More

    ಕಾರ್ತಿಕ್​-ಸಂಗೀತಾ ಮತ್ತೆ ಒಂದಾದ್ರ? ಬಿಗ್​​​ ಬಾಸ್​​​ ಮನೆಯಲ್ಲಿ ವಿನಯ್‌ ಭವಿಷ್ಯ ನಿಜವಾಯ್ತು..!

    ಬಿಗ್​ ಬಾಸ್​​ ಮನೆಯಲ್ಲಿ ಸಂಗೀತಾ ಮತ್ತು ಕಾರ್ತಿಕ್​​​ ನಡುವೆ ಕೆಲ ದಿನಗಳಿಂದ ಏನೂ ಸರಿ ಇಲ್ಲ ಎಂಬಂತಾಗಿದೆ. ಇಬ್ಬರ ನಡುವೆಯೂ ಸಾಕಷ್ಟು ಭಿನ್ನಾಭಿಪ್ರಾಯಗಳು ತಲೆದೋರಿದೆ. ಅತಿ ಶೀಘ್ರದಲ್ಲಿ ಇವರಿಬ್ಬರ ಮಧ್ಯೆ ಇರುವ ಗ್ಯಾಪ್ ಫಿಲ್ ಆಗತ್ತೆ” ಅಂತ ಕಿಚ್ಚ ಸುದೀಪ್ ಮುಂದೆ ಹೇಳಿದಾಗ ಸಂಗೀತಾ ‘ಸಾಧ್ಯವೇ ಇಲ್ಲ’ ಅನ್ನೋ ತರ ಲುಕ್ ಕೊಟ್ಟಿದ್ದರು. ಆದರೆ ವಿನಯ್ ಗೌಡ ಭವಿಷ್ಯ ನಿಜವಾಗಿದಕ್ಕೆ, ಈತ ಮಾತ್ರ ನಾನು ಹೇಳಿದ್ದು ನಿಜ ಅಲ್ವಾ ಅಂತ ಹೇಳಿದರು.


    ಸದ್ಯ ವಿನಯ್​​ ಇವರಿಬ್ಬರೂ ಒಂದಾಗುತ್ತಾರೆ ಅನ್ನೋ ವಿಚಾರವನ್ನ ಹಂಚಿಕೊಂಡಿದ್ದರು. ಆದರೆ ಆಗ ಮನೆಯವರು ಯಾರೂ ಈ ವಿಚಾರವನ್ನ ಒಪ್ಪಿರಲಿಲ್ಲ. ಆದ್ರೆ ಕಾರ್ತಿಕ್​​​ ಮತ್ತು ಸಂಗೀತಾ ಪರಸ್ಪರ ಕುಳಿತುಕೊಂಡು ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.


    ಸಿರಿ ಕೂಡ ಇವರಿಬ್ಬರು ಆರಾಮಾಗಿ ಕೂತು ಮಾತಾಡೋದು ನೋಡಿ ಆಶ್ಚರ್ಯಪಟ್ಟಿರೇ, ತುಕಾಲಿ ಸಂತು ಸಂಗೀತಾ-ಕಾರ್ತಿಕ್ ಇವರಿಬ್ಬರೂ ಮಾತನಾಡೋದನ್ನ ಕಂಡು ನಮ್ಮನ್ನು ಕಾರ್ತಿಕ್​-ಸಂಗೀತಾ ಬಕ್ರಾ ಮಾಡಿದರು ಅಂತ ಹೇಳಿದ್ದಾರೆ.


    ಸಂಗೀತಾ ಹಾಗೂ ಕಾರ್ತಿಕ್ ಕಿಚನ್ ಏರಿಯಾದಲ್ಲಿ ಮಾತನಾಡುವಾಗ,”ಹೆಣ್ಣು ಮಕ್ಕಳಿಗೆ ಕೂದಲು ಇದ್ರೆ ಚೆಂದ” ಅಂತ ಕಾರ್ತಿಕ್ ಹೇಳಿದ್ರೆ, ಸಂಗೀತಾ ಅವರು “ನೀವು ಬೇಡ ಅಂದ್ರೂ ಮಾಡಿಸಿಕೊಂಡ್ರಿ. ನಾನು ಕೂದಲು ಕಟ್ ಮಾಡ್ತೀನಿ ಅಂತ ಹೇಳಿದ್ದೆ, ಆದರೆ ವೀಕೆಂಡ್ ಬಟ್ಟೆಗಳು ಬಂದಾಗ ಖರಾಬ್ ಆಗಿ ಕಾಣಿಸ್ತಿದ್ದೆ” ಎಂದಿದ್ದಾರೆ. ಆಗ ಕಾರ್ತಿಕ್ “ಕೂದಲು ಇಲ್ಲ ಅಂದರೂ ನಮಗೆ ಸಮಸ್ಯೆ ಇಲ್ಲ” ಎಂದಿದಕ್ಕೆ ಸಂಗೀತಾ
    “ನಿಮಗೆ ಸೇವ್ ಮಾಡಿಲ್ಲ ಅಂತ ಲುಡೋ ಟಾಸ್ಕ್‌ನಲ್ಲಿ ಹೇಳಿದೆ, ಸಾರಿ” ಅಂತ ಹೇಳಿದ್ದಾರೆ.


    ಹೀಗೆ ಸಂಗೀತಾ ಮತ್ತು ಕಾರ್ತಿಕ್​​ ಪರಸ್ಪರ ಮಾತನಾಡುತ್ತಿರೋದನ್ನ ಕಂಡು ವಿನಯ್​​ ಇವರಿಬ್ಬರೂ ಮತಾಡೋದು ಪಕ್ಕಾ ಎಂದು ಈ ಮೊದಲೇ ಹೇಳಿದ್ದರು ಎಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts