More

    ವಾಯುಸೇನೆಯ ಬಲಾಢ್ಯ ರಫೇಲ್​ ಯುದ್ಧ ವಿಮಾನಗಳಿಗೆ ಎದುರಾಗಿದೆ ಆಪತ್ತು…!

    ಅಂಬಾಲಾ(ಹರಿಯಾಣಾ): ಫ್ರಾನ್ಸ್​ ನಿರ್ಮಿತ ಯುದ್ಧ ವಿಮಾನ ರಫೇಲ್​ ಸೇರ್ಪಡೆಯಾಗಿರುವುದು ಭಾರತೀಯ ವಾಯುಪಡೆಗೆ ಭಾರಿ ಬಲವನ್ನೇ ತಂದಿದೆ. ಜತೆಗೆ, ನೆರೆ ರಾಷ್ಟ್ರಗಳಲ್ಲಿ ಭೀತಿಯನ್ನು ಮೂಡಿಸಿದೆ. ಅಂಥ ವಿಮಾನಗಳಿಗೆ ಈಗ ಆಪತ್ತು ಎದುರಾಗಿದೆ.

    ಹೌದು…! ವಿಮಾನಗಳಿಗೆ ಎದುರಾಗಿರುವ ಆಪತ್ತಿನ ಬಗ್ಗೆ ಸ್ವತಃ ಭಾರತೀಯ ವಾಯಪಡೆ ಕೂಡ ಕಳವಳ ವ್ಯಕ್ತಪಡಿಸಿದೆ. ವಿಮಾನಗಳಿಗೆ ಎದುರಾಗಿರುವ ಕಂಟಕದ ಬಗ್ಗೆ ವಾಯುಪಡೆಯ ಪರಿವೀಕ್ಷಣೆ ಹಾಗೂ ಸುರಕ್ಷತಾ ವಿಭಾಗದ ಮಹಾ ನಿರ್ದೇಶಕ ಏರ್​ ಮಾರ್ಷಲ್​ ಮಾನವೇಂದ್ರ ಸಿಂಗ್​ ಅವರು ಹರಿಯಾಣ ಮುಖ್ಯ ಕಾರ್ಯದರ್ಶಿ ಕೇಸ್ನಿ ಆನಂದ್​ ಅರೋರಾಗೆ ಪತ್ರ ಬರೆದಿದ್ದಾರೆ.

    ಇದನ್ನೂ ಓದಿ; ವಿಡಿಯೋ: ಬಗ್ಗಿ ಹೋದರೂ ಬೆತ್ತಲು ಬಚ್ಚಿಡಲಾಗಲಿಲ್ಲ….! ಲೈವ್​ನಲ್ಲಿ ಆ್ಯಂಕರ್​ ಪತ್ನಿ ಎಡವಟ್ಟು…! 

    ಸದ್ಯ ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ರಫೇಲ್​ ಯುದ್ಧ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಆದರೆ, ಈ ವಾಯುನೆಲೆಯಲ್ಲಿ ಹಕ್ಕಿಗಳ ದಟ್ಟಣೆ ಹೆಚ್ಚಾಗಿದೆ. ಹಕ್ಕಿಗಳು ಡಿಕ್ಕಿ ಹೊಡೆದಲ್ಲಿ ವಿಮಾನಗಳಿಗೆ ಭಾರಿ ಹಾನಿ ಉಂಟಾಗಲಿದೆ. ಸುತ್ತಲಿನ ಪ್ರದೇಶದಲ್ಲಿ ಕಸದ ರಾಶಿ ಹೆಚ್ಚಾಗಿರುವುದು ಇಲ್ಲಿ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡಬರಲು ಕಾರಣವಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

    ಹಕ್ಕಿಗಳ ಸಂಖ್ಯೆ ನಿಯಂತ್ರಿಸುವುದು ಹಾಗೂ ಕಸದ ರಾಶಿಯನ್ನು ತೆರವುಗೊಳಿಸಲು ಹಲವು ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಜತೆಗೆ, ಅಂಬಾಲಾದ ಜಂಟಿ ಆಯುಕ್ತ ಹಾಗೂ ಪಾಲಿಕೆಯ ಆಯುಕ್ತರನ್ನು ವಾಯುನೆಲೆ ಅಧಿಕಾರಿಗಳು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

    ಇದನ್ನೂ ಓದಿ; ಸೆಲ್​ಗಳಲ್ಲಿ ಸೆರೆವಾಸ, ನಗ್ನರಾಗಿಸಿ ಸೋಂಕು ನಿವಾರಕ ಸಿಂಪಡಣೆ; ಚೀನಾ ಉಯ್ಘರ್​ ಮುಸ್ಲಿಮರ ಸ್ಥಿತಿಯಿದು….! 

    ಯುದ್ಧ ವಿಮಾನಗಳನ್ನು ಸುರಕ್ಷಿತವಾಗಿಡಲು ಸಣ್ಣ ಹಾಗೂ ದೊಡ್ಡ ಪಕ್ಷಿಗಳನ್ನು ವಾಯುನೆಲೆ ಪ್ರದೇಶದಿಂದ ದೂರವಿಡುವುದು ಅತ್ಯಂತ ಅಗತ್ಯವಾಗಿದೆ. ಹೀಗಾಗಿ ಸುತ್ತಲಿನ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ತ್ಯಾಜ್ಯನೀರು ಸಂಸ್ಕರಣಾ ಘಟಕ ಸ್ಥಾಪಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
    ವಾಯಪಡೆ ಬಯಸಿದ ನೆರವನ್ನೆಲ್ಲ ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಸ್ಥಳೀಯಾಡಳಿತ ಸಚಿವ ಅನಿಲ್​ ವಿಜ್​ ಹೇಳಿದ್ದಾರೆ.

    ಆಕಾಶದಿಂದ ‘ಹಣದ ಮಳೆ’ಯೇ ಸುರಿಯಿತು; ರಾತ್ರೋರಾತ್ರಿ ಲಕ್ಷಾಧೀಶರಾದ ಗ್ರಾಮಸ್ಥರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts