More

    19 ವರ್ಷದೊಳಗಿನ ಬಿಸಿಸಿಐ ಮಹಿಳಾ ತಂಡದಲ್ಲಿ ಸ್ಥಾನ ಪಡೆದ ಬೀದರ್​ನ ಆದಿತಿಗೆ ಗಣ್ಯರ​ ಅಭಿನಂದನೆ

    ಬೀದರ್​: ಹಿಂದುಳಿದ ಹಾಗೂ ಗಡಿ ಜಿಲ್ಲೆ ಬೀದರ್​ನ ಭಾಲ್ಕಿ ಮೂಲದ ಬಾಲಕಿಯ ಸಾಧನೆಗೆ ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸುವ 19 ವರ್ಷದ ಒಳಗಿನ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಿಳಾ ತಂಡದಲ್ಲಿ ಭಾಲ್ಕಿಯ ಕುಮಾರಿ ಆದಿತಿ ವೀರಶೆಟ್ಟಿ ಬಕ್ಕಾ ಸ್ಥಾನ ಪಡೆದಿದ್ದು, ಆಕೆಯ ಸಾಧನೆಗೆ ಅನುಭವ ಮಂಟಪದ ಅಧ್ಯಕ್ಷ ಪೂಜ್ಯ ಶ್ರೀ ಡಾ ಬಸವಲಿಂಗ ಪಟ್ಟದ್ದೆವರು, ಗುರುಬಸವಾ ಪಟ್ಡದೇವರು ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಮತ್ತು ಮಾಜಿ ಶಾಸಕ ಪ್ರಕಾಶ ಖಂಡ್ರೆ ಸೇರಿದಂತೆ ಹಲವರು ಗಣ್ಯರು ಅಭಿನಂದಿಸಿದ್ದಾರೆ.

    ವಿಶ್ವದ ಪ್ರತಿಷ್ಠಿತ ಕ್ರಿಕೆಟ್ ಮಂಡಳಿ (BCCI) ನಡೆಸುವ ತಂಡದಲ್ಲಿ ಪ್ರಥಮ ಬಾರಿಗೆ ಹಿಂದುಳಿದ ಗಡಿ ಜಿಲ್ಲೆ ಬೀದರ್​ನಿಂದ ಭಾಲ್ಕಿಯ ಆದಿತಿ ಬಕ್ಕಾ ಸ್ಥಾನ ಪಡೆದಿದ್ದು, ಬೀದರ್ ಜಿಲ್ಲೆ ಹಾಗೂ ವಿಶೇಷವಾಗಿ ಭಾಲ್ಕಿ ತಾಲೂಕಿಗೆ ಕೀರ್ತಿ ತಂದಂತಾಗಿದೆ. (ದಿಗ್ವಿಜಯ ನ್ಯೂಸ್​)

    ಪೊಕ್ಸೊ ಕೇಸ್​ ಅಡಿ ಸಾಕ್ಷಿ ಕಲೆಹಾಕಲು ತೆರಳಿದ್ದ ವೇಳೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಎಎಸ್​ಐ!

    ಆರ್​ಸಿಬಿ 4 ಪಂದ್ಯಾವಳಿಗಳನ್ನು ಸತತವಾಗಿ ಗೆಲ್ಲುವ ಅವಕಾಶವಿದೆ ಎಂದ ಡಿವಿಲಿಯರ್ಸ್…!

    ಉತ್ತಮ ಜೀವನಶೈಲಿ, ಆಹಾರ ಪದ್ಧತಿಯಿಂದ ಮೂಲವ್ಯಾಧಿ ದೂರ; ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಕ್ಯಾನ್ಸರ್ ಅಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts