More

    ಜ.30ಕ್ಕೆ ಭಾರತ್ ಜೋಡೋ ಭಾಗವಾಗಿ ಪಾದಯಾತ್ರೆ, ಸಾರ್ವಜನಿಕ ಸಭೆ

    ಶಿವಮೊಗ್ಗ: ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕೈಗೊಂಡ ಭಾರತ್ ಜೋಡೋ ಪಾದಯಾತ್ರೆ ಸಮಾರೋಪದ ಭಾಗವಾಗಿ ನಗರದಲ್ಲಿ ಜ.30ರಂದು ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಎನ್.ರಮೇಶ್ ತಿಳಿಸಿದರು.
    ಅಂದು ಸಂಜೆ 5ಕ್ಕೆ ಅಶೋಕ ವೃತ್ತದಿಂದ ಗೋಪಿವೃತ್ತದವರೆಗೆ ಪಾದಯಾತ್ರೆ ಇರಲಿದೆ. ಡೊಳ್ಳು, ವೀರಗಾಸೆ ಪಾದಯಾತ್ರೆಗೆ ಮೆರಗು ನೀಡಲಿದೆ. ಗೋಪಿ ವೃತ್ತದ ಎಂ.ಜಿ.ಪ್ಯಾಲೆಸ್ ಎದುರು ಸಾರ್ವಜನಿಕ ಸಭೆ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಸಭೆಗೂ ಮುನ್ನ ರಾಹುಲ್ ಗಾಂಧಿ ಕೈಗೊಂಡ ಪಾದಯಾತ್ರೆಯನ್ನು ಎಲ್‌ಇಡಿ ಮೂಲಕ ಪ್ರದರ್ಶಿಸಲಾಗುವುದು. ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ವಾಗ್ಮಿ ಸುಧೀರ್‌ಕುಮಾರ್ ಮೊರಳ್ಳಿ ದಿಕ್ಸೂಚಿ ಭಾಷಣ ಮಾಡುವರು. ಸ್ಥಳೀಯ ನಾಯಕರು ಪಾಲ್ಗೊಳ್ಳುವರು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಗುವುದು ಎಂದು ಹೇಳಿದರು.
    ಜಾತಿ, ಧರ್ಮಗಳ ನಡುವೆ ಸಾಮರಸ್ಯ ಕಾಪಾಡುವುದು, ಜನರ ಮನಸ್ಸನ್ನು ಬೆಸೆಯುವುದು, ಉದ್ಯೋಗ ಸೃಷ್ಟಿ ಸೇರಿದಂತೆ ದೇಶದ ಅಭಿವೃದ್ಧಿಗೆ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಹಮ್ಮಿಕೊಂಡು 3,980 ಕಿ.ಮೀ. ಪಾದಯಾತ್ರೆ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಜ.30ರಂದು ಭಾರತ್ ಜೋಡೋ ಸಮಾರಂಭ ಸಮಾರಂಭ ಶ್ರೀನಗರದಲ್ಲಿ ನಡೆಯಲಿದೆ. ಅದರ ಭಾಗವಾಗಿ ಶಿವಮೊಗ್ಗದಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
    ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮುಖಂಡರಾದ ಎಸ್.ಪಿ.ದಿನೇಶ್, ಕಲಗೋಡು ರತ್ನಾಕರ್, ಮಾರ್ಟಿಸ್, ರವಿಕುಮಾರ್, ರಮೇಶ್, ಸಿ.ಎಸ್.ಚಂದ್ರಭೂಪಾಲ್, ವಿಜಯಕುಮಾರ್, ಎಚ್.ಸಿ.ಯೋಗೇಶ್, ರೇಖಾ ರಂಗನಾಥ, ಸತ್ಯನಾರಾಯಣ, ನರಸಿಂಹಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts