More

    ಅರೆ ಹೊಟ್ಟೆ, ಬಗಲಲ್ಲಿ ಪುಟ್ಟ ಮಕ್ಕಳು… 1,100 ಕಿ.ಮೀ ನಡೆದ ದಂಪತಿ… ಮುಂದೆ?

    ಪಟ್ನಾ: ಸಾರಿಗೆ ವ್ಯವಸ್ಥೆಗಳೇ ಇಲ್ಲದ ಸಂದರ್ಭದಲ್ಲಿ ಜನರು ಸಾವಿರಾರು ಕಿಲೋಮೀಟರ್​ಗಟ್ಟಲೆ ನಡೆದೇ ಹೋಗುತ್ತಿದ್ದರು ಎಂದು ನಮ್ಮ ತಾತ-ಮುತ್ತಾತಂದಿರು ಹೇಳಿದ್ದನ್ನು ಕೇಳಿರುತ್ತವೆ. ಆದರೆ ನಿಜಕ್ಕೂ ಅದೆಲ್ಲಾ ಸಾಧ್ಯವೆ ಎಂದು ಕೆಲವರು ಹೇಳಿದರೆ, ಈಗಿನವರಿಗಂತೂ ಅದು ಸಾಧ್ಯವೇ ಇಲ್ಲ ಬಿಡಿ ಎನ್ನುತ್ತಾರೆ ಹಲವರು.

    ಆದರೆ ಈ ಅಸಾಧ್ಯ ಎಂಬ ಮಾತನ್ನು ಸಾಧಿಸಿ ತೋರಿಸಿದ್ದಾರೆ ಇಲ್ಲಿಯ ವಲಸೆ ಕಾರ್ಮಿಕರು! ಹೌದು, ಲಾಕ್​ಡೌನ್​ ಹಿನ್ನೆಲೆಯಲ್ಲಿ, ಸರ್ಕಾರ ಸಾರಿಗೆ ವ್ಯವಸ್ಥೆ ಮಾಡುವವರೆಗೆ ಕಾಯದೇ ನೂರಾರು ಕಿಲೋಮೀಟರ್​ ನಡೆದು ಮನೆ ಸೇರಿದವರ ಕೆಲವರ ಬಗ್ಗೆ ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ದಂಪತಿ ಬರೋಬ್ಬರಿ 1,100 ಕಿ.ಮೀ ಕಾಲ್ನಡಿಗೆಯಲ್ಲಿ ಹೋಗಿದ್ದಾರೆ. ಹೋಗಿ ಊರನ್ನೂ ಸುರಕ್ಷಿತವಾಗಿ ತಲುಪಿದ್ದಾರೆ!

    ಇದನ್ನೂ ಓದಿ: ಸತ್ತರೂ ಚಿಂತೆಯಿಲ್ಲ, ಮಾಸ್ಕ್​ ಹಾಕದೇ ಸೇವೆ ಸಲ್ಲಿಸು ಎಂದು ವೈದ್ಯನಿಗೆ ಅಪ್ಪ ಹೇಳಿದ್ದೇಕೆ?

    ಊಹಿಸಲೂ ಅಸಾಧ್ಯ ಎನ್ನುವ ಈ ಕಾರ್ಯವನ್ನು ಮಾಡಿದವರು ಬಿಹಾರದ ವೈಶಾಲಿ ಜಿಲ್ಲೆಯ ಮಹೇಶ್‌ ರೈ ಹಾಗೂ ಪತ್ನಿ ವಿಭಾ ದಂಪತಿ. ಸಾಲದು ಎಂಬುದಕ್ಕೆ ತಮ್ಮ ಇಬ್ಬರು ಮಕ್ಕಳನ್ನೂ ತಮ್ಮೊಟ್ಟಿಗೆ ಕರೆದುಕೊಂಡು ಹೋಗಿದ್ದಾರೆ. ಇದೀಗ ಸುರಕ್ಷಿತವಾಗಿ ಊರನ್ನು ಅವರು ತಲುಪಿದ್ದಾರೆ ಎನ್ನುವುದೇ ವಿಶೇಷ!

    ಒಂದೆಡೆ ಅರೆ ಹೊಟ್ಟೆ, ಬಗಲಲ್ಲಿ ಎರಡು ಮಕ್ಕಳು, ಸಾವಿರಾರು ಕಿಲೋಮೀಟರ್​ ದೂರದ ದಾರಿ, ಮನೆ ತಲುಪುವವರೆಗೂ ಊಟ ಸಿಗುತ್ತದೆ ಎಂಬ ನಂಬಿಕೆ ಇಲ್ಲ, ಎಲ್ಲಾ ದೇವರ ಮೇಲೆಯೇ ಭಾರ ಎನ್ನುತ್ತಾ ಸಾಗಿದವರು ರಾಜಸ್ಥಾನದ ಜೈಪುರದಲ್ಲಿ ಕೆಲಸ ಮಾಡುತ್ತಿದ್ದ ಈ ದಂಪತಿ, ತಮ್ಮ ಹುಟ್ಟೂರಿಗೆ ಹೋಗಿದ್ದಾರೆ. ಉತ್ತರ ಪ್ರದೇಶದ ವಿವಿಧ ರಾಜ್ಯಗಳ ಮೂಲಕ ನಡೆದಿದ್ದಾರೆ. 10 ದಿನಗಳಿಗೂ ಹೆಚ್ಚಿನ ಅವಧಿ ರಾತ್ರಿ ಹಗಲೆನ್ನದೆ ನಡೆದಿದ್ದಾರೆ ಈ ದಂಪತಿ ಮತ್ತು ಮಕ್ಕಳು!

    ಇದನ್ನೂ ಓದಿ: ದಾವೂದ್ ಜತೆ ಕೈಜೋಡಿಸಿದ ಲಷ್ಕರ್​ನಿಂದ ಭಾರತದ ಮೇಲೆ ದಾಳಿ: ಬೆಚ್ಚಿ ಬೀಳಿಸೋ ವರದಿ ಇಲ್ಲಿದೆ…

    ಕೆಲ ವರ್ಷಗಳ ಹಿಂದೆ ರಾಜಸ್ಥಾನಕ್ಕೆ ಹೋಗಿದ್ದ ಈ ದಂಪತಿ. ಅಲ್ಲೇ ವಾಸವಿದ್ದರು. ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಅಲ್ಲೇ ಸಿಕ್ಕಿಹಾಕಿಕೊಂಡಿದ್ದರು. ಇಲ್ಲಿಯವರೆಗೆ ದುಡಿದಿದ್ದ ಹಣದಿಂದ ಒಂದು ತಿಂಗಳು ಕಳೆದರು. ಆದರೆ ಕೈಯಲ್ಲಿ ಹಣವಿಲ್ಲದೇ ಊಟಕ್ಕೂ ಸಮಸ್ಯೆಯಾಗಿ ಮನೆಗೆ ವಾಪಸಾಗುವ ನಿರ್ಧಾರಕ್ಕೆ ಬಂದರು. ಆದರೆ ವಾಹನ ಇರದ ಕಾರಣ, ನಡೆಯುವ ಕೆಲಸ ಮಾಡಿದರು.

    ನಮಗೆ ಅನೇ ದಿನ ಆಹಾರವೇ ಸಿಗಲಿಲ್ಲ. ಹಸಿದ ಹೊಟ್ಟೆಯಲ್ಲಿಯೇ ನಡೆದಿದ್ದೇವೆ. ನಮ್ಮನ್ನು ನೋಡಿದ ಕೆಲವರು ಅಯ್ಯೋ ಪಾಪ ಅನ್ನುತ್ತಿದ್ದರೇ ವಿನಾ ಆಹಾರ ಮಾತ್ರ ನೀಡಲಿಲ್ಲ. ಉತ್ತರ ಪ್ರದೇಶ ದಾಟಿ ಬಿಹಾರಕ್ಕೆ ಬಂದಾಗ ನಿರಾಶ್ರಿತ ತಾಣದ ಸಿಬ್ಬಂದಿ ನಮಗೆ ಆಹಾರ ನೀಡಿದರು ಎನ್ನುತ್ತಾರೆ ಮಹೇಶ್​.

    ಇದನ್ನೂ ಓದಿ: ಮುಂಬೈ, ಅಹಮದಾಬಾದ್​ನಿಂದ ರಾಜ್ಯದಲ್ಲಿ ಹೆಚ್ಚುತ್ತಿದೆ ಕರೊನಾ ಸೋಂಕು!

    ಬೇರೆ ರಾಜ್ಯದಿಂದ ಬಂದಿದ್ದರಿಂದ ಸದ್ಯ ಇವರನ್ನ ಹೋಮ್‌ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಆದ್ರೆ ತಮ್ಮ ಹುಟ್ಟೂರಿಗೆ ತಲುಪಿದ್ದೇವೆ ಅನ್ನೋ ಖುಷಿ ಇವರಲ್ಲಿ ಇದೆ. ಮುಂದಿನ ಜೀವನ ಹೇಗೆ ಎಂದು ಕೇಳಿದರೆ, ಇನ್ನು ಈ ಊರು ಬಿಟ್ಟು ಎಲ್ಲೂ ಹೋಗೋದಿಲ್ಲ, ಇಲ್ಲೆ ಯಾವುದಾದರೂ ಕೆಲಸ ಮಾಡಿಕೊಂಡಿರುತ್ತೇವೆ ಎನ್ನುತ್ತಿದ್ದಾರೆ ದಂಪತಿ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts