More

    Video | ಚಳಿಗೆ ಮೈ ಕಾಯಿಸಿಕೊಳ್ಳಲು ಅಡುಗೆ ಮನೆಗೇ ಬಂದ ಕಾಳಿಂಗ ಸರ್ಪ!

    ಶಿವಮೊಗ್ಗ: ರಾಜ್ಯದಲ್ಲಿ ಚಳಿಯಿಂದಾಗಿ ಜನರು ನಡುಕ ಅನುಭವಿಸುತ್ತಿದ್ದರೆ, ಅತ್ತ ಕಾಳಿಂಗ ಸರ್ಪವೊಂದು ತನ್ನ ಆವಾಸಸ್ಥಾನದಿಂದ ಜನರ ವಾಸಸ್ಥಾನಕ್ಕೆ ಬಂದಿದ್ದಲ್ಲದೆ ನೇರ ಅಡುಗೆ ಮನೆಗೇ ಹೋಗಿ ಮೈ ಕಾಯಿಸಿಕೊಂಡಿದೆ. ಕರ್ರಗೆ ಮಿರಮಿರ ಮಿನುಗವ ಈ ಕಾಳಿಂಗವನ್ನು ಕಂಡವರ ಮೈ ಒಮ್ಮೆ ಜುಮ್​ ಅನಿಸಿದ್ದರೆ ಅಚ್ಚರಿಯೇ ಅಲ್ಲ.

    ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಸರೆ ಸಮೀಪದ ಕೂಡ್ಲುಕೊಪ್ಪ ಮಂಜಪ್ಪ ಎಂಬುವರ ಮನೆಯ ಅಡುಗೆ ಮನೆಯಲ್ಲಿ ಬರೋಬ್ಬರಿ ಎಂಟು ಅಡಿ ಉದ್ದದ ಈ ಕಾಳಿಂಗ ಸರ್ಪ ಅಡಗಿ ಕುಳಿತಿತ್ತು. ಇದ್ದಕ್ಕಿದ್ದಂತೆ ಅಡುಗೆ ಕೋಣೆಯಲ್ಲಿ ಕಾಳಿಂಗವನ್ನು ಕಂಡ ಮನೆಯವರು ಬೆಚ್ಚಿಬಿದ್ದಿದ್ದರು.

    ಇದನ್ನೂ ಓದಿ: ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

    ತಕ್ಷಣ ಅವರು ಆಗುಂಬೆ ಮಳೆಕಾಡಿನ ಉರಗ ತಜ್ಞ ಅಜಯಗಿರಿ ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಹಾವನ್ನು ಕಾಡಿನೊಳಕ್ಕೆ ಬಿಟ್ಟಿದ್ದಾರೆ.

    Video | ಚಳಿಗೆ ಮೈ ಕಾಯಿಸಿಕೊಳ್ಳಲು ಅಡುಗೆ ಮನೆಗೇ ಬಂದ ಕಾಳಿಂಗ ಸರ್ಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts