More

    5 ಲಕ್ಷ ಮಂದಿ ಸೇರಲಿರುವ ‘ಬೃಹತ್ ಕ್ಷತ್ರಿಯ ಸಮಾವೇಶ’: ಎಲ್ಲಿ, ಯಾವಾಗ?

    ಬೆಂಗಳೂರು: ರಾಜಕೀಯ ರಂಗದಲ್ಲಿ ಕ್ಷತ್ರಿಯ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಗಬೇಕೆಂಬ ಉದ್ದೇಶದಿಂದ ಸ್ಪಷ್ಟ ಸಂದೇಶ ರವಾನಿಸಲು ಕರ್ನಾಟಕ ಕ್ಷತ್ರಿಯ ಒಕ್ಕೂಟ ವತಿಯಿಂದ ಭಾನುವಾರ (ಜ.29) ಬೆಳಗ್ಗೆ 10 ಗಂಟೆಗೆ ಅರಮನೆ ಮೈದಾನದಲ್ಲಿ ‘ಬೃಹತ್ ಕ್ಷತ್ರಿಯ ಸಮಾವೇಶ’ ನಡೆಯಲಿದೆ.

    ಸಾವಿರಾರು ವರ್ಷಗಳ ಪರಂಪರೆ ಮತ್ತು ಇತಿಹಾಸ ಹೊಂದಿರುವ ಕ್ಷತ್ರಿಯ ಸಮುದಾಯದಲ್ಲಿ ಮರಾಠರು, ಅರಸು, ಅಗ್ನಿಕುಲ, ವಹ್ನಿಕುಲ, ತಿಗಳ, ಭಾವಸಾರ, ರಾಜು, ಸೋಮವಂಶ ಸಹಸ್ರಾರ್ಜುನ ಹಾಗೂ ರಜಪೂತ ಕ್ಷತ್ರಿಯ ಸೇರಿ 38 ಒಳಪಂಗಡಗಳಿವೆ. ರಾಜ್ಯಾದ್ಯಂತ ಅಂದಾಜು ಲಕ್ಷಾಂತರ ಜನರು ನೆಲೆಸಿದ್ದಾರೆ. ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ನಮ್ಮ ಸಮಾಜವನ್ನು ಎಲ್ಲ ಸರ್ಕಾರಗಳು ಕಡೆಗಣಿಸಿವೆ. ಸರ್ಕಾರದಿಂದ ಸಿಗಬೇಕಾದ ಹಲವು ಸವಲತ್ತುಗಳಿಂದ ವಂಚಿತರಾಗಿದ್ದೇವೆ. ರಾಜಕೀಯ ಸೇರಿ ಎಲ್ಲ ಸವಲತ್ತು ಪಡೆಯಲು ಸಮಾಜದ ಶಕ್ತಿ ಪ್ರದರ್ಶನಕ್ಕಾಗಿ ಸಮಾವೇಶ ಆಯೋಜಿಸಲಾಗುತ್ತಿದೆ. ಅಂದಾಜು 5 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ಒಕ್ಕೂಟ ಅಧ್ಯಕ್ಷ ಉದಯ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.

    ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ಸಚಿವ ಆನಂದ್ ಸಿಂಗ್ ಸೇರಿ ಶಾಸಕರು ಮತ್ತು ಮಾಜಿ ಶಾಸಕರು ಸೇರಿ ಪಕ್ಷಾತೀತವಾಗಿ ಎಲ್ಲ ಗಣ್ಯರಿಗೂ ಆಹ್ವಾನಿಸಲಾಗಿದೆ. ಜನಾಂಗದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಲು ನಿರ್ಧರಿಸಲಾಗಿದೆ ಎಂದರು.

    ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಕ್ಷತ್ರಿಯ ಸಮುದಾಯ ಮುಖಂಡರುಗಳಿದ್ದು, ಕೆಲವರು ಶಾಸಕರು ಮತ್ತು ಸಚಿವರು ಇದ್ದಾರೆ. ಆದರೆ, ಸಮಾಜದ ಬಗ್ಗೆ ಸಮರ್ಪಕವಾಗಿ ಯಾರು ಧ್ವನಿ ಎತ್ತುತ್ತಿಲ್ಲ. ಬೆಂಗಳೂರು, ಬೆಂ.ಗ್ರಾಮಾಂತರ, ಬೆಳಗಾವಿ, ಬೀದರ್, ಬಾಗಲಕೋಟೆ,ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಮ್ಮ ಜನಾಂಗ ವಾಸಿಸುತ್ತಿದ್ದು,150 ಕ್ಷೇತ್ರಗಳಲ್ಲಿ 10-15 ಸಾವಿರ ಮತದಾರರಿದ್ದಾರೆ. ರಾಜ್ಯದ ಉದ್ದಗಲಕ್ಕೂ ಚದುರಿ ಹೋಗಿರುವ ಜನಾಂಗವನ್ನು 2018ರಿಂದ ಸಂಘಟಿಸುವ ಕಾರ್ಯ ಮಾಡಲಾಗುತ್ತಿದೆ. 15 ವರ್ಷ ಹಿಂದೆ ಬೃಹತ್ ಸಮಾವೇಶ ನಡೆಸಲಾಗಿತ್ತು. ಪ್ರಜಾಪ್ರಭುತ್ವದಲ್ಲಿ ಆಯಾ ಸಮುದಾಯಗಳು ಸಂಖ್ಯಾಬಲಕ್ಕೆ ಅನುಗುಣವಾಗಿ ಸವಲತ್ತು, ಅನುದಾನ, ಅಧಿಕಾರ ಸೇರಿ ಇತರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಹಾಗಾಗಿ, ಸಮುದಾಯದ ಅಸ್ತಿತ್ವಕ್ಕಾಗಿ ಮತ್ತು ಸೌಲಭ್ಯಕ್ಕಾಗಿ ನಾವೆಲ್ಲರೂ ಒಗ್ಗೂಡಿ ಈಗ ಬೃಹತ್ ಸಮಾವೇಶ ನಡೆಸಲಾಗುತ್ತಿದೆ ಎಂದು ಉದಯ್ ಸಿಂಗ್ ವಿವರಿಸಿದರು.

    ಬಜೆಟ್‌ನಲ್ಲಿ ಆದ್ಯತೆ ನೀಡಿ: ನಮ್ಮ ಸಮಾಜದ ಅಭ್ಯುದಯಕ್ಕಾಗಿ ಬಜೆಟ್‌ನಲ್ಲಿ ಆದ್ಯತೆ ನೀಡಬೇಕೆಂದು ಸರ್ಕಾರಕ್ಕೆ ಉದಯ್ ಸಿಂಗ್ ಒತ್ತಾಯಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆ ಸ್ಪರ್ಧಿಸಲು ಪಕ್ಷಗಳು ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಕಾರಣಕ್ಕೂ ನಾನು ಚುನಾವಣೆಯಲ್ಲಿ ನಿಲ್ಲುವುದಿಲ್ಲ. ಜನಾಂಗದ ಮುಖಂಡರುಗಳಿಗೆ ಟಿಕೆಟ್ ನೀಡಬೇಕೆಂದು ಉದಯ್ ಸಿಂಗ್ ಹೇಳಿದರು.

    ರಾಜ್ಯ ತಿಗಳ ಕ್ಷತ್ರಿಯ ಅಧ್ಯಕ್ಷ ಸುಬ್ಬಣ್ಣ, ರಾಜ್ಯ ಮರಾಠಿ ಪರಿಷತ್ತು ಅಧ್ಯಕ್ಷ ಸುರೇಶ್ ರಾವ್, ಕ್ಷತ್ರಿಯ ಸಮಾಜದ ಪ್ರಮುಖ ಮುಖಂಡರಾದ ದಿನೇಶ್ ರಾಜ್, ಜೈರಾಜ್, ಒಕ್ಕೂಟ ಕಾರ್ಯದರ್ಶಿ ರೋಹಿತ್ ಮುನಿರಾಜು ಮತ್ತಿತರರಿದ್ದರು.

    ಮನೆಯಲ್ಲಿ ಯಾರೂ ಇಲ್ಲದಾಗ ಕಳ್ಳತನಕ್ಕೆ ಬಂದವರು ಹೆದರಿ ಓಡಿಹೋದ್ರು: ಆಗಿದ್ದಾದರೂ ಏನು?

    1 ನಿಮಿಷಕ್ಕೆ 69 ತೆಂಗಿನಕಾಯಿ ಒಡೆದ ಸಾಹಸಿ; 12,008 ಕಾಯಿಗಳನ್ನು ಒಡೆದು ಬಳಿಕ ಶಿವತಾಂಡವ ನೃತ್ಯ

    ಪತ್ನಿಯಿಂದಲೇ ಜೀವನಾಂಶ ಕೇಳಿದ ಭೂಪ: ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts