ಭರಮಸಾಗರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕ್ಷೌರಿಕ ವೃತ್ತಿದಾರರಿಗೆ ಸರ್ಕಾರ ನೆರವು ನೀಡಬೇಕು ಎಂದು ಹಡಪದ ಅಣ್ಣಪ್ಪ ಸಮಾಜ ಒತ್ತಾಯಿಸಿದೆ.
ಸರ್ಕಾರ ಜಾರಿಗೆ ತಂದಿರುವ ಲಾಕ್‌ಡೌನ್ ನಿಯಮವನ್ನು ರಾಜ್ಯದ ಸವಿತಾ ಸಮಾಜ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದೆ. ಆದರೆ, ಇದರಿಂದ ಸಮಾಜ ಸಂಕಷ್ಟಕ್ಕೆ ಸಿಲುಕಿದೆ.
ಸರ್ಕಾರದ ನಿಯಮದಂತೆ ತಮ್ಮ ಅಂಗಡಿಗಳನ್ನು ಮುಚ್ಚಿ ಸರ್ಕಾರದ ಆದೇಶ ಪಾಲನೆ ಮಾಡಿದ್ದಾರೆ. ಇದರಿಂದ ಕ್ಷೌರಿಕ ವೃತ್ತಿ ನಡೆಸುವವರ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ.
ದಿನದ ಊಟಕ್ಕೂ ಪರದಾಡುವಂತಾಗಿದೆ. ರಾಜ್ಯ ಸರ್ಕರ ತಕ್ಷಣ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಸಮಾಜದ ರಾಜ್ಯಾಧ್ಯಕ್ಷ ವೃಷಬೇಂದ್ರಪ್ಪ, ಕಾರ್ಯದರ್ಶಿ ಮಹೇಶ್, ಉಪಾಧ್ಯಕ್ಷ ಚನ್ನವೀರಪ್ಪ, ದನಂಜಯ, ಸಿದ್ದೇಶ್, ರಘು ಒತ್ತಾಯಿಸಿದ್ದಾರೆ.