More

    ಚೀನಾದ ಇಂಚಿಂಚು ಅರಿಯಲು ಗಡಿಯಲ್ಲಿ ‘ವಿಶ್ವದ ಬುದ್ಧಿವಂತ’ನ ಕಾವಲು!

    ನವದೆಹಲಿ: ಭಾರತ ಹಾಗೂ ಚೀನಾ ದೇಶಗಳ ನಡುವಿನ ಗಡಿ ಬಿಕ್ಕಟ್ಟು ಉಲ್ಬಣವಾಗುತ್ತಿರುವ ಈ ಹೊತ್ತಿನಲ್ಲಿ ಕುತಂತ್ರಿ ಚೀನಾದ ಮೇಲೆ ಕಣ್ಣಿಡುವುದು ಬಹು ಅಗತ್ಯವಾಗಿದೆ.

    ಇದೇ ಕಾರಣದಿಂದಾಗಿ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದೇಶಿಯವಾಗಿ ಡ್ರೋನ್‌ ಅಭಿವೃದ್ಧಿಪಡಿಸಿದ್ದು, ಅದೀಗ ಗಡಿಯಲ್ಲಿ ಕಾವಲು ಕಾಯುತ್ತಿದೆ. ‘ಭಾರತ್‌’ ಎಂಬ ಹೆಸರಿನ ಡ್ರೋನ್‌ ಇದಾಗಿದೆ. ಭಾರತ್‌ ಸರಣಿಯ ಡ್ರೋನ್‌ಗಳನ್ನು ವಿಶ್ವದ ಅತಿ ಬುದ್ಧಿವಂತ ಹಾಗೂ ಹಗುರವಾದ ಕಣ್ಗಾವಲು ಡ್ರೋನ್‌ಗಳು ಎಂದು ಕರೆಯಲಾಗುತ್ತದೆ.

    ವೈರಿ ದೇಶದ ರಾಡಾರ್‌ಗಳು ಪತ್ತೆಹಚ್ಚಲು ಸಾಧ್ಯವಾಗದಂತೆ ಡ್ರೋನ್‌ನ್ನು ನಿರ್ಮಿಸಲಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ರಿಯಲ್‌ ಟೈಮ್‌ ವಿಡಿಯೋ ಪ್ರಸರಣವನ್ನು ಡ್ರೋನ್‌ ಸೇನೆಗೆ ನೀಡಲಿದೆ. ಅತ್ಯಂತ ಸುಧಾರಿತ ನೈಟ್‌ ವಿಷನ್‌ ಸಾಮರ್ಥ್ಯ ಹೊಂದಿದ್ದು, ಇದು ದಟ್ಟ ಅರಣ್ಯಗಳಲ್ಲಿ ಅಡಗಿರುವ ಮನುಷ್ಯರನ್ನು ಪತ್ತೆ ಮಾಡುವ ಚಾಕಚಕ್ಯತೆ ಹೊಂದಿದೆ ಎಂದು ಡಿಆರ್‌ಡಿಒ ಹೇಳಿದೆ.

    ಪೂರ್ವ ಲಡಾಖ್‌ನ ಗಡಿ ವಾಸ್ತವ ರೇಖೆಯುದ್ದಕ್ಕೂ ಎತ್ತರದ ಪ್ರದೇಶಗಳು ಹಾಗೂ ಪರ್ವತಗಳಲ್ಲಿ ನಿಖರ ಕಣ್ಗಾವಲು ಇಡಲಿದೆ. ಇದು ನಮ್ಮ ಸೇನೆಗೆ ಅನೇಕ ರೀತಿಯಲ್ಲಿ ಸಹಕಾರಿಯಾಗಲಿದೆ.

    ಇದನ್ನೂ ಓದಿ: ಬೈಕ್‌ ಕಳ್ಳರಾಗಿದ್ದರೆ ಮಾತ್ರ ಈ ಕ್ಲಬ್‌ನಲ್ಲಿ ಇದೆ ಪ್ರವೇಶ!

    ಪೂರ್ವ ಲಡಾಖ್‌ನಲ್ಲಿ ಸದ್ಯ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದಾಗಿ ಎತ್ತರದ ಹಾಗೂ ವಿವಾದಿತ ಪ್ರದೇಶಗಳಲ್ಲಿ ನಿಖರ ಕಣ್ಗಾವಲಿಡಲು ಭಾರತೀಯ ಸೇನೆ ಡ್ರೋನ್‌ಗಳಿಗಾಗಿ ಬೇಡಿಕೆ ಇಟ್ಟಿತ್ತು. ಸೇನೆಯ ಬೇಡಿಕೆಯಂತೆ ಡಿಆರ್‌ಡಿಒ ಈ ಡ್ರೋನ್‌ ನೀಡಿರುವುದಾಗಿ ಸೇನೆ ಹೇಳಿದೆ.

    ಸಣ್ಣ ಮತ್ತು ಶಕ್ತಿಯುತ ಡ್ರೋನ್ ಯಾವುದೇ ಸ್ಥಳದಲ್ಲಿ ಹೆಚ್ಚು ನಿಖರತೆಯೊಂದಿಗೆ ಸ್ವಾಯತ್ತವಾಗಿ ಕಾರ್ಯನಿರ್ವಹಿಸುತ್ತದೆ. ಅಭಿವೃದ್ಧಿ ಹೊಂದಿದ ತಂತ್ರಜ್ಞಾನದೊಂದಿಗೆ ಯುನಿಬೊಡಿ ಬಯೋಮಿಮೆಟಿಕ್ ವಿನ್ಯಾಸವು ಕಣ್ಗಾವಲು ಕಾರ್ಯಾಚರಣೆಗಳಿಗೆ ಅತ್ಯುತ್ತಮ ಸಂಯೋಜನೆಯಾಗಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ಹೇಳಿದ್ದಾರೆ.

    ಭಾರತೀಯ ಸೈನಿಕರು ಮತ್ತು ಶತ್ರಗಳನ್ನು ಪತ್ತೆಹಚ್ಚಲು ಡ್ರೋನ್‌ನಲ್ಲಿ ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ) ಅಳವಡಿಸಲಾಗಿದೆ. ಅದಕ್ಕೆ, ತಕ್ಕಂತೆ ಡ್ರೋನ್‌ ಗಡಿಯಲ್ಲಿ ಕಣ್ಗಾವಲು ಇಡಲಿದೆ. ತೀವ್ರ ಚಳಿಯ ವಾತಾವರಣದಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ. ಇನ್ನು, ಕಠಿಣ ಹವಾಮಾನದಲ್ಲಿ ಕಾರ್ಯನಿರ್ವಹಿಸಲು ಅನುವಾಗುವಂತೆ ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ.

    ಉದ್ಯೋಗವಿಲ್ಲದೇ ಅಂಡಾಣು ದಾನಕ್ಕೆ ಮುಂದಾದ ಯುವತಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts