More

    ಕನ್ನಡ ಬಿಗ್​​​ಬಾಸ್ ಸೀಸನ್ 9 ಗೆ ಕ್ಷಣಗಣನೆ: ಹೇಗಿದೆ ಗೊತ್ತಾ ದೊಡ್ಮನೆ..!

    ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಸಾರವಾಗಲಿದ್ದು, ಸ್ಪರ್ಧಿಗಳ ಎಂಟ್ರಿಗೆ ದೊಡ್ಮನೆ ತಯಾರಾಗುತ್ತಿದೆ. ಈ ಬಾರಿ ಬಿಗ್‌ ಹೌಸ್‌ ಲುಕ್‌ ಯಾವ ರೀತಿಯ ಇರತ್ತೇ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

    ಬಿಗ್ ಬಾಸ್ ಕನ್ನಡ ಸೀಸನ್ 9 ಸೆಪ್ಟೆಂಬರ್ 24 ರಂದು ಆರಂಭವಾಗಲಿದೆ. ಮೊದಲ ಒಟಿಟಿ ಸೀಸನ್‌ನಲ್ಲಿ ಭಾಗವಹಿಸಿದ್ದ 4 ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ.
    ಹೌದು, ಬಿಗ್‌ಬಾಸ್‌ ಕನ್ನಡ ಓಟಿಟಿ ಮುಕ್ತಾಯಗೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮನೆಯ ಟಿವಿ ಪರದೆ ಮೇಲೆ ಬಿಗ್ ಬಾಸ್ ಕನ್ನಡ ಸೀಸನ್ 9 ಬರಲಿದೆ. ಈಗಾಗಲೇ ಕಿಚ್ಚ ಸುದೀಪ್‌ ಅವರು ಶೋಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

    ಸದ್ಯ ಬಿಗ್‌ ಹೌಸ್‌ ಬಗ್ಗೆ ಕುತೂಹಲ ಮೂಡಿದೆ. ಈ ಕುರಿತು ಕಲರ್ಸ್ ಕನ್ನಡ ಬಿಸ್ನೆಸ್​ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಹೊಸ ಫೋಟೋ ಒಂದನ್ನು ತಮ್ಮ‌ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಹುತೇಕ ಸಿದ್ಧತೆ ನಡೆದಿದೆ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

    ಆದ್ರೆ ಮನೆಯಲ್ಲಿ ಹೆಚ್ಚಿನ ಬದಲಾವಣೆ ಏನೂ ಮಾಡಿಲ್ಲ ಎನ್ನಲಾಗಿದೆ. ಶೋ ಪ್ರಾರಂಭವಾಗಲು ಕೇವಲ ಎರಡು ದಿನ ಬಾಕಿ ಇರುವ ಕಾರಣ ಇನ್ನೋವೇಷನ್ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಇದು ಅಭಿಮಾನಿಗಳಲ್ಲಿ ನಿರಾಸೆ ಹುಟ್ಟಿಸಿದೆ.

    ಬಿಗ್ ಬಾಸ್ ಕನ್ನಡ ಓಟಿಟಿಯಿಂದ ಸೆಲೆಕ್ಟ್‌ ಆದ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್ ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಇರಲಿದ್ದಾರೆ. ಒಟ್ಟು 18 ಸ್ಪರ್ಧಿಗಳ ಪೈಕಿ ಸದ್ಯ 4 ಜನರು ಮಾತ್ರ ಆಯ್ಕೆಯಾಗಿದ್ದು, ಇನ್ನೂ ಯಾರ‍್ಯಾರು ಬಿಗ್‌ ಹೌಸ್‌ನಲ್ಲಿ ಲಾಕ್‌ ಆಗ್ತಾರೆ ಅಂತ ಕಾದು ನೋಡಬೇಕಿದೆ.

    ಕೊರಿಯನ್​ ಮಹಿಳೆಯರ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡ ಶಿವಕಾರ್ತಿಕೇಯನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts