ವಾಷಿಂಗ್ಟನ್: ಮನುಷ್ಯನ ದೇಹದಲ್ಲಿ ಏನೇ ಸಣ್ಣ ದೋಷವಿದ್ದರೂ ಅದರ ಬಗ್ಗೆ ಆಡಿಕೊಳ್ಳೋದಕ್ಕೆ ಸಾಕಷ್ಟು ಜನರಿರುತ್ತಾರೆ. ಅದೇ ರೀತಿ ದೊಡ್ಡ ಬಾಯಿ ಇದೆ ಎನ್ನುವ ಕಾರಣಕ್ಕೆ ಎಲ್ಲರಿಂದ ಹೀಯಾಳಿಸಿಕೊಂಡಿದ್ದ ಮಹಿಳೆಯೊಬ್ಬಳು ಇದೀಗ ಗಿನ್ನೆಸ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ್ದಾಳೆ.
ಅಮೆರಿಕದ ಟಿಕ್ಟಾಕ್ ಸ್ಟಾರ್ ಸಮಂತಾ ರಾಮ್‌ಸ್ಡೆಲ್(31) ಈ ರೀತಿ ದಾಖಲೆ ಬರೆದಿರುವ ಮಹಿಳೆ. ಆಕೆ ಬೋರ್ ಆಗುತ್ತಿದೆ ಎನ್ನುವ ಕಾರಣಕ್ಕೆ ಟಿಕ್ಟಾಕ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ವಿಡಿಯೋ ನೋಡಲಾರಂಭಿಸಿದಳಂತೆ. ಅದಾದ ಮೇಲೇ ತಾನೂ ಏಕೆ ವಿಡಿಯೋ ಮಾಡಬಾರದೆಂದು ವಿಡಿಯೋ ಮಾಡಲಾರಂಭಿಸಿದಳು. ಅದರಲ್ಲಿ ಆಕೆಯ ದೊಡ್ಡ ಬಾಯಿ ನೋಡಿ ಎಲ್ಲರೂ ಆಕೆಯನ್ನು ಮೆಚ್ಚಿಕೊಳ್ಳಲಾರಂಭಿಸಿದರಂತೆ.
ಹಾಗೆಯೇ ವಿಡಿಯೋ ಮಾಡುತ್ತಾ ಮಾಡುತ್ತಾ ಆಕೆಯ ದೊಡ್ಡ ಬಾಯಿ ಎಲ್ಲ ಕಡೆ ಫೇಮಸ್ ಆಗತೊಡಗಿತು. ದೊಡ್ಡ ಬಾಯಿಯಿರುವ ನೀನು ಗಿನ್ನೆಸ್ ರೆಕಾರ್ಡ್ಗೆ ಪ್ರಯತ್ನ ಮಾಡು ಎಂದು ಆಕೆಯ ಸ್ನೇಹಿತರೆಲ್ಲರೂ ಅವಳಿಗೆ ಹುರಿದುಂಬಿಸಿದರು. ಅದರಂತೆ ಆಕೆ ಗಿನ್ನೆಸ್ ರೆಕಾರ್ಡ್ಗೆ ಪ್ರಯತ್ನ ಪಟ್ಟಿದ್ದಾಳೆ.
ಗಿನ್ನೆಸ್ ರೆಕಾರ್ಡ್ಗೆಂದು ಆಕೆಯ ಬಾಯಿಯನ್ನು ಪೂರ್ತಿಯಾಗಿ ತೆಗೆದು ಅಳತೆ ಮಾಡಲಾಗಿದೆ. ಆಕೆಯ ಬಾಯಿ ಬರೋಬ್ಬರಿ 2.56 ಇಂಚು ಅಂದರೆ 6.52 ಸೆಂ.ಮೀ ಇದೆ. ಪೂರ್ತಿ ಸೇಬುಹಣ್ಣನ್ನು ಆಕೆ ಬಾಯಿಯೊಳಗೆ ಇಟ್ಟುಕೊಳ್ಳಬಹುದಂತೆ. ಪೂರ್ತಿ ವಿಶ್ವದಲ್ಲಿ ಅತಿ ದೊಡ್ಡ ಬಾಯಿ ಇರುವ ಮಹಿಳೆ ಆಕೆ ಎಂದು ಕರೆಯಲಾಗಿದೆ. ಹೀಯಾಳಿಕೆಯನ್ನೇ ಹಿರಿಮೆಗೆ ದಾರಿ ಮಾಡಿಕೊಳ್ಳುವುದು ಹೇಗೆ ಎಂದು ಆಕೆ ಜಗತ್ತಿಗೆ ತೋರಿಸಿಕೊಟ್ಟಿದ್ದಾಳೆ. (ಏಜೆನ್ಸೀಸ್)
ಭಗತ್ ಸಿಂಗ್ನಂತೆ ನಟಿಸಲು ಹೋಗಿ ಸಾವನ್ನಪ್ಪಿದ ಬಾಲಕ! ಮನಕಲಕುವ ಘಟನೆಯಿದು
ಬಿಗ್ಬಾಸ್ನಲ್ಲಿ ಇಂದೇ ಎಲಿಮಿನೇಶನ್! ಮನೆಯಿಂದ ಹೊರಬಂದವರು ಇವರೇ ನೋಡಿ..