More

    ರಾಷ್ಟ್ರೀಯ ಮಾಧ್ಯಮದಲ್ಲಿ ಮಂಡ್ಯ ರಾಜಕಾರಣ, ಕರ್ನಾಟಕ ಚುನಾವಣೆ ಬಗ್ಗೆ ಅಮಿತ್​ ಷಾ ಸ್ಫೋಟಕ ಹೇಳಿಕೆ

    ನವದೆಹಲಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಭರವಸೆ ವ್ಯಕ್ತಪಡಿಸಿದರು.

    ಎಎನ್​ಐ ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮುಂಬರುವ ರಾಜ್ಯಗಳ ಚುನಾವಣೆ, ಅದಾನಿ ವಿವಾದ, ಪಿಎಫ್​ಐ ಬ್ಯಾನ್, ಸಂಸತ್ತಿನ ಅಡಚಣೆ, ಖಲಿಸ್ತಾನ ಮತ್ತು 2024ರ ಲೋಕಸಭಾ ಚುನಾವಣೆ ಕುರಿತು ಸುದೀರ್ಘವಾಗಿ ಮಾತನಾಡಿದರು.

    ಕರ್ನಾಟಕದ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿದ ಅಮಿತ್​ ಷಾ, ಕಳೆದ ಎರಡು ತಿಂಗಳಲ್ಲಿ ಕರ್ನಾಟಕ್ಕೆ 5 ಬಾರಿ ಭೇಟಿ ನೀಡಿದ್ದೇನೆ. ಈ ವೇಳೆ ಅಲ್ಲಿನ ಜನರ ನಾಡಿ-ಮಿಡಿತವನ್ನು ಅರಿತಿದ್ದೇನೆ ಮತ್ತು ಪ್ರಧಾನಿ ಮೋದಿ ಅವರಿಗೆ ಖ್ಯಾತಿಗೆ ನಾನು ಸಾಕ್ಷಿಯಾಗಿದ್ದೇನೆ. ಹೀಗಾಗಿ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತ ಸಾಧಿಸಲಿದೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಮಂಡ್ಯ ರಾಜಕಾರಣದ ಬಗ್ಗೆ ಮಾತನಾಡಿದ ಅಮಿತ್​ ಷಾ, ಮಂಡ್ಯ ಜನತೆ ಕೂಡ ಈಗ ವಂಶ ಪಾರಂಪರ್ಯ ಪಕ್ಷಗಳನ್ನು ಬಿಟ್ಟು ಬಿಜೆಪಿಯ ಅಭಿವೃದ್ಧಿ ರಾಜಕಾರಣವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕಕ್ಕೆ ಶುಭ ಸೂಚನೆ ಎಂದರು. ಕರ್ನಾಟಕ ಮಾತ್ರವಲ್ಲದೆ, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್​ಗಢ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿ, ಸರ್ಕಾರ ರಚನೆ ಮಾಡುತ್ತದೆ ಎಂದು ಅಮಿತ್​ ಷಾ ತಿಳಿಸಿದರು.

    ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪರ್ಧೆ ಎಂಬುದೇ ಇಲ್ಲ. ಪ್ರಧಾನಿ ಮೋದಿ ಅವರಿಗೆ ಜನರು ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಅಮಿತ್​ ಷಾ ಹೇಳಿದರು.

    ಇದೇ ಸಂದರ್ಭದಲ್ಲಿ ಅದಾನಿ ವಿವಾದದ ಬಗ್ಗೆ ಮಾತನಾಡಿದ ಅಮಿತ್​ ಷಾ, ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವುದರಿಂದ ಸದ್ಯಕ್ಕೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಅದಾನಿ ವಿಚಾರದಲ್ಲಿ ಬಿಜೆಪಿಗೆ ಮರೆಮಾಡಲು ಅಥವಾ ಭಯಪಡಲು ಏನೂ ಇಲ್ಲ ಎನ್ನುವ ಮೂಲಕ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.

    ನಾವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಫಿಎಫ್​ಐ) ಅನ್ನು ಯಶಸ್ವಿಯಾಗಿ ನಿಷೇಧಿಸಿದ್ದೇವೆ. ಇದು ದೇಶದಲ್ಲಿ ಧಾರ್ಮಿಕ ಮತಾಂಧತೆಯನ್ನು ಉತ್ತೇಜಿಸುವ ಒಂದು ಸಂಸ್ಥೆ ಎಂದು ನಾನು ನಂಬುತ್ತೇನೆ. ಅವರ ಚಟುವಟಿಕೆಗಳು ದೇಶದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿವೆ ಎಂಬುದನ್ನು ಪುರಾವೆಗಳು ಸೂಚಿಸುತ್ತವೆ. ನಾವು ವೋಟ್ ಬ್ಯಾಂಕ್ ರಾಜಕೀಯವನ್ನು ಮೀರಿ ಬೆಳೆದಿದ್ದೇವೆ ಮತ್ತು PFI ಅನ್ನು ನಿಷೇಧಿಸಿದ್ದೇವೆ ಎನ್ನುವ ಮೂಲಕ ಪಿಎಫ್​ಐ ಬ್ಯಾನ್​ ಅನ್ನು ಅಮಿತ್​ ಷಾ ಸಮರ್ಥಿಸಿಕೊಂಡರು.

    8 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಪ್ರಧಾನಿ ಮೋದಿ ಈಶಾನ್ಯ ಭಾರತಕ್ಕೆ 51 ಬಾರಿ ಭೇಟಿ ನೀಡಿದ್ದಾರೆ. ಸ್ವಾತಂತ್ರ್ಯದ ನಂತರ ಈ ಪ್ರದೇಶಕ್ಕೆ ಯಾವೊಬ್ಬ ಪ್ರಧಾನಿಯೂ ಆಗಾಗ್ಗೆ ಭೇಟಿ ನೀಡಿಲ್ಲ. ಪ್ರತಿ 15 ದಿನಗಳಿಗೊಮ್ಮೆ ಒಬ್ಬ ಕ್ಯಾಬಿನೆಟ್ ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದರು. ಅಲ್ಲದೆ, ಕಳೆದ 9 ವರ್ಷಗಳಲ್ಲಿ ಈಶಾನ್ಯದ ಭಾರತದ ಸ್ಥಳೀಯ ಭಾಷೆಗಳು ಬಲಗೊಂಡಿವೆ, ಪ್ರಾಥಮಿಕ ಶಿಕ್ಷಣವನ್ನು ಸಹ ಪ್ರಾದೇಶಿಕ ಭಾಷೆಗಳಲ್ಲಿ ನೀಡಲಾಗುತ್ತಿದೆ. ಬಿಜೆಪಿ ಸರ್ಕಾರ ಈಶಾನ್ಯ ಭಾರತದ ಗುರುತನ್ನು ಬಲಪಡಿಸಿದೆ ಎಂದು ಹೇಳಿದರು.

    ಇಂದು ಬುಡಕಟ್ಟು ಸಮುದಾಯಗಳು ಸಹ ಅಭಿವೃದ್ಧಿಯನ್ನು ಅನುಭವಿಸುತ್ತಿವೆ. ಇಂದು ನಾವು ದೇಶದ ಮೊದಲ ಬುಡಕಟ್ಟು ರಾಷ್ಟ್ರಪತಿಗಳನ್ನು ಹೊಂದಿದ್ದೇವೆ. ಬಡ ಕುಟುಂಬಗಳಿಗೆ ನೀಡುತ್ತಿರುವ ಸವಲತ್ತುಗಳನ್ನು ಬುಡಕಟ್ಟು ಸಮುದಾಯದವರಿಗೂ ತಾರತಮ್ಯವಿಲ್ಲದೆ ವಿಸ್ತರಿಸಲಾಗುತ್ತಿದೆ. ತಾವು ಈ ಹಿಂದೆಯೇ ದಾರಿ ತಪ್ಪಿದ್ದನ್ನು ಬುಡಕಟ್ಟು ಜನಾಂಗದವರು ಅರಿತಿದ್ದಾರೆ ಎಂದು ತಿಳಿಸಿದರು. (ಏಜೆನ್ಸೀಸ್​)

    ಚುನಾವಣೆ ಗೆಲ್ಲಲು ಬ್ರಹ್ಮಾಸ್ತ್ರಗಳ ಬಳಕೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ

    ಪುಲ್ವಾಮಾ ದಾಳಿಗೆ 4 ವರ್ಷ: ಹುತಾತ್ಮ ಯೋಧರ ತ್ಯಾಗ, ಬಲಿದಾನ ನೆನೆದ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​

    ಕಾರವಾರದ ನಿವೃತ್ತ ಎಎಸ್‌ಐ ಸಾವಿನ ಪ್ರಕರಣಕ್ಕೆ ತಿರುವು: ಸಿಸಿಟಿವಿ ಫುಟೇಜ್‌ನಿಂದ ಬಯಲಾಯ್ತು ಸತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts