More

    ಬಿಗ್​ಬಾಸ್​​​ ಒಟಿಟಿಗೆ ಚಾಲನೆ; ಆರ್ಯವರ್ಧನ್​, ರೂಪೇಶ್ ಶೆಟ್ಟಿ​, ಸೋನು ಗೌಡ ಪ್ರವೇಶ..

    ಬೆಂಗಳೂರು: ‘ಬಿಗ್​ ಬಾಸ್​ ಒಟಿಟಿ ಕನ್ನಡ’ದ ಮೊದಲ ಸೀಸನ್​ಗೆ ಶನಿವಾರ ರಾತ್ರಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ರಾತ್ರಿ 7ಕ್ಕೆ ಕಾರ್ಯಕ್ರಮ ಪ್ರಾರಂಭವಾಗಿದ್ದು, ಸ್ಪರ್ಧಿಗಳು ಒಬ್ಬೊಬ್ಬರೇ ಮನೆಗೆ ಪ್ರವೇಶ ಮಾಡುತ್ತಿದ್ದಾರೆ.

    ಮೊದಲ ಹಂತವಾಗಿ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್​, ಸೋನು ಶ್ರೀನಿವಾಸ ಗೌಡ ಮತ್ತು ನಟ ರೂಪೇಶ್​ ಶೆಟ್ಟಿ ಮನೆಗೆ ಎಂಟ್ರಿ ಕೊಟ್ಟಿದ್ದು, ನಂತರ ಮಿಕ್ಕ ಸ್ಪರ್ಧಿಗಳು ಒಬ್ಬೊಬ್ಬರೇ ಮನೆಗೆ ಎಂಟ್ರಿ ಕೊಡಲಿದ್ದಾರೆ.

    ಒಟಿಟಿಯ ಮೊದಲ ಸೀಸನ್​ನಲ್ಲಿ ಯುವಪೀಳಿಗೆಯನ್ನು ರೀಚ್​ ಆಗುವ, ಸೋಷಿಯಲ್​ ಮೀಡಿಯಾ ಬಗ್ಗೆ ಅರಿವಿರುವವರೇ ಇರಲಿದ್ದಾರೆ ಎಂದು ವಯಕಾಮ್​ 18 ಕನ್ನಡ ಕ್ಲಸ್ಟರ್​ ಹೆಡ್​ ಆದ ಪರಮೇಶ್ವರ್​ ಗುಂಡ್ಕಲ್​ ಕೆಲವು ದಿನಗಳ ಹಿಂದೆ ಹೇಳಿದ್ದರು. ಅದರಂತೆ ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯರಾದವರೇ ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ.

    ಬಿಗ್​ಬಾಸ್​​​ ಒಟಿಟಿಗೆ ಚಾಲನೆ; ಆರ್ಯವರ್ಧನ್​, ರೂಪೇಶ್ ಶೆಟ್ಟಿ​, ಸೋನು ಗೌಡ ಪ್ರವೇಶ..

    ಮೂಲಗಳ ಪ್ರಕಾರ ರಾಕೇಶ್​ ಅಡಿಗ, ಚೈತ್ರಾ ಹಳ್ಳಿಕೇರಿ, ಸಾನಿಯಾ ಅಯ್ಯರ್​, ಅರ್ಜುನ್​ ರಮೇಶ್​, ಪತ್ರಕರ್ತ ಸೋಮಣ್ಣ ಮಾಚಿಮಾಡ, ಸ್ಫೂರ್ತಿ ಗೌಡ, ಕಿರಣ್​ ಯೋಗೇಶ್ವರ್​, ಲೋಕೇಶ್​, ಉದಯ್​ ಸೂರ್ಯ, ಅಕ್ಷತಾ ಕುಕ್ಕಿ, ಜಶ್ವಂತ್​-ನಂದು ಮತ್ತು ಜಯಶ್ರೀ ಆರಾಧ್ಯ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ಕೊಡಲಿದ್ದಾರಂತೆ. ಈ 16 ಸದಸ್ಯರ ಪೈಕಿ ಒಬ್ಬರು ವಿಜೇತರಾಗುವುದಷ್ಟೇ ಅಲ್ಲದೆ, ಅಕ್ಟೋಬರ್​ನಲ್ಲಿ ಕಲರ್ಸ್​ ಕನ್ನಡದಲ್ಲಿ ನಡೆಯಲಿರುವ ‘ಬಿಗ್​ ಬಾಸ್​’ನ 9ನೇ ಸೀಸನ್​ನಲ್ಲೂ ಕೆಲವರು ಪಾಲ್ಗೊಳ್ಳಲಿರುವುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts