More

    ವೃದ್ಧರು, ಅಂಗವಿಕಲರಿಗೆ ಅಂಚೆ ಮತಪತ್ರ : ಚುನಾವಣಾ ಆಯೋಗದಿಂದ ಹೊಸ ಮಾರ್ಗಸೂಚಿ

    ನವದೆಹಲಿ: ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 80 ವರ್ಷಕ್ಕಿಂತ ಹೆಚ್ಚು ವಯೋಮಾನದವರು ಹಾಗೂ ಅಂಗವಿಕಲರಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸುವ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಮತ್ತಷ್ಟು ಸುಗಮಗೊಳಿಸಿದೆ. ಈ ಕುರಿತು ಆಯೋಗ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ವಯೋವೇದ್ಧರು, ವಿಕಲಾಂಗರು, ಕರೊನಾ ಸೋಂಕಿತರು, ಶಂಕಿತರು ಹಾಗೂ ಕ್ವಾರಂಟೈನ್​ನಲ್ಲಿರುವವರಿಗಾಗಿ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಬೈಜ್ನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.ಈ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರವನ್ನು ಮತದಾರರಿಗೆ ಬಿಡಲಾಗಿದೆ. ಬಿಹಾರ ವಿಧಾನಸಭೆ, ಒಂದು ಲೋಕಸಭೆ ಸ್ಥಾನ ಸೇರಿ 56 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಹೊಸ ಸೌಲಭ್ಯ ಜಾರಿಯಾಗಲಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    ಯಾರು ಅಂಚೆ ಮೂಲಕ ಮತದಾನ ಆಯ್ಕೆ ಬಯಸುತ್ತಾರೋ ಅವರು ಮೊದಲು ಫಾಮ್ರ್-12ಡಿಯನ್ನು ಭರ್ತಿ ಮಾಡಬೇಕಾಗುತ್ತದೆ. ಒಮ್ಮೆ ಫಾಮ್ರ್ ಭರ್ತಿ ಮಾಡಿದ ನಂತರ ಅವರಿಗೆ ಮತ್ತೆ ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಅವಕಾಶವಿರುವುದಿಲ್ಲ. ಫಾಮರ್್​ನ್ನು ಮತದಾರರ ನಿವಾಸಕ್ಕೆ ಆಯಾ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್​ಒ) ನಿಗದಿತ ದಿನಾಂಕದಲ್ಲಿ ತಲುಪಿಸುತ್ತಾರೆ. ಬಳಿಕ ಭರ್ತಿ ಮಾಡಿದ ಫಾಮರ್್​ಗಳನ್ನು ಬೂತ್ ಮಟ್ಟದ ಅಧಿಕಾರಿಗಳೇ ಸಂಗ್ರಹಿಸಿ ರಿಟರ್ನಿಂಗ್ ಅಧಿಕಾರಿಗೆ ಸಲ್ಲಿಸುತ್ತಾರೆ. ಪ್ರತಿ ತಂಡಕ್ಕೂ ಭದ್ರತೆ ಮತ್ತು ವಾಹನ ವ್ಯವಸ್ಥೆ ನೀಡಲಾಗುತ್ತದೆ. ಅಂಚೆ ಮತದಾನದ ವಿಡಿಯೋ ರೆಕಾರ್ಡಿಂಗ್ ಸಹ ಮಾಡಲಾಗುತ್ತದೆ ಎಂದು ಬೈಜ್ನಾಥ್ ಸಿಂಗ್ ಹೇಳಿದ್ದಾರೆ.

    ಇದನ್ನೂ ಓದಿ: ಎನ್​ಡಿಎಯಿಂದ ಎಲ್​ಜೆಪಿ ಔಟ್: ನಿತೀಶ್ ವಿರುದ್ಧ ತೊಡೆ ತಟ್ಟಿದ ಪಾಸ್ವಾನ್​

    ಮೊಬೈಲ್ ಆಪ್ ಕೂಡ ಲಭ್ಯ
    ವೃದ್ಧರು ಹಾಗೂ ಅಂಗವಿಕಲರಿಗೆ ನೆರವಾಗುವ ನಿಟ್ಟಿನಲ್ಲಿ ಚುನಾವಣಾ ಆಯೋಗ ‘ಪಿಡಬ್ಲೂ್ಯಡಿ ಆಪ್’ ಹಾಗೂ ಇತರ ವಿಶೇಷ ಸೌಲಭ್ಯಗಳನ್ನು ಸಹ ನೀಡಿದೆ. ಈ ಆಪ್ ಮೂಲಕ ವೃದ್ಧರು ತಮ್ಮ ಇಪಿಐಸಿ ಸಂಖ್ಯೆಯನ್ನು ನಮೂದಿಸುವ ಮೂಲಕವೂ ಅಂಚೆ ಮತದಾನಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದು. ದೃಷ್ಟಿ ದೋಷ ಹೊಂದಿರುವವರಿಗಾಗಿ ಧ್ವನಿ ಆಯ್ಕೆಯನ್ನೂ ನೀಡಲಾಗಿದೆ.

    ಬಿಹಾರ ಚುನಾವಣೆ | ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts