More

    ದೇವರ ಹೆಸರಿನಲ್ಲಿ ಪ್ರಾಣಿಬಲಿ ಸಲ್ಲದು

    ಭರಮಸಾಗರ: ಮಾನವೀಯ ಮೌಲ್ಯಗಳ ಕುಸಿತ ಕಂಡಿರುವ ಸಮಾಜದಲ್ಲಿ ದುರಾಚಾರ, ದುರ್ನಡತೆಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

    ಹೋಬಳಿಯ ದ್ಯಾಪನಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ದೇವತೆ ಚೌಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

    ದೇವರ ಹೆಸರಿನಲ್ಲಿ ಪ್ರಾಣಿಬಲಿ ಮಾಡುವುದು ತಪ್ಪು. ಎಲ್ಲರೂ ಸರಿದಾರಿಗೆ ಬಂದು ಗುರುಕಾರುಣ್ಯ ಪಡೆಯಬೇಕು. ಸಂಸ್ಕಾರ, ಸದಾಚಾರ, ಸನ್ನಡತೆ ರೂಢಿಸಿಕೊಳ್ಳಬೇಕು. ಪ್ರಕೃತಿ ಮಾತೆ ರಕ್ಷಣೆಗೆ ಎಲ್ಲರೂ ಬದ್ಧರಾಗಬೇಕು ಎಂದರು.

    ಗುರುವಾರ ಸಂಜೆ ಗ್ರಾಮ ದರ್ಶನ, ದೇವಾಲಯ ಪ್ರವೇಶ, ದೇವಿ ಮೂರ್ತಿ ಮೂರ್ತಿ ಪ್ರತಿಷ್ಠಾಪನೆ ಇತರೆ ಆಚರಣೆಗಳು ಜರುಗಿದವು.

    ಗ್ರಾಮದ ಮುಖಂಡರಾದ ಎಚ್.ಎನ್.ತಿಪ್ಪೇಸ್ವಾಮಿ, ಮಂಜುನಾಥ್, ವೆಂಕಟರಾಮಪ್ಪ, ಜಿ.ಎಸ್.ಗುರುಸಿದ್ದಪ್ಪ, ಚೌಲಿಹಳ್ಳಿ ಗೊಲ್ಲರಹಟ್ಟಿ ಮುಖಂಡರಾದ ಶೇಖರಪ್ಪ, ನಿಜಲಿಂಗಪ್ಪ, ಡಿ.ವಿ. ರುದ್ರೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts