More

    ಮೈ ಕಾಣಿಸುವಂತೆ ಅರ್ಧಂಬರ್ಧ ಬಟ್ಟೆ ಯಾಕೆ​ ಹಾಕ್ತೀಯಾ?: ನೆಟ್ಟಿಗನ ಕಾಮೆಂಟ್​ಗೆ ನಿವೇದಿತಾ ಗರಂ

    ಬೆಂಗಳೂರು: ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿನ ಪರಿಚಯ ಪ್ರೀತಿಗೆ ತಿರುಗಿ, ಒಟ್ಟಿಗೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ರ್ಯಾಪರ್​ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ತಾರಾದಂಪತಿ ಎನಿಸಿಕೊಂಡಿದ್ದು, ಯಶಸ್ವಿ ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ. ಕಿರುತೆರೆ ಕಾರ್ಯಕ್ರಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಸಖತ್​ ಆಕ್ಟೀವ್​ ಆಗಿರುತ್ತಾರೆ.

    ಚಂದನ್​ಗಿಂತ ನಿವೇದಿತಾ ಗೌಡ ಅವರು ಇತ್ತೀಚೆಗೆ ಜಾಲತಾಣದಲ್ಲಿ ಹೆಚ್ಚು ಸಕ್ರೀಯರಾಗಿದ್ದಾರೆ. ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಹೆಚ್ಚೆಚ್ಚು ಆಕ್ಟೀವ್​ ಆಗಿದ್ದಾರೆ. ಆದರೆ, ನಿವೇದಿತಾ ಗೌಡ ಹಾಕುವ ಪ್ರತಿ ವಿಡಿಯೋ ಮತ್ತು ಫೋಟೋಗೆ ಎಷ್ಟು ಮೆಚ್ಚುಗೆಯ ಕಾಮೆಂಟ್​ಗಳು ಬರುತ್ತವೆಯೋ ಅಷ್ಟೇ ಟೀಕೆಗಳು ಸಹ ಬರುತ್ತಿವೆ. ಇದರಿಂದ ವಿಚಲಿತಗೊಂಡಿರುವ ನಿವೇದಿತಾ ಯೂಟ್ಯೂಬ್​ ವಿಡಿಯೋ ಮೂಲಕ ಟೀಕಾಕಾರಿಗೆ ತಿರುಗೇಟು ನೀಡಿದ್ದಾರೆ.

    ದ್ವೇಷಿಸುವವರಿಗೆ ಪ್ರತ್ಯುತ್ತರ ಎಂಬ ಶೀರ್ಷಿಕೆಯಲ್ಲಿ ಯೂಟ್ಯೂಬ್​ ವಿಡಿಯೋ ಅಪ್​ಲೋಡ್​ ಮಾಡಿರುವ ನಿವೇದಿತಾ ನೆಗಿಟಿವ್​ ಕಾಮೆಂಟ್​ಗಳಿಗೆ ಉತ್ತರಿಸಿದ್ದಾರೆ. ಕನ್ನಡ ಕಲಿ, ಇಲ್ಲಾ ಅಂದ್ರೆ ಇಂಗ್ಲಿಷ್​ ಚಾನೆಲ್​ ಶುರು ಮಾಡು ಎಂದು ಕಾಮೆಂಟ್​ ಮಾಡಿವನಿಗೆ ಉತ್ತರ ನೀಡಿರುವ ನಿವೇದಿತಾ, ಯೂಟ್ಯೂಬ್​ ಒಂದು ಜಾಗತಿಕ ವೇದಿಕೆ ನನ್ನ ಚಾನೆಲ್​ನಲ್ಲಿ ಎಲ್ಲ ರೀತಿ ಆಡಿಯನ್ಸ್​ ಇದಾರೆ ಅದಕ್ಕೆ ನಾನು ಎರಡು ಭಾಷೆಯಲ್ಲೂ ಮಾತನಾಡುತ್ತೇನೆ ಎಂದಿದ್ದಾರೆ.

    ಎಲ್ಲರ ಮನೆಯಲ್ಲಿ ನಿಮ್ಮ ರೀತಿಯ ಹೆಣ್ಣು ಮಗಳಿದ್ದರೆ ಅವರ ಹೊಟ್ಟೆ ತುಂಬಿದ ಹಾಗೇ ಎಂದು ಕಾಮೆಂಟ್​ ಮಾಡಿ ನೆಟ್ಟಿಗನಿಗೆ ಖಾರವಾಗಿ ಉತ್ತರಿಸಿದ ನಿವೇದಿತಾ ಹೆಣ್ಣು ಮಕ್ಕಳೇ ಅಡುಗೆ ಮಾಡಬೇಕಾ? ಎಲ್ಲ ಕೆಲಸವನ್ನು ಹೆಣ್ಣು ಮಕ್ಕಳೇ ಮಾಡಬೇಕಾ? ಮನೆಯಲ್ಲಿ ಗಂಡು ಮಕ್ಕಳು ಯಾಕಿರುವುದು ಎಂದು ಪ್ರತಿ ಪ್ರಶ್ನೆ ಕೇಳಿದರು. ಗಂಡು ಮಕ್ಕಳು ಕೂಡ ಮಾಡಲಿ, ಅವರು ಯಾವಾಗ ಇದನೆಲ್ಲ ಕಲಿಯೋದು? ಈ ರೀತಿ ಕಾಮೆಂಟ್​ ಮಾಡಬೇಡಿ. ಎಲ್ಲರೂ ಸಮಾನರು. ಎಲ್ಲ ಕೆಲಸವನ್ನು ಸಮಾನವಾಗಿ ಹಂಚಿಕೊಂಡು ಮಾಡಬೇಕು ಎಂದರು.

    ಪ್ರಚಾರದ ವಿಡಿಯೋ ಮಾಡಿ ಜನರನ್ನು ಮೂರ್ಖರನ್ನಾಗಿಸಬೇಡಿ ಎಂಬ ಕಾಮೆಂಟ್​ಗೆ ನಾನು ಪ್ರಾಡಕ್ಟ್​ ಬಗ್ಗೆ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ಇಷ್ಟವಾದ್ರೆ ತೆಗೆದುಕೊಳ್ಳುತ್ತಾರೆ. ತೆಗೆದುಕೊಳ್ಳಿ ಎಂದು ನಾನೇನು ಬಲವಂತ ಮಾಡಿಲ್ಲ ಎಂದರು. ಮದುವೆಯಾದ ಮೇಲೆ ಇವೆಲ್ಲ ಯಾಕೆ? ಇಲ್ಲಿಗೆ ನಿಲ್ಸಿ, ನಿಮ್ಮ ಗಂಡನ ಮರ್ಯಾದೆ ಉಳಿಸಿ ಎಂದ ನೆಟ್ಟಿಗನಿಗೆ ನಾನು ಗಂಡನಿಗೆ ಮರ್ಯದೆ ತೆಗೆಯುವ ಕೆಲಸ ಏನು ಮಾಡುತ್ತಿಲ್ಲ. ನನ್ನ ಗಂಡನಿಗೆ ಹೊರೆಯಾಗದೆ ನಾನು ನನ್ನ ಕೈಲಾದಷ್ಟು ಸಂಪಾದನೆ ಮಾಡುತ್ತಿದ್ದೇನೆ. ನಾನು ಮಾಡುವುದರಲ್ಲಿ ಏನು ತಪ್ಪಿದೆ? ಈ ರೀತಿ ಕಾಮೆಂಟ್​ ಮಾಡಬೇಡಿ ಎಂದು ಗರಂ ಆದರು.

    ನೀವು ಅರ್ಧಬರ್ಧಂ ಬಟ್ಟೆ ಹಾಕುವ ಬದಲು ಮೈತುಂಬಾ ಬಟ್ಟೆ ಹಾಕುವುದನ್ನು ಕಲಿ ಎಂದು ಕಾಮೆಂಟ್​ ಮಾಡಿದ ನೆಟ್ಟಿಗನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನಿವೇದಿತಾ, ನನ್ನ ಬಟ್ಟೆ ನನ್ನ ಆಯ್ಕೆ. ನಿಮ್ಮ ಬಟ್ಟೆ ಅದು ನಿಮ್ಮ ಆಯ್ಕೆ ನಿವ್ಯಾರು ನನ್ನ ಕೇಳುವುದಕ್ಕೆ? ನಾನೇನಾದರೂ ಬಂದು ನಿಮ್ಮನ್ನು ಈ ಬಟ್ಟೆ ಯಾಕೆ ಹಾಕಿಕೊಂಡಿದ್ದೀರಾ ಅಂತಾ ಕೇಳಿದನಾ? ನಮ್ಮ ವೈಯಕ್ತಿಕ ವಿಚಾರಗಳನ್ನು ಗೌರವಿಸಿ ಎಂದು ಪಾಠ ಹೇಳಿದರು.

    ಹೀಗೆ ಸಾಕಷ್ಟು ಕಾಮೆಂಟ್​ಗಳಿಗೆ ನಿವೇದಿತಾ ಗೌಡ ಉತ್ತರ ನೀಡುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಇನ್ನೊಬ್ಬರ ಭಾವನೆಗಳನ್ನು ಕದಡಬೇಡಿ. ಎಲ್ಲರನ್ನು ಗೌರವಿಸಿ ಎಂದು ಕೇಳಿಕೊಂಡಿದ್ದಾರೆ.

    ಚಂದನ್​ ಶೆಟ್ಟಿ ಮರ್ಯಾದೆಯಾದ್ರೂ ಉಳಿಸು… ಪ್ರ್ಯಾಂಕ್​​ ವಿಡಿಯೋ ಹರಿಬಿಟ್ಟ ನಿವೇದಿತಾಗೆ ನೆಟ್ಟಿಗರ ಪಾಠ!

    ಮತ್ತೆ ಟ್ರೋಲ್ ಆದ ಚಂದನ್-ನಿವೇದಿತಾ! ಸೋತು ಹಾಗಲಕಾಯಿ ತಿಂದ ಪತ್ನಿ, ಗೆದ್ದು ಆ್ಯಪಲ್​ ತಿಂದ ಪತಿ

    ಆರೋಗ್ಯದಲ್ಲಿ ನಿರಂತರ ಏರುಪೇರು: ಪತ್ನಿಯ ಗೆಳತಿಯ ನೆರವು ಪಡೆದ ವ್ಯಕ್ತಿಗೆ ಗೊತ್ತಾಯ್ತು ಘನ ಘೋರ ಸತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts