More

    ಪತಿಯ ಮುಂದೆ ಪ್ರದರ್ಶಿಸು ಸಾರ್ವಜನಿಕರ ಮುಂದಲ್ಲ! ಟ್ರೋಲ್​ಗೆ ಗುರಿಯಾದ ನಿವೇದಿತಾರ ಹೊಸ ಅವತಾರ

    ಬೆಂಗಳೂರು: ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿನ ಪರಿಚಯ ಪ್ರೀತಿಗೆ ತಿರುಗಿ, ಒಟ್ಟಿಗೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ರ್ಯಾಪರ್​ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ತಾರಾದಂಪತಿ ಎನಿಸಿಕೊಂಡಿದ್ದು, ಯಶಸ್ವಿ ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ. ಕಿರುತೆರೆ ಕಾರ್ಯಕ್ರಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಸಖತ್​ ಆಕ್ಟೀವ್​ ಆಗಿರುತ್ತಾರೆ. ಅದರಲ್ಲೂ ಚಂದನ್​ಗಿಂತ ನಿವೇದಿತಾ ಗೌಡ ಅವರು ಇತ್ತೀಚೆಗೆ ಜಾಲತಾಣದಲ್ಲಿ ಹೆಚ್ಚು ಸಕ್ರೀಯರಾಗಿದ್ದಾರೆ. ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಹೆಚ್ಚೆಚ್ಚು ಆಕ್ಟೀವ್​ ಆಗಿದ್ದಾರೆ.

    ಇನ್ನು ನಿವೇದಿತಾ ಗೌಡ ಅವರು ತುಂಡುಡುಗೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ಗ್ಲಾಮರ್​ ಗೊಂಬೆ ಎಂದೇ ಹೆಸರು ವಾಸಿಯಾಗಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ನಿವೇದಿತಾ, ಬಿಕಿನಿ ಧರಿಸಿ, ಸೊಂಟಕ್ಕೆ ಬಟ್ಟೆ ಕಟ್ಟಿಕೊಂಡು ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

    ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುವ ಇಂಡೋನೇಷ್ಯಾ ದೇಶದ ‘ಬಾಲಿ’ಗೆ ಸೋಲೋ ಟ್ರಿಪ್ ಕೈಗೊಂಡಿರುವ ಬಗ್ಗೆ ಇತ್ತೀಚೆಗೆ ನಿವೇದಿತಾ ತಮ್ಮ ಇನ್ಸ್​​ಟಾಗ್ರಾಂನಲ್ಲಿ ರೀಲ್ಸ್​ ಮುಖಾಂತರ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಬಾಲಿಯಲ್ಲಿ ತೆಗೆದಿರುವ ಫೋಟೋಗಳನ್ನು ರೀಲ್ಸ್​ ಮಾಡಿ ಹಂಚಿಕೊಂಡಿದ್ದಾರೆ. ನಿವೇದಿತಾ ಗೌಡ ಅಪ್ಲೋಡ್ ಮಾಡಿರುವ ಈ ಹಾಟ್​ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ.

    ಮತ್ತೆ ನಿವೇದಿತಾ ಟ್ರೋಲ್​
    ಸದಾ ಟ್ರೋಲ್​ ಆಗುವ ನಿವೇದಿತಾ ಈ ಬಾರಿಯು ತುಸು ಹೆಚ್ಚೇ ಟ್ರೋಲ್​ ಆಗಿದ್ದಾರೆ. ಅದಕ್ಕೆ ಕಾರಣ ಈ ಬಾರಿ ಅವರ ಹರಿಬಿಟ್ಟಿರುವ ಬಿಕಿನಿ ಫೋಟೋ. ಬಹುತೇಕ ನೆಟ್ಟಿಗರು ನಿವೇದಿತಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೆಟ್ಟಿಗರೊಬ್ಬರು ರಾಧಿಕ ಪಂಡಿತ್​ ಉದಾಹರಣೆ ನೀಡಿ, ನಿವೇದಿತಾಗೆ ಮಾತಿನ ಪಂಚ್​ ನೀಡಿದ್ದಾರೆ. ಮದುವೆಯಾದ ಮೇಲೆ ಒಂದು ಮಿತಿ ಇರುತ್ತದೆ. ರಾಧಿಕಾ ಪಂಡಿತ್​ ಸಹ ಟಾಪ್​ ಹೀರೋಯಿನ್​ ಆಗಿದ್ದಂಥವರು. ಮದುವೆಯಾದ ಬಳಿಕ ಅವರು ಹೇಗಿದ್ದಾರೆ ನೋಡಿ. ನಿಮ್ಮ ಪತಿಯ ಮುಂದೆ ನಿಮ್ಮ ದೇಹವನ್ನು ಪ್ರದರ್ಶಿಸಿ, ಅದನ್ನು ಬಿಟ್ಟು ಸಾರ್ವಜನಿಕರ ಮುಂದಲ್ಲ ಎಂದು ಕಿಡಿಕಾಡಿದ್ದಾರೆ.

    ನೀವು ವಿದೇಶಿಗಳಲ್ಲ. ಇರೋ ಗೌರವವನ್ನು ಕಳೆದುಕೊಳ್ಳಬೇಡಿ, ಸ್ವಲ್ಪ ಸಂಸ್ಕಾರ ಕಲಿತುಕೊಳ್ಳಿ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾರೆ. ದುಡ್ಡನ ಯಾರ ಬೇಕಾದರೂ ಸಂಪಾದನೆ ಮಾಡಬಹುದು ಆದರೆ, ಹೇಗೆ ಮಾಡಿದ್ದೀವಿ ಅನ್ನೋದೆ ಮುಖ್ಯ ಸಹೋದರಿ ನಿವೇದಿತಾ ಎಂದು ಮತ್ತೊರ್ವ ನೆಟ್ಟಿಗ ಟೀಕಿಸಿದ್ದಾರೆ.

    ಅವ್ವಾ ತಾಯಿ ನಿಂಗು ಅತ್ತೆ, ಮಾವ ಎಲ್ಲ ಇದಾರೆ. ಮದುವೆ ಆಗಿದೆ ಅನ್ನೋದು ನೆನಪಿನಲ್ಲಿರಲಿ. ನನ್ನ ಇಷ್ಟ, ನನ್ನ ಜೀವನ, ನಾನು ಏನು ಬೇಕಾದರೂ ಹಾಕಿಕೊಳ್ಳುತ್ತೇನೆ ಅಂತಾ ಹೇಳುವುದಲ್ಲ. ಸಮಾಜದಲ್ಲಿ ಸ್ವಲ್ಪ ಗೌರವ ಮುಖ್ಯ. ಹೆಣ್ಣು ಮಗಳಾಗಿ ನಮಗೆ ನೋಡೋಕೆ ಆಗಲ್ಲ. ಥೂ ನಿನಗೆ ನಾಚಿಕೆ ಆಗಬೇಕು ಎಂದು ಇನ್ನೊರ್ವ ನೆಟ್ಟಿಗ ಬುದ್ಧಿಮಾತು ಹೇಳಿದ್ದಾರೆ.

    ಇದೊಂದು ಬಾಕಿ ಇತ್ತು ಚಂದನ ಶೆಟ್ರೆ ಹುಷಾರು ನಿಮ್ಮನ್ನು ಮಾರಿ ಬಿಟ್ಟಳು, ಥೂ ನಿನ್ ಜನ್ಮಕ್ಕೆ ಮಾನ ಮರ್ಯಾದೆ ಇಲ್ವಾ, ಚಂದನ್ ಶೆಟ್ಟಿ ಅವರನ್ನು ಬಿಗ್​ಬಾಸ್​ನಲ್ಲಿ ಗೆಲ್ಲಿಸಿದ ಜನಗಳಿಗೆ ಹಾಗೂ ಚಂದನ್ ಶೆಟ್ಟಿ-ನಿವೇದಿತಾ ಗೌಡ ಇಬ್ಬರು ಸೇರಿ ಕೊಡುತ್ತಿರುವ ಬಿಗ್ ಗಿಫ್ಟ್ ಅನ್ನು ಎಲ್ಲಾ ಕರ್ನಾಟಕ ಜನ ಹಾಗೂ ಬೇರೆ ರಾಜ್ಯದ ಜನಗಳು ನೋಡಿ ಖುಷಿ ಪಡಿ ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ವ್ಯಂಗ್ಯವಾಡುತ್ತಿದ್ದಾರೆ.

    ನಾನು ಸೋಲೋ ಟ್ರಿಪ್ ಹೋಗಿದ್ದೇನೆ. ಹೀಗಾಗಿ ಫೋಟೋ ಕ್ಲಿಕ್ಕಿಸಲು ಯಾರೂ ಇರಲಿಲ್ಲ. ನನಗೆ ಸೆಲ್ಫಿ ಸ್ಟಿಕ್ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಿವೇದಿತಾ ಬಾಲಿಗೆ ಸೋಲೋ ಟ್ರಿಪ್ ಹೋಗುತ್ತಿರುವುದು ಗೊತ್ತಾಗುತ್ತಿದ್ದಂತೆ ಅನೇಕರು ಚಂದನ್ ಶೆಟ್ಟಿ ಎಲ್ಲಿ ಎಂದು ಪ್ರಶ್ನಿಸಿದ್ದರು. ಆದರೆ ನಿವೇದಿತಾ ಗೌಡ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ, ನಾನು ಮೊದಲ ಬಾರಿಗೆ ಸೋಲೋ ಪ್ರವಾಸ ಕೈಗೊಂಡಿದ್ದೇನೆ. ಈ ಬಗ್ಗೆ ನಾನು ಉತ್ಸಾಹದಿಂದ ಇದ್ದು, ಅಷ್ಟೇ ಕುತೂಹಲದಿಂದ ಇದ್ದೇನೆ ಎಂದು ಹೇಳಿಕೊಂಡಿದ್ದರು. (ಏಜೆನ್ಸೀಸ್​)

    VIDEO: ತುಂಡುಡುಗೆಯಲ್ಲಿ ಸೊಂಟ ಬಳುಕಿಸಿದ ನಿವೇದಿತಾ ಗೌಡ; ಫೋಟೋ ಕ್ಲಿಕ್ಕಿಸಿದ್ದು ಯಾರೆಂದು ಗೊತ್ತಾ?

    ಮೈ ಕಾಣಿಸುವಂತೆ ಅರ್ಧಂಬರ್ಧ ಬಟ್ಟೆ ಯಾಕೆ​ ಹಾಕ್ತೀಯಾ?: ನೆಟ್ಟಿಗನ ಕಾಮೆಂಟ್​ಗೆ ನಿವೇದಿತಾ ಗರಂ

    PHOTOS| ಸಲಿಂಗಕಾಮ ಅಪರಾಧವಲ್ಲ ಎಂದಿದ್ದ ಸಲಿಂಗ ಜೋಡಿಯ ಎಂಗೇಜ್​ಮೆಂಟ್ ಫೋಟೋಗಳು ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts