More

    ಇಳಿವಯಸ್ಸಿನಲ್ಲೂ ಕಿಡ್ನಿ ದಾನ ಮಾಡಿ ಮೊಮ್ಮಗನಿಗೆ ಬದುಕು ನೀಡಿದ ಅಜ್ಜಿ!

    ವಿಜಯಪುರ: ನಾನೇನು ಬಿದ್ದು ಹೋಗುವ ಮರ, ಇನ್ನೂ ಬಾಳಿ ಬದುಕಬೇಕಿರುವ ಮೊಮ್ಮಗನಿಗೆ ಬದುಕು ಕಲ್ಪಿಸಿಕೊಡಬೇಕೆಂಬ ಮಹದಾಸೆಯಿಂದ ತನ್ನ ಇಳಿವಯಸ್ಸಿನಲ್ಲೂ ಕಿಡ್ನಿ ದಾನ ಮಾಡುವ ಮೂಲಕ ಅಜ್ಜಿಯೊಬ್ಬಳು ಮೊಮ್ಮಗನ ಬದುಕಿಗೆ ಬೆಳಕಾಗಿದ್ದಾಳೆ!

    ಐತಿಹಾಸಿಕ ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ಯಶೋದಾ ಆಸ್ಪತ್ರೆಯಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಪ್ರಥಮ ಬಾರಿಗೆ ಮೂತ್ರ ಪಿಂಡ ಕಸಿ ಯಶಸ್ವಿಯಾಗಿ ನೆರವೇರಿಸುವ ಮೂಲಕ ಯಶೋದಾ ಆಸ್ಪತ್ರೆ ವೈದ್ಯರು ಕೂಡ ವೈದ್ಯಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸ್ಥಾಪಿಸಿದ್ದಾರೆ.

    ಕಳೆದ 18 ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ 21 ವರ್ಷದ ಯುವಕನಿಗೆ 74ರ ವಯೋಮಾನದ ಅಜ್ಜಿಯ ಮೂತ್ರ ಪಿಂಡ ಕಸಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಅಜ್ಜಿ ಹಾಗೂ ಮೊಮ್ಮಗ ಇದೀಗ ಯಶಸ್ಸಿ ಚಿಕಿತ್ಸೆಯಿಂದ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.

    ಪ್ರಕರಣದ ವಿವರ:
    ಕಳೆದ 18 ವರ್ಷಗಳಿಂದ ಸಚಿನ್​ ಎಂಬ ಯುವಕ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದನು. ಮೂರು ವರ್ಷಗಳಿಂದ ಹಿಮೋ-ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದನು. ಹೀಗಾಗಿ ಈತನಿಗೆ ಮೂತ್ರ ಪಿಂಡದ ಕಸಿ ಮಾಡುವ ಅಗತ್ಯ ಕಂಡುಬಂದಿತ್ತು. ಆದರೆ, ಮೂತ್ರಪಿಂಡ ದಾನಿಗಳು ಇರಲಿಲ್ಲ. ಇಂಥ ಸಂದರ್ಭದಲ್ಲಿ ಸಚಿನ್​ ಅಜ್ಜಿಯೇ ತನ್ನದೊಂದು ಕಿಡ್ನಿ ದಾನ ಮಾಡಲು ಮುಂದೆ ಬಂದಾಗ ಆಸ್ಪತ್ರೆ ವೈದ್ಯ ರವೀಂದ್ರ ಮದ್ದರಕಿ ನೇತೃತ್ವದ ವೈದ್ಯರ ತಂಡ ಮೂತ್ರ ಪಿಂಡ ಕಸಿ ನಡೆಸಿತು. ಇದೀಗ ಅಜ್ಜಿ ಹಾಗೂ ಮೊಮ್ಮಗ ಆರೋಗ್ಯವಾಗಿದ್ದಾರೆ.

    ಇಳಿವಯಸ್ಸಿನಲ್ಲೂ ಕಿಡ್ನಿ ದಾನ ಮಾಡಿ ಮೊಮ್ಮಗನಿಗೆ ಬದುಕು ನೀಡಿದ ಅಜ್ಜಿ!

    ಪ್ರಪ್ರಥಮ ಪ್ರಯೋಗ:
    ವಿಜಯಪುರ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿಯೇ ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಡಾ.ರವೀಂದ್ರ ಮದ್ದರಕಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಯಶೋದಾ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದ್ದು ಇನ್ಮುಂದೆ ಜಿಲ್ಲೆಯಲ್ಲಿಯೇ ಆ ಸೌಲಭ್ಯ ಸಿಗಲಿದೆ. ಆಧುನಿಕ ವೈದ್ಯಕೀಯ ಪರಿಕರಗಳು, ನುರಿತ ವೈದ್ಯರ ತಂಡ ಸದಾ ಸೇವೆಗೆ ಲಭ್ಯವಿದೆ ಎಂದರು.

    ದೇಶದಲ್ಲಿ ಮುತ್ರ ಪಿಂಡ ಕಾಯಿಲೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಅನೇಕ ಪ್ರಕರಣಗಳಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಸಾವು ಸಂಭವಿಸುತ್ತಿದೆ. ಅಂಥದರಲ್ಲಿ ಗಡಿಭಾಗದ ವಿಜಯಪುರ ಜಿಲ್ಲೆಯಲ್ಲಿ ಆಧುನಿಕ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಮೂಲಕ ಯಶೋದಾ ಆಸ್ಪತ್ರೆ ನೆರವಾಗುತ್ತಿದೆ ಎಂದರು.

    ರಾಷ್ಟ್ರೀಯ ಮಾಧ್ಯಮದಲ್ಲಿ ಮಂಡ್ಯ ರಾಜಕಾರಣ, ಕರ್ನಾಟಕ ಚುನಾವಣೆ ಬಗ್ಗೆ ಅಮಿತ್​ ಷಾ ಸ್ಫೋಟಕ ಹೇಳಿಕೆ

    ಚುನಾವಣೆ ಗೆಲ್ಲಲು ಬ್ರಹ್ಮಾಸ್ತ್ರಗಳ ಬಳಕೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ

    ಅವಶೇಷಗಳ ಅಡಿ ಸಿಲುಕಿದ್ದರೂ ಸಾವನ್ನೇ ಸೋಲಿಸಿದರು! ಟರ್ಕಿ- ಸಿರಿಯಾದಲ್ಲಿ ರಕ್ಷಣಾ ಕಾರ್ಯ ವೇಳೆ ಹಲವು ಅಚ್ಚರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts