More

    ಭೂಮಿ ನೀಡಿದವರಿಗೆ ಉದ್ಯೋಗ ಕೊಡಿ

    ಚಿಂಚೋಳಿ: ಚೆಟ್ಟಿನಾಡು ಸಿಮೆಂಟ್ ಕಂಪನಿಗೆ ಭೂಮಿ ನೀಡಿದ ಸಂತ್ರಸ್ಥರಿಗೆ ಉದ್ಯೋಗ ನೀಡಬೇಕು, ಪ್ರತಿ ಎಕರೆ ೨೦ ಲಕ್ಷ ರೂ. ಪರಿಹಾರ ಕಲ್ಪಿಸುವಂತೆ ಎಂದು ಒತ್ತಾಯಿಸಿ ಭಾರತ ಕಮ್ಯುನಿಷ್ಟ್ ಪಕ್ಷದಿಂದ ರೋಡ್ ಕಲ್ಲೂರ್ ಬಳಿಯ ಚೆಟ್ಟಿನಾಡು ಕಾರ್ಖಾನೆ ಎದುರು ಬುಧವಾರ ಧರಣಿ ನಡೆಸಲಾಯಿತು.

    ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, ಗಡಿನಾಡಿನಲ್ಲಿ ತಲೆ ಎತ್ತಿರುವ ಸಿಮೆಂಟ್ ಕಂಪನಿಗಳಲ್ಲಿ ಸರೋಜಿನಿ ಮಹರ್ಷಿ ವರದಿ ಆಧಾರಿತವಾಗಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಹೊರಗಿನವರಿಗೆ ಮಣೆ ಹಾಕುತ್ತಿದ್ದಾರೆ. ಕೂಡಲೇ ಭೂಮಿ ನೀಡಿದ ರೈತರ ಕುಟುಂಬದವರಿಗೆ ಉದ್ಯೋಗ ಕೊಡಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

    ಕರ್ನಾಟಕ ಪ್ರಾಂತ ರೈತ ಜಿಲ್ಲಾ ಮುಖಂಡ ಶರಣಬಸಪ್ಪ ಮಮಶೆಟ್ಟಿ, ಪ್ರಮುಖರಾದ ಜಾಫರ್‌ಖಾನ್ ಮಿರಿಯಾಣ, ಸಿದ್ದಾರ್ಥ ಠಾಕೂರ್, ಸಿದ್ದಲಿಂಗಯ್ಯ ಸ್ವಾಮಿ, ಪ್ರಭು ಪ್ಯಾರಬಾದಿ, ಮಲ್ಲಮ್ಮ ಕೋಡ್ಲಿ, ಚಂದ್ರಶೇಖರ ಕಲ್ಲೂರ, ಶಂಕ್ರಯ್ಯ ಸ್ವಾಮಿ, ಅಕ್ಬರ್, ಖಾಜಮಿಯ್ಯ ಕುಪನೂರ ಇತರರಿದ್ದರು.
    ಬೇಡಿಕೆಗಳ ಮನವಿಪತ್ರವನ್ನು ಕಂಪನಿಯ ಸಿಬ್ಬಂದಿ ಭೀಮರೆಡ್ಡಿ ಅವರಿಗೆ ಸಲ್ಲಿಸಲಾಯಿತು. ೧೦ ಜನರಿಗೆ ಉದ್ಯೋಗ ಕಲ್ಪಿಸುವ ಭರವಸೆ ನೀಡಿದ ನಂತರ ಧರಣಿ ಅಂತ್ಯಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts