More

    ಸಿಡಿಎಸ್ ಬಿಪಿನ್​ ಸಂಬಂಧಿಕರ ಪೂರ್ವಜರ ಸಮಾಧಿ ಸ್ಥಳಕ್ಕೆ ಹಾನಿ; ರಾವತ್​ ಪತ್ನಿಯ ಸಹೋದರನಿಂದ ಕೇಂದ್ರ ಸರ್ಕಾರದ ವಿರುದ್ಧ ಆರೋಪ

    ಭೋಪಾಲ್​: ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್​ ರಾವತ್ ಹಾಗೂ ಮಧುಲಿಕಾ ರಾವತ್ ದಂಪತಿ ಸೇರಿ 13 ಮಂದಿ ಸಾವಿಗೀಡಾಗಿ ಕೆಲವೇ ದಿನಗಳಷ್ಟೇ ಆಗಿವೆ. ಈ ದುಃಖದ ಮಧ್ಯೆ ಬಿಪಿನ್ ರಾವತ್ ಅವರ ಸಂಬಂಧಿಕರ ಪೂರ್ವಜರ ಸಮಾಧಿಗೆ ಹಾನಿಯಾಗಿದೆ ಎಂಬ ವಿಷಯ ಬಹಿರಂಗಗೊಂಡಿದೆ. ಮಾತ್ರವಲ್ಲ, ಈ ಕುರಿತು ಯಶ್ ವರ್ಧನ್ ಸಿಂಗ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮಧುಲಿಕಾ ರಾವತ್ ಅವರ ಸಹೋದರ ಯಶ್ ವರ್ಧನ್​ ಸಿಂಗ್ ಅವರು ತಮ್ಮ ಪೂರ್ವಜರ ಸಮಾಧಿ ಸ್ಥಳಕ್ಕೆ ಹಾನಿಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಹೊರಿಸಿದ್ದಾರೆ. ಮಧ್ಯಪ್ರದೇಶದ ಶಹದೋಲ್​ ಜಿಲ್ಲೆಯ ಸುಹಾಗ್​ಪುರದಲ್ಲಿರುವ ತಮ್ಮ ಆಸ್ತಿಗೆ ಸಮೀಪದಲ್ಲಿ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಈ ಹಾನಿಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಎಚ್ಚರ.. ಎಚ್ಚರ.. ಹೊರಗೆಲ್ಲೂ ಹೋಗದವರಿಗೂ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೂ ಬಂದಿದೆ ಒಮಿಕ್ರಾನ್​!

    ಸಹೋದರಿ ಮತ್ತವರ ಪತಿಯ ಅಂತಿಮಸಂಸ್ಕಾರ ಸಲುವಾಗಿ ದೆಹಲಿಯಲ್ಲಿದ್ದ ಸಮಯದಲ್ಲಿ ಬುಲ್​ಡೋಜರ್ ಮೂಲಕ ಹಿರಿಯರ ಸಮಾಧಿ ಸ್ಥಳಕ್ಕೆ ಹಾನಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮಾತ್ರವಲ್ಲ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಪಡಿಸಿದರೆ ಕೇಸು ದಾಖಲಿಸುವುದಾಗಿಯೂ ಬೆದರಿಕೆ ಬಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.

    ಈ ಕುರಿತು ಶಹದೋಲ್ ಜಿಲ್ಲಾಧಿಕಾರಿ ವಂದನಾ ವೈದ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಯಶ್ ವರ್ಧನ್​ ಸಿಂಗ್ ಅವರು 2016ರಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಅವರ ಜಾಗದ ಒಂದು ಭಾಗವನ್ನು ಕೊಟ್ಟಿದ್ದು, ಅದಕ್ಕೆ ಪರಿಹಾರವಾಗಿ 2.77 ಲಕ್ಷ ರೂಪಾಯಿ ಪಡೆದಿದ್ದಾರೆ. ನಂತರ ರಸ್ತೆ ಅಗಲೀಕರಣ ಸಲುವಾಗಿ ಮತ್ತಷ್ಟು ಜಾಗದ ಅವಶ್ಯಕತೆ ಇದ್ದಿದ್ದರಿಂದ 0.56 ಹೆಕ್ಟೇರ್ ಜಾಗ ಸ್ವಾಧೀನಕ್ಕಾಗಿ ನೋಟಿಫಿಕೇಷನ್​ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಅನಿವಾರ್ಯವಾಗಿ ಬೆಂಗಳೂರಿಗೆ ಬಂದಿಳಿದ ವಿಮಾನ, ತೆರೆದುಕೊಳ್ಳದ ಬಾಗಿಲು, ನಟಿ ರೋಜಾ ಸೇರಿ 70ಕ್ಕೂ ಅಧಿಕ ಪ್ರಯಾಣಿಕರ ಪರದಾಟ!

    ಇದು ನಾನು ಇಲ್ಲಿಗೆ ಕರ್ತವ್ಯಕ್ಕೆ ಹಾಜರಾಗುವ ಮೊದಲೇ ಆಗಿದ್ದು, ಹೆದ್ದಾರಿ ನಿರ್ಮಾಣಕ್ಕಾಗಿ ಒಂದಷ್ಟು ಮರಗಳನ್ನು ಕಡಿಯಲಾಗಿತ್ತು. ಆ ಬಳಿಕ ಮತ್ತಷ್ಟು ಮರಗಳನ್ನು ಕಡಿದಿದ್ದೇ ಸಂಘರ್ಷಕ್ಕೆ ಕಾರಣವಾಗಿದೆ. ಇನ್ನು ಸಮಾಧಿ ಇದ್ದ ಸ್ಥಳದ ಒಂದು ಭಾಗವೂ ಹೆದ್ದಾರಿ ನಿರ್ಮಾಣಕ್ಕೆ ನೀಡಲಾಗಿದ್ದ ಜಾಗಕ್ಕೆ ಸೇರಿದೆ. ಆದರೆ ಅಲ್ಲಿ ಒಂದಷ್ಟು ಪೊದೆ ಇದ್ದಿದ್ದರಿಂದ ಕಾರ್ಮಿಕರು ಗೊತ್ತಾಗದೆ ಅಲ್ಲಿ ಅಗೆದಿದ್ದಾರೆ. ಈ ಬಗ್ಗೆ ತಾವು ಯಶ್​ ವರ್ಧನ್ ಜತೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ದೆಹಲಿಯಿಂದ ಬರುತ್ತಿದ್ದಂತೆ ಭೇಟಿಯಾಗಲು ಹೇಳಿದ್ದೇನೆ ಎಂಬುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿಡಿಎಸ್ ಬಿಪಿನ್​ ಸಂಬಂಧಿಕರ ಪೂರ್ವಜರ ಸಮಾಧಿ ಸ್ಥಳಕ್ಕೆ ಹಾನಿ; ರಾವತ್​ ಪತ್ನಿಯ ಸಹೋದರನಿಂದ ಕೇಂದ್ರ ಸರ್ಕಾರದ ವಿರುದ್ಧ ಆರೋಪ

    ಇದು ‘ಎಣ್ಣೆ-ಏಟು’: ಪಾನಮತ್ತ ಚಾಲಕ, ಕೋಪೋದ್ರಿಕ್ತ ಮಾಲೀಕ; ಮುಂದಾಗಿದ್ದೆಲ್ಲ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts