More

    ಖುಷ್ಕಿ ಜಮೀನುಗಳಿಗೆ ನೀರಾವರಿ

    ಬೀಳಗಿ: ಬೀಳಗಿ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು, ರೈತರ ಖುಷ್ಕಿ ಜಮೀನುಗಳಿಗೆ ನೀರಾವರಿ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.

    ತಾಲೂಕಿನ ಗಲಗಲಿ ಗ್ರಾಮದಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಯೋಜನೆಯಡಿ 1.5 ಕೋಟಿ ರೂ. ವೆಚ್ಚದಲ್ಲಿ ಬೀಳಗಿ ತಾಲೂಕಿನ ಗಲಗಲಿ ಮತ್ತು ಮುಂಡಗನೂರ ವರೆಗೆ ರಸ್ತೆ ಸುಧಾರಣೆ ಸೇರಿ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಮತಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಕಷ್ಟು ಅನುದಾನ ಮಂಜೂರ ಮಾಡುತ್ತಿದ್ದಾರೆ. ಈಗಾಗಲೇ ನೀರಾವರಿಗೆ ಪ್ರಮುಖ ಆದ್ಯತೆ ನೀಡಲಾಗಿದೆ ಎಂದರು.

    ಎಂ.ಎಂ. ಶಂಭೋಜಿ, ನಂದಿ ಶುಗರ್ಸ್‌ ಉಪಾಧ್ಯಕ್ಷ ತಿಮ್ಮಣ್ಣ ವೈ.ಅಮಲಝರಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಆನಂದ ಇಂಗಳಗಾಂವಿ, ಬಿಡಿಸಿಸಿ ಬ್ಯಾಂಕ್ ಮಾಜಿ ಸದಸ್ಯ ಮೋಹನ ಜೌಧವ, ಹೊಳಬಸು ಬಾಳಶೆಟ್ಟಿ, ಪಿಡಿಒ ವಿ.ಎಸ್. ಬಿರಾದಾರ, ಪಿಡಬ್ಲುೃಡಿ ಎಇಇ ಸುರೇಶ, ಎಇಇ ಅರಳಿಕಟ್ಟಿ, ಗುತ್ತಿಗೆದಾರ ಮಲ್ಲು ಲಮಾಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts