More

    ನಿಗೂಢವಾಗಿ ಸತ್ತಿವೆ ಬೆಳ್ಳಕ್ಕಿ! ಕರ್ನಾಟಕಕ್ಕೂ ಬಂತೇ ಹಕ್ಕಿಜ್ವರ?

    ಶಿವಮೊಗ್ಗ: ಕರೊನಾ ಸೋಂಕು ಮತ್ತು ರೂಪಾಂತರಿ ಕರೊನಾ ಆತಂಕದ ನಡುವೆ ಹಕ್ಕಿಜ್ವರ ಭೀತಿ ದೇಶಾದ್ಯಂತ ದಟ್ಟವಾಗಿ ಆವರಿಸಿದೆ.

    ನೆರೆಯ ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರ (H5N8) ಸೋಂಕು ದೃಢಪಟ್ಟಿದ್ದು, ಕರ್ನಾಟಕದಲ್ಲೂ ಹೈ ಅಲರ್ಟ್​ ಘೋಷಿಸಲಾಗಿದೆ. ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಐದಕ್ಕೂ ಹೆಚ್ಚು ಬೆಳ್ಳಕ್ಕಿ ಮೃತಪಟ್ಟಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಇದನ್ನೂ ಓದಿರಿ ಜೆಡಿಎಸ್​ ತೊರೆಯಲು ಸಾಕಷ್ಟು ಆಫರ್​ ಬಂದಿತ್ತು… ಎನ್ನುತ್ತಲೇ ದೇವೇಗೌಡರಿಗೆ ಮಾಜಿ ಶಾಸಕ ಕೊಟ್ಟ ಎಚ್ಚರಿಕೆ ಏನು?

    ನಿಗೂಢವಾಗಿ ಸತ್ತಿವೆ ಬೆಳ್ಳಕ್ಕಿ! ಕರ್ನಾಟಕಕ್ಕೂ ಬಂತೇ ಹಕ್ಕಿಜ್ವರ?ದೇಶದ ಅನೇಕ ರಾಜ್ಯಗಳಲ್ಲಿ ಕಾಗೆ, ಬಾತುಕೋಳಿಗಳು ನಿಗೂಢವಾಗಿ ಸಾಯುತ್ತಿವೆ. ಅದೇ ರೀತಿ ಬುಧವಾರ ಮಂಗಳೂರು ಹೊರವಲಯದ ಮಂಜನಾಡಿ ಗ್ರಾಮದ ಆರಂಗಡಿ ಬಳಿಯ ಗುಡ್ಡವೊಂದರಲ್ಲಿ ಆರು ಕಾಗೆಗಳು ಸತ್ತಿದ್ದು, ರಾಜ್ಯಕ್ಕೂ ಹಕ್ಕಿಜ್ವರ ಕಾಲಿಟ್ಟಿದೆಯಾ ಎಂಬ ಬಗ್ಗೆ ಆತಂಕ ಸೃಷ್ಟಿಸಿದೆ.

    ಇದರ ಬೆನ್ನಲ್ಲೇ ಗುರುವಾರ ಶಿವಮೊಗ್ಗ ನಗರದ ಸವಳಂಗ ರಸ್ತೆಯ ರೋಟರಿ ಯುವ ಕೇಂದ್ರದ‌ ಬಳಿ ಬೆಳ್ಳಕ್ಕಿಗಳು ದತ್ತು ಬಿದ್ದಿವೆ.

    ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಶಿವಮೊಗ್ಗದಲ್ಲಿ ಹಕ್ಕಿಗಳು ಸತ್ತು ಬಿದ್ದಿರುವುದು ಎಲ್ಲೆಡೆ ಆತಂಕ‌ ಆವರಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಪಶುಸಂಗೋಪನಾ ಇಲಾಖೆ ಹಾಗೂ ಪಶುವೈದ್ಯಕೀಯ ಕಾಲೇಜು ಸಿಬ್ಬಂದಿ ಪರಿಶೀಲಿಸಿದರು. ಮೃತ ಪಕ್ಷಿಗಳ ಅಂಗಾಂಗ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಪಕ್ಷಿಗಳ ಸಾವಿಗೆ ಕಾರಣ ತಿಳಿದು ಬರಲಿದೆ.

    ಮಂಗಳೂರಿನಲ್ಲಿಯೂ ಕಾಗೆಗಳ ನಿಗೂಢ ಸಾವು! ಕರ್ನಾಟಕಕ್ಕೂ ಬಂತಾ ಹಕ್ಕಿಜ್ವರ?

    ನನ್ನನ್ನು ಯಾವ ನಾಯಕರೂ ಬೆಳೆಸಿಲ್ಲ… ಸಭೆಗೂ ಮುನ್ನವೇ ಸಿಡಿದೆದ್ದ ಜೆಡಿಎಸ್​ ರೆಬಲ್​ ಶಾಸಕ ಗುಬ್ಬಿ ಶ್ರೀನಿವಾಸ್!

    ಸಿಎಂ ನೇತೃತ್ವದ ಸಭೆಯಲ್ಲೇ ಕಣ್ಣೀರಿಟ್ಟ ಶಾಸಕಿ! ದಯವಿಟ್ಟು ಕಣ್ಣೀರು ಹಾಕ್ಬೇಡಿ.. ಸರ್ಕಾರದ ಮಾನ ಹರಾಜಾಗುತ್ತೆ…

    ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts