More

    ಡಿಸೆಂಬರ್ 8ರ ಭಾರತ್ ಬಂದ್​ ಕರೆಗೆ ಕಾಂಗ್ರೆಸ್, ಎಎಪಿ ಬೆಂಬಲ

    ನವದೆಹಲಿ: ಹೊಸ ಕೃಷಿ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತಪರ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8ರ ಭಾರತ ಬಂದ್​ಗೆ ಕಾಂಗ್ರೆಸ್, ಎಎಪಿ ಮತ್ತು ಇತರೆ ಕೆಲವು ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.

    ಕಾಂಗ್ರೆಸ್ ವಕ್ತಾರ ಪವನ್ ಖೇರಾ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ, ರೈತರು ಕರೆ ನೀಡಿರುವ ಭಾರತ್ ಬಂದ್​ಗೆ ಪಕ್ಷ ‘ಹೃತ್ಪೂರ್ವಕ’ ಬೆಂಬಲ ನೀಡುತ್ತದೆ. ನಮ್ಮ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ನೇರವಾಗಿ ರೈತರ ಜತೆಗೇ ನಿಂತು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಬಂದ್ ದಿನ ನಮ್ಮ ಎಲ್ಲ ಜಿಲ್ಲಾ, ಪ್ರದೇಶ ಕಾಂಗ್ರೆಸ್ ಕೇಂದ್ರ ಕಚೇರಿಗಳಲ್ಲಿ ರೈತ ಪರ ಧ್ವನಿ ಮೊಳಗಲಿದೆ. ಪ್ರತಿಭಟನೆ ನಡೆಸಿ ಬಂದ್ ಅನ್ನು ಯಶಸ್ವಿಗೊಳಿಸುವ ಕೆಲಸವನ್ನು ನಾವು ಮಾಡುತ್ತೇವೆ.

    ಇದನ್ನೂ ಓದಿ:   ಗಗನಕ್ಕೇರುತ್ತಿದೆ ಇಂಧನ ಬೆಲೆ – ಪೆಟ್ರೋಲ್​, ಡೀಸೆಲ್​ ದರಗಳು ಎರಡು ವರ್ಷದ ಗರಿಷ್ಠ ಮಟ್ಟಕ್ಕೆ

    ಸರ್ಕಾರ ರೈತರ ಧ್ವನಿಗೆ ಓಗೊಡಲೇಬೇಕು. ಕರಾಳ ಕೃಷಿ ಕಾನೂನು ಹಿಂಪಡೆಯಬೇಕು. ರೈತ ಹಿತವನ್ನು ಕಾಪಾಡಬೇಕು. ಈ ಚಳಿಗಾಲದಲ್ಲೂ ಹಗಲು ರಾತ್ರಿ ಎನ್ನದೇ ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಧ್ವನಿಯನ್ನು ಸರ್ಕಾರ ಆಲಿಸುವುದಿಲ್ಲ ಎಂದಾದರೆ ಪ್ರತಿಭಟನೆ ತೀವ್ರಗೊಳಿಸುವುದೊಂದೇ ದಾರಿ ಎಂದು ಅವರು ಹೇಳಿದರು.

    ಇದನ್ನೂ ಓದಿ:   ಶಿವಮೊಗ್ಗದಲ್ಲಿ 16 ವರ್ಷದ ಬಾಲಕಿ ಮೇಲೆ ಭೀಕರ ಗ್ಯಾಂಗ್​ರೇಪ್​: ನಿರ್ಭಯಾ, ಅರುಣಾ ಶಾನುಭಾಗ್​ ಪ್ರಕರಣ ಹೋಲಿಕೆ

    ಈ ನಡುವೆ, ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿದ್ದು, ದೇಶಾದ್ಯಂತ ಇರುವ ಎಎಪಿ ಕಾರ್ಯಕರ್ತರು ಡಿಸೆಂಬರ್ 8ರಂದು ಬಂದ್​ನಲ್ಲಿ ಪಾಲ್ಗೊಳ್ಳುತ್ತಾರೆ. ದೇಶವಾಸಿಗಳೆಲ್ಲರೂ ರೈತರ ಪರ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್)

    ಕೃಷಿ ಕಾನೂನು ಹಿಂಪಡೆಯದಿದ್ರೆ ಖೇಲ್ ರತ್ನ ವಾಪಸ್ ಕೊಡ್ತೇನೆ – ಬಾಕ್ಸರ್ ವಿಜೇಂದರ್ ಸಿಂಗ್ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts