More

    ನಿಮ್ಹಾನ್ಸ್ ಶವಾಗಾರದಲ್ಲಿ ಬಯಾಪ್ಸಿ ಮಾದರಿ ಕಳವು; ದೊಡ್ಡ ಜಾಲದ ಶಂಕೆ

    ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ರೋಗಿಗಳ ರೋಗ ಲಕ್ಷಣ ತಿಳಿಯಲು ಸಂಗ್ರಹಿಸಿದ್ದ ‘ಬಯಾಪ್ಸಿ ಮಾದರಿ’ಯನ್ನು ಕದ್ದು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೊಂದು ವ್ಯವಸ್ಥಿತ ಜಾಲವೆಂದು ಪೊಲೀಸರು ಹೇಳಿದ್ದಾರೆ.
    ನಿಮ್ಹಾನ್ಸ್ ಆಸ್ಪತ್ರೆಯ ರಿಜಿಸ್ಟ್ರಾರ್ ಡಾ. ಶಂಕರ ನಾರಾಯಣ ರಾವ್, ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಆಸ್ಪತ್ರೆಯ ನ್ಯೂರೋಪೆಥಾಲಜಿ ವಿಭಾಗದ ನ್ಯೂರೋ ಆಂಕಾಲಜಿ ಲ್ಯಾಬ್‌ನ ಟೆಕ್ನಿಷಿಯನ್ ಎಂ.ಆರ್. ಚಂದ್ರಶೇಖರ್ ಮತ್ತು ಶವಾಗಾರ ಸಹಾಯಕ ಎಸ್. ಅಣ್ಣಾ ದೊರೈ ಮತ್ತು ಕೇರಳದ ರಘುರಾಮ್ ಸೇರಿದಂತೆ ಇತರರ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

    ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬಿವಿಜಿ ಏಜೆನ್ಸಿ ಮೂಲಕ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಾಗಿ ಚಂದ್ರಶೇಖರ್ ಮತ್ತು ಅಣ್ಣಾ ದೊರೈ ಕೆಲಸ ಮಾಡುತ್ತಿದ್ದಾರೆ.
    ಮಾನಸಿಕ ಮತ್ತು ನರರೋಗ ಚಿಕಿತ್ಸೆ ಪಡೆಯಲು ನಿಮ್ಹಾನ್ಸ್ ಆಸ್ಪತ್ರೆಗೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ರೋಗಿಗಳು ಬರುತ್ತಾರೆ. ಚಿಕಿತ್ಸೆ ನೀಡುವ ವೈದ್ಯರ ತಂಡ, ರೋಗ ಲಕ್ಷಣ ಮತ್ತು ಕಾರಣ ತಿಳಿಯಲು ರೋಗಿಗಳ ‘ಬಯಾಪ್ಸಿ ಮಾದರಿ’ ಸಂಗ್ರಹಿಸಿ ಸಂಶೋಧನೆ ನಡೆಸುವುದು ಪ್ರಕ್ರಿಯೆ. ಪ್ರತಿವರ್ಷ ಅಂದಾಜು 1 ಸಾವಿರ ಬಯಾಪ್ಸಿ ಮಾದರಿ ಪಡೆದು ಶವಾಗಾರದಲ್ಲಿ ಸಂಗ್ರಹಿಸಲಾಗುತ್ತದೆ.

    ಡಿ.23ರಂದು ಎಚ್‌ಒಡಿ ಡಾ.ಅನಿತಾ ಮಹಾದೇವನ್ ಮತ್ತು ಹೆಚ್ಚುವರಿ ಪ್ರಾಧ್ಯಾಪಕ ಡಾ. ಬಿ.ಎನ್. ನಂದೀಶ್ ತಂಡ ಆಸ್ಪತ್ರೆಯ ಶವಗಾರಕ್ಕೆ ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿತು. ರೋಗಿಗಳಿಂದ ಸಂಗ್ರಹಿಸಿದ್ದ ‘ಬಯಾಪ್ಸಿ ಮಾದರಿ’ ಲೆಕ್ಕಚಾರದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಈ ಬಗ್ಗೆ ಚಂದ್ರಶೇಖರ್ ಮತ್ತು ಅಣ್ಣಾ ದೊರೈಯನ್ನು ಪ್ರಶ್ನೆ ಮಾಡಿದ್ದಾರೆ. ಮೊದಲು ಸಬೂಬು ಹೇಳಿದ ಆರೋಪಿತರು ಕೊನೆಗೆ ತಪ್ಪೊಪ್ಪಿಕೊಂಡಿದ್ದಾರೆ.

    ಆಸ್ಪತ್ರೆಯಲ್ಲಿ ಸಂಗ್ರಹಿಸಿದ್ದ ಬಯಾಪ್ಸಿ ಮಾದರಿಗಳನ್ನು ಕೇಂದ್ರದ ರಘುರಾಮ್ ಮತ್ತು ಬೇರೆ ಬೇರೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಗಂಭೀರವಾಗಿ ಪರಿಗಣಿಸಿದ ಡಾ.ಅನಿತಾ ಮಹಾದೇವನ್ ತಂಡ ನೀಡಿದ ವರದಿ ಮೇರೆಗೆ ಡಾ.ಶಂಕರ ನಾರಾಯಣ ರಾವ್, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಂಶೋಧನೆಗೆ ಬಳಕೆ :

    ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕದ್ದ ಬಯಾಪ್ಸಿ ಮಾದರಿಗಳನ್ನು ಕೇರಳದ ರಘುರಾಮ್ ಮತ್ತು ಬೇರೆ ಬೇರೆ ವೈದ್ಯಕೀಯ ಸಂಶೋಧನ ಸಂಸ್ಥೆಗಳಿಗೆ ಮಾರಾಟ ಮಾಡಿದ್ದಾರೆ. ವಿದ್ಯಾರ್ಥಿಗಳು ಈ ಬಯಾಪ್ಸಿ ಮಾದರಿ ಮೇಲೆ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಲು ಬಳಕೆ ಮಾಡಿಕೊಳ್ಳುತ್ತಾರೆ. ಹೊರಗೆ ಬಯಾಪ್ಸಿ ಮಾದರಿ ಸುಲಭವಾಗಿ ಸಿಗುವುದಿಲ್ಲ. ಕಳೆದ 4 ತಿಂಗಳಿಂದ ಅಂದಾಜು 200 ಬಯಾಪ್ಸಿ ಮಾದರಿ ಮಾರಾಟ ಆಗಿರುವ ಶಂಕೆ ವ್ಯಕ್ತವಾಗಿದೆ. ಕೇರಳದ ರಘುನಾಮ್ ಮತ್ತು ಲಾನುಭವಿಗಳು ಸೆರೆಸಿಕ್ಕರೇ ಅಕ್ರಮ ಜಾಲದ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಂತರಿಕ ತನಿಖೆಗೆ ಸಮಿತಿ ರಚನೆ :
    ಆಸ್ಪತ್ರೆಯಿಂದ ಬಯಾಪ್ಸಿ ಮಾದರಿ ಕದ್ದು ಮಾರಾಟ ಮಾಡಿರುವುದು ಗಂಭೀರ ವಿಷಯವಾಗಿದೆ. ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ತಿಳಿಯಲು ಆಂತರಿಕ ತನಿಖೆಗೆ ಸಮಿತಿ ರಚನೆ ಮಾಡಿರುವುದಾಗಿ ನಿಮ್ಹಾನ್ಸ್ ಕುಲಸಚಿವ ಡಾ. ಬಿ.ಎಸ್. ಶಂಕರ ನಾರಾಯಣ ರಾವ್ ತಿಳಿಸಿದ್ದಾರೆ. ಎಚ್‌ಒಡಿ ಅನುಮತಿ ಇಲ್ಲದೆ ಬಯಾಪ್ಸಿ ಮಾದರಿ ಹೇಗೆ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇನ್ನೂ ಲಾನುಭವಿ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರೇ ಬಯಾಪ್ಸಿ ಮಾದರಿ ಯಾವ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದಾರೆ ಎಂಬುದು ತಿಳಿದು ಬರಬೇಕಿದೆ ಎಂದು ಕಲಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ರೋಗಿಗಳ ರೋಗ ಲಕ್ಷಣ ತಿಳಿಯಲು ಸಂಗ್ರಹಿಸಿದ್ದ ‘ಬಯಾಪ್ಸಿ ಮಾದರಿ’ಯನ್ನು ಕದ್ದು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೊಂದು ವ್ಯವಸ್ಥಿತ ಜಾಲವೆಂದು ಪೊಲೀಸರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts