿಗೆ ಎದುರಾಗಿದ್ದು ನೋವು; ಸಂಕಟ ತೋಡಿಕೊಂಡ ಮೊಮ್ಮಗಳು

    ವೆಲ್ಲೂರು: 103 ವರ್ಷದ ವೃದ್ಧೆ ಹಮೀದಾ ಅವರು ಕರೊನಾ ಸೋಂಕಿನಿಂದ ಮುಕ್ತರಾಗಿ ಮನೆಗೆ ಬಂದಾಗ ಅವರ ಕುಟುಂಬದವರೆಲ್ಲ ನಿಟ್ಟುಸಿರು ಬಿಟ್ಟರು. ಅದೆಷ್ಟೋ ಜನರು ವೈರಸ್ ವಿರುದ್ಧ ಹೋರಾಡಲು ಸಾಧ್ಯವಾಗದೆ ಸಾವನ್ನಪ್ಪುತ್ತಿದ್ದಾರೆ. ಅಂಥದ್ದರಲ್ಲಿ 100 ವರ್ಷದ ದಾಟಿದ ವೃದ್ಧೆ ಯಶಸ್ವಿಯಾಗಿ ಕರೊನಾ ಮಣಿಸಿದ್ದು ಸುತ್ತಲೂ ಸುದ್ದಿಯೂ ಆಗಿದೆ.

    ಆದರೆ ಆಕೆ ಮನೆಗೆ ವಾಪಸ್​ ಬಂದರು ಎಂಬ ಖುಷಿ ತುಂಬ ಹೊತ್ತು ಇರಲಿಲ್ಲ. ಹಮೀದಾ ಸೇರಿ ಅವರ ಇಡೀ ಮನೆಯವರು ಶಾಕ್​ಗೆ ಒಳಗಾಗುವಂತಹ ಸಂದರ್ಭ ಎದುರಾಯಿತು.

    ತಮಿಳುನಾಡಿನ ವೆಲ್ಲೋರ್​​ನಲ್ಲಿ ವಿಧವೆ ಮಗಳು ಮತ್ತು ಮೊಮ್ಮಗಳೊಂದಿಗೆ ವಾಸವಾಗಿದ್ದ ಹಮೀದಾ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಂಪೂರ್ಣ ಗುಣಮುಖರಾಗಿ ಅವರು ಮನೆಗೆ ಬಂದಾಗ ನೆರೆಮನೆಯವರು ಆಕ್ಷೇಪ ವ್ಯಕ್ತಪಡಿಸಲು ಶುರುಮಾಡಿದರು.

    ಸುಮಾರು 15ವರ್ಷಗಳಿಂದಲೂ ಅಕ್ಕಪಕ್ಕದ ಮನೆಗಳಲ್ಲಿ ಇವರೆಲ್ಲ ವಾಸಿಸುತ್ತಿದ್ದರು. ಹಮೀದಾ ಅವರ ಮನೆಯವರೊಂದಿಗೆ ಸ್ನೇಹದಿಂದಲೇ ಇದ್ದವರು, ಇದೀಗ ಹಮೀದಾ ಅವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡ ತಕ್ಷಣ ಬದಲಾಗಿಬಿಟ್ಟರು. ಕಾಯಿಲೆಯಿಂದ ಚೇತರಿಸಿಕೊಂಡು ಬಂದರೂ ನೀವು ಈ ಮನೆಯನ್ನು ಖಾಲಿ ಮಾಡಿ..ನಿಮ್ಮಿಂದಾಗಿ ನಮಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲು ಶುರುಮಾಡಿದರು. ಇದನ್ನೂ ಓದಿ: ವಯಸ್ಸಾದ ಅಪ್ಪನನ್ನು ಹೊರಗೆ ಕರೆದುಕೊಂಡು ಹೋಗಲು ಭಯ ಎಂದು ತಾವೇ ಶೇವಿಂಗ್​ ಮಾಡಿದ ಹಾಸ್ಯನಟ

    ಹಮೀದಾ ಅವರ ಮೊಮ್ಮಗಳಾದ ಶಮಾ ಅವರೊಬ್ಬರೇ ದುಡಿದು ಇಡೀ ಕುಟುಂಬವನ್ನು ಸಾಕುತ್ತಿದ್ದಾಳೆ. ಅವಳನ್ನು ಬಿಟ್ಟರೆ ಆ ಕುಟುಂಬಕ್ಕೆ ಇನ್ಯಾರೂ ಗತಿಯಿಲ್ಲ. ಇದೀಗ ಒಂದೇ ಸಮ ನೆರೆಹೊರೆಯವರೆಲ್ಲ ಇಲ್ಲಿಂದ ಮನೆಬಿಟ್ಟು ಹೋಗಿ ಎಂದು ಪೀಡಿಸುತ್ತಿದ್ದಾರೆ.
    ಈ ಬಗ್ಗೆ ಶಮಾ ಅವರು ಮಾಧ್ಯಮವೊಂದರ ಎದುರು ದುಃಖ ತೋಡಿಕೊಂಡಿದ್ದಾರೆ. ನಾವಿಲ್ಲಿ 15 ವರ್ಷಗಳಿಂದ ವಾಸಿಸುತ್ತಿದ್ದೇವೆ. ಇದೀಗ ಅಜ್ಜಿಗೆ ಕರೊನಾ ಬಂದಿತ್ತು ಎಂಬ ಕಾರಣಕ್ಕೆ ಎಲ್ಲರೂ ಮನೆ ಖಾಲಿ ಮಾಡುವಂತೆ, ಏರಿಯಾನೇ ಬಿಟ್ಟು ಹೋಗಿ ಎಂದು ಒತ್ತಾಯಿಸುತ್ತಿದ್ದಾರೆ. ಎಲ್ಲಿಗೆ ಹೋಗಬೇಕು ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: video/ ಬೆಡ್​ ಸಿಗದಿದ್ದಕ್ಕೆ ಹೆಂಡ್ತಿ, ಮಕ್ಕಳ ಜತೆ ಸಿಎಂ ಮನೆಗೆ ಬಂದ ಕರೊನಾ ಸೋಂಕಿತ!

    ಇಲ್ಲಿನ ಯಾವುದೇ ಅಂಗಡಿಗೆ ಹೋದರೂ ನಮಗೆ ಪ್ರವೇಶ ಕೊಡುತ್ತಿಲ್ಲ. ನಿತ್ಯ ಸಾಮಗ್ರಿಗಳನ್ನು ಖರೀದಿಸುವುದೇ ಕಷ್ಟವಾಗುತ್ತಿದೆ ಎಂದಿದ್ದಾರೆ.  ಡಿಎಂಕೆ ಶಾಸಕ ವಿಲ್ವನಾಥನ್​ ಅವರು ಹಮೀದಾ ಅವರ ಕುಟಂಬದ ಸಂಕಷ್ಟಕ್ಕೆ ಮಿಡಿದಿದ್ದಾರೆ. ಅಗತ್ಯ ವಸ್ತುಗಳನ್ನು ಒದಗಿಸಿದ್ದಲ್ಲದೆ, 5000 ರೂ.ನೀಡಿದ್ದಾರೆ. (ಏಜೆನ್ಸೀಸ್​)

    ಲಂಚ ಸ್ವೀಕರಿಸುವಾಗ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಲೆಡ್ಜರ್​ ಕೀಪರ್​ ಎಸಿಬಿ ಬಲೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts