More

    ಕಳೆದ 4 ವರ್ಷದಲ್ಲಿ 20,455 ಮಂದಿಯನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಟ್ಟ ಬಿಜೆಪಿ ಸರ್ಕಾರ!

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಕಳೆದ 4 ವರ್ಷದ ಅವಧಿಯಲ್ಲಿ 20,455 ಮಂದಿಯನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಟ್ಟಿರುವುದಾಗಿ ವರದಿಯಾಗಿದೆ. ಗೃಹ ಸಚಿವರು ನೀಡಿದ ಉತ್ತರದಲ್ಲೆ ಈ ಮಾಹಿತಿ ಬಹಿರಂಗವಾಗಿದೆ.

    ವಿಧಾನಪರಿಷತ್‌ ಸದಸ್ಯ ಅರವಿಂದ ಕುಮಾರ ಅರಳಿ ಅವರು ಕೇಳಿದ್ದ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಉತ್ತರವು ಕಾಂಗ್ರೆಸ್‌ನ ನಾಯಕರ ಆರೋಪಕ್ಕೆ ಇಂಬು ನೀಡುವಂತಿದೆ.

    ಬಿಜೆಪಿ ರೌಡಿ ಮೋರ್ಚಾ ಆರಂಭಿಸಿದ್ದು, 150 ರೌಡಿಗಳನ್ನು ಸೇರಿಸಿಕೊಳ್ಳಲು ಪಟ್ಟಿ ಮಾಡಿದೆ. 60 ರೌಡಿಗಳು ಮೋರ್ಚಾ ಸೇರಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಆರೋಪಿಸಿದ್ದರು. ಇದರ ಬೆನ್ನಲ್ಲೇ ರೌಡಿಶೀಟರ್‌ಗಳ ಸೇರ್ಪಡೆ ಮತ್ತು ಕೈಬಿಟ್ಟಿರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

    2023ರ ಜನವರಿ ಮತ್ತು ಫೆಬ್ರುವರಿಯ ಈವರೆಗೆ ಒಟ್ಟು 7,361 ಮಂದಿಯನ್ನು ರೌಡಿಶೀಟರ್ ಪಟ್ಟಿಯಿಂದ ಕೈ ಬಿಡಲಾಗಿದೆ. 2021ರಲ್ಲಿ 8,062 ಮಂದಿಯನ್ನು ರೌಡಿಪಟ್ಟಿಯಿಂದ ಕೈಬಿಟ್ಟಿರುವುದಾಗಿ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

    2018ರಲ್ಲಿ 3,489, 2019ರಲ್ಲಿ 2,195, 2020ರಲ್ಲಿ 1,718, 2021ರಲ್ಲಿ 8,062, 2022 ರಲ್ಲಿ 3,314, ಮಂದಿ ಹಾಗೂ 2023 ರಿಂದ ಈವರೆಗೆ 7,361 ಮಂದಿಯನ್ನು ರೌಡಿಪಟ್ಟಿಯಿಂದ ಹಿಂಪಡೆದುಕೊಳ್ಳಲಾಗಿದೆ. (ದಿಗ್ವಿಜಯ ನ್ಯೂಸ್​)

    ಇಳಿವಯಸ್ಸಿನಲ್ಲೂ ಕಿಡ್ನಿ ದಾನ ಮಾಡಿ ಮೊಮ್ಮಗನಿಗೆ ಬದುಕು ನೀಡಿದ ಅಜ್ಜಿ!

    ರಾಷ್ಟ್ರೀಯ ಮಾಧ್ಯಮದಲ್ಲಿ ಮಂಡ್ಯ ರಾಜಕಾರಣ, ಕರ್ನಾಟಕ ಚುನಾವಣೆ ಬಗ್ಗೆ ಅಮಿತ್​ ಷಾ ಸ್ಫೋಟಕ ಹೇಳಿಕೆ

    VALENTINES DAY SPECIAL | ಪ್ರೀತಿ ಓಕೆ ಆಯ್ತು! ಮುಂದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts