More

    Breaking News| ಗುಜರಾತ್​ ಗಲಭೆ ಸಾಕ್ಷ್ಯಚಿತ್ರ ವಿವಾದ: ದೆಹಲಿಯ ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ

    ನವದೆಹಲಿ: ಗುಜರಾತ್​ ಗಲಭೆ ಕುರಿತ ಸಾಕ್ಷ್ಯಾಚಿತ್ರ ಬಿಡುಗಡೆ ಮಾಡಿ ಭಾರತದಲ್ಲಿ ವಿವಾದದ ಅಲೆ ಎಬ್ಬಿಸಿದ್ದ ಬ್ರಿಟಿಷ್​ ಬ್ರಾಡ್​ಕಾಸ್ಟಿಂಗ್​ ಸರ್ವೀಸ್​ (ಬಿಬಿಸಿ)ನ ದೆಹಲಿ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು (ಫೆ.14) ದಾಳಿ ಮಾಡಿದ್ದಾರೆ.

    ಲಂಡನ್​ ಮೂಲದ ಬಿಬಿಸಿ ಕಚೇರಿ ಮೇಲೆ ದಾಳಿ ಏಕೆ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ, ಬಿಬಿಸಿ ಕಚೇರಿಯನ್ನು ಮುಚ್ಚಲಾಗಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ. ದೆಹಲಿ ಮಾತ್ರವಲ್ಲದೆ, ಮುಂಬೈ ಕಚೇರಿಯ ಮೇಲೂ ದಾಳಿ ನಡೆದಿದೆ.

    ಮೂಲಗಳ ಪ್ರಕಾರ ಉದ್ಯೋಗಿಗಳ ಮೊಬೈಲ್​ ಫೋನ್​ ಅನ್ನು ವಶಕ್ಕೆ ಪಡೆದಿರುವುದಾಗಿ ಮತ್ತು ಅವರನ್ನು ಮನೆಗ ಹೋಗುವಂತೆ ಅಧಿಕಾರಿಗಳುಲಂಡನ್​ ಮೂಲದ ಬಿಬಿಸಿ ಕಚೇರಿ ಮೇಲೆ ದಾಳಿ ಏಕೆ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ, ಬಿಬಿಸಿ ಕಚೇರಿಯನ್ನು ಮುಚ್ಚಲಾಗಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ. ದೆಹಲಿ ಮಾತ್ರವಲ್ಲದೆ, ಮುಂಬೈ ಕಚೇರಿಯ ಮೇಲೂ ದಾಳಿ ನಡೆದಿದೆ. ಉದ್ಯೋಗಿಗಳ ಮೊಬೈಲ್​ ಫೋನ್​ ಅನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಅವರನ್ನು ಮನೆಗೆ ಹೋಗುವಂತೆ ಹೇಳಿದ್ದಾರೆ. ಉದ್ಯೋಗಿಗಳು ಮಧ್ಯಾಹ್ನದ ಪಾಳಿಯಲ್ಲಿದ್ದರು. ಅವರೆಲ್ಲರನ್ನು ವರ್ಕ್​ ಫ್ರಮ್​ ಮಾಡುವಂತೆ ಹೇಳಿ ಕಳುಹಿಸಲಾಗಿದೆ.  ಹೇಳಿದ್ದಾರೆ. ಉದ್ಯೋಗಿಗಳು ಮಧ್ಯಾಹ್ನದ ಪಾಳಿಯಲ್ಲಿದ್ದರು. ಅವರೆಲ್ಲರನ್ನು ವರ್ಕ್​ ಫ್ರಮ್​ ಮಾಡುವಂತೆ ಹೇಳಿ ಕಳುಹಿಸಲಾಗಿದೆ.

    ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಬಿಬಿಸಿ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಲಾಖೆಯು ಕಂಪನಿಯ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮತ್ತು ಅದರ ಭಾರತೀಯ ಕಚೇರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

    ಬಿಬಿಸಿ ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಕುರಿತಾದ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದೆ. ಆ ಸಾಕ್ಷ್ಯಚಿತ್ರದ ಪ್ರಮುಖ ವಿಷಯ ಏನೆಂದರೆ 2002ರಲ್ಲಿ ನಡೆದ ಗುಜರಾತ್ ಗಲಭೆ ಅಥವಾ ಗೋದ್ರಾ ಹತ್ಯಾಕಾಂಡ. ಅಂದು ನಡೆದ ಘಟನೆಯ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ ಮಾಡಿದೆ. ಅಷ್ಟಕ್ಕೂ ಈ ಸಾಕ್ಷ್ಯಚಿತ್ರದಲ್ಲಿ ಏನಿದೆ ಎಂದು ನೋಡಿದಾಗ ಸ್ಪಷ್ಟವಾಗಿ ಗೊತ್ತಾಗುತ್ತೆ, ಇದೊಂದು ಷಡ್ಯಂತ್ರ ಎಂಬುದು.

    2002ರಲ್ಲಿ ಗೋದ್ರಾ ಘಟನೆ ನಡೆಯುತ್ತದೆ. 2012ರಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರಿಗೆ ಕ್ಲೀನ್​ಚಿಟ್​​​ ಕೊಡುತ್ತದೆ. 2022ರಲ್ಲಿ ಸುಪ್ರೀಂಕೋರ್ಟ್, ಎಸ್ಐಟಿಯ ತೀರ್ಪನ್ನು ಎತ್ತಿ ಹಿಡಿಯುತ್ತದೆ. ಇದೆಲ್ಲ ಆದಮೇಲೆ 2023ರಲ್ಲಿ ಬಿಬಿಸಿ ಅವರು “ದಿ ಮೋದಿ ಕ್ವೆಶ್ವನ್” ಅನ್ನೋ ಒಂದು ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡುತ್ತದೆ. ಇಷ್ಟೆಲ್ಲ ವರ್ಷ ಸುಮ್ಮನಿದ್ದು, ಈಗ ವರದಿಯನ್ನು ಇಟ್ಟುಕೊಂಡು ಸಾಕ್ಷ್ಯಚಿತ್ರ ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. (ಏಜೆನ್ಸೀಸ್​)

    ಕಳೆದ 4 ವರ್ಷದಲ್ಲಿ 20,455 ಮಂದಿಯನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಟ್ಟ ಬಿಜೆಪಿ ಸರ್ಕಾರ!

    ಇಳಿವಯಸ್ಸಿನಲ್ಲೂ ಕಿಡ್ನಿ ದಾನ ಮಾಡಿ ಮೊಮ್ಮಗನಿಗೆ ಬದುಕು ನೀಡಿದ ಅಜ್ಜಿ!

    ರಾಷ್ಟ್ರೀಯ ಮಾಧ್ಯಮದಲ್ಲಿ ಮಂಡ್ಯ ರಾಜಕಾರಣ, ಕರ್ನಾಟಕ ಚುನಾವಣೆ ಬಗ್ಗೆ ಅಮಿತ್​ ಷಾ ಸ್ಫೋಟಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts