More

    ಬಿರಿಯಾನಿ, ಬಟರ್​ ನಾನ್​, ಮಸಾಲೆ ದೋಸೆ…! ಗೆದ್ದಿದ್ಯಾರು..?

    ನವದೆಹಲಿ: ಕರೊನಾ ಸಂಕಷ್ಟ ಹಾಗೂ ಲಾಕ್​ಡೌನ್​ ಪರಿಣಾಮದಿಂದಾಗಿ ಹಲವರಿಗೆ ತ್ಮ ಊಟವನ್ನು ತಾವೇ ಬೇಯಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ, ಇದರ ಸಹವಾಸವೇ ಬೇಡ ಎನ್ನುವವರು ಆನ್​ಲೈನ್ ಫುಡ್​ ಡೆಲಿವರಿಗೆ ಮೊರೆ ಹೋಗಬೇಕಾಯಿತು.

    ಅಂತೆಯೇ, ಆನ್​ಲೈನ್​ನಲ್ಲಿ ಊಟ ತರಿಸುವವರ ಅಚ್ಚುಮೆಚ್ಚಿನ ಖಾದ್ಯ ಯಾವುದು ಗೊತ್ತೆ? ಬಿರಿಯಾನಿ..! ಸ್ವಿಗ್ಗಿ ಪ್ರಕಟಿಸುವ ವರದಿ ಪ್ರಕಾರ ಗ್ರಾಹಕರು ಒಟ್ಟಾರೆ 5.5 ಲಕ್ಷ ಬಾರಿ ರೆಸ್ಟೊರಂಟ್​ಗಳಿಂದ ಬಿರಿಯಾನಿ ತರಿಸಿಕೊಂಡಿದ್ದಾರೆ.

    ಇದನ್ನೂ ಓದಿ; ಕರೊನಾ ಭಯವೇ ಇವರಿಗೆ ಬಂಡವಾಳ; ಮನೆಗೆ ಬರೋರ ಬಗ್ಗೆ ಇರಲಿ ಎಚ್ಚರ..! 

    ಕರೊನಾ ಸಂಕಷ್ಟ ಹಾಗೂ ಲಾಕ್​ಡೌನ್​ ಮೊದಲಾದವುಗಳಿಂದ ಹೊಸ ಬದಲಾವಣೆಗಳು ಕಂಡು ಬಂದಿರಬಹುದು. ಆದರೆ, ಊಟದ ಮೇಲಿನ ಪ್ರೀತಿ ಅದರಲ್ಲೂ ಬಿರಿಯಾನಿ ಮನಸೋಲುವ ಪ್ರವೃತ್ತಿ ಮಾತ್ರ ಬದಲಾಗಿಲ್ಲ ಎನ್ನುತ್ತದೆ ಸಂಸ್ಥೆ. ಸತತ ನಾಲ್ಕು ವರ್ಷಗಳಿಂದ ಬಿರಿಯಾನಿಯೇ ಅಗ್ರಸ್ಥಾನದಲ್ಲಿದೆ.

    ಇನ್ನು, ಎರಡನೇ ಸ್ಥಾನದಲ್ಲಿರೊದು ಬಟರ್​ ನಾನ್​ ನಂತರದ ಸ್ಥಾನ ಮಸಾಲೆ ದೋಸೆಗೆ ಒಲಿದಿದೆ. 3,35, 185 ಬಟರ್​ ನಾನ್​ನಗಳಿಗೆ ಆರ್ಡರ್​ ಬಂದಿದ್ದರೆ, ಮಸಾಲೆ ದೋಸೆಗೆ ಮನಸೋತವರು 3,31423 ಜನ.

    ಇದನ್ನೂ ಓದಿ; ಮಾತಿನಲ್ಲಿಯೇ ಪಾಲಿಕೆ ಅಧಿಕಾರಿಗಳ ಬೆವರಿಳಿಸಿದ ಬೀದಿಬದಿ ವ್ಯಾಪಾರಿ; ಅಸಡ್ಡೆ ಬೇಡ ಈಕೆ ಪಿಎಚ್​ಡಿ ಪದವೀಧರೆ..!

    ಇನ್ನು ಸಿಹಿ ಖಾದ್ಯಗಳ ವಿಚಾರದಲ್ಲಿ ಹೇಳುವುದಾದರೆ, ಲಾವಾ ಕೇಕ್​ 1.29 ಲಕ್ಷ, ಗುಲಾಬ್​ ಜಾಮೂನ್​ 84,558, ಬಟರ್​ಸ್ಕಾಚ್​ ಮೌಸ್ಸಿ ಕೇಕ್​ 27,317 ಹೆಚ್ಚು ಗ್ರಾಹಕರನ್ನು ಪಡೆದಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಪ್ರತಿದಿನ ರಾತ್ರಿ ಎಂಟು ಗಂಟೆಗೆಲ್ಲ ಸರಾಸರಿ 65,000 ಊಟಗಳ ಆರ್ಡರ್​ ಸ್ವೀಕೃತವಾಗುತ್ತಿತ್ತು ಎಂದು ಸ್ವಿಗ್ಗಿ ತಿಳಿಸಿದೆ.

    ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts