More

    ಗುರುಕರುಣೆಯೇ ಸಾಧನೆಗೆ ಮೂಲಾಧಾರ

    ಭಾಲ್ಕಿ: ಗುರುಕರುಣೆ ಇಲ್ಲದೆ ಯಾವುದೇ ಸಾಧನೆ ಅಸಾಧ್ಯ. ಗುರುಕರುಣೆಯೇ ಸಾಧನೆಗೆ ಮೂಲಾಧಾರ ಎಂದು ಮಹಾರಾಷ್ಟçದ ಸಂಸ್ಥಾನ ಕಪಿಲಾಧಾರ ಜಂಗಮಮಠ ಶ್ರೀಕ್ಷೇತ್ರ ಮನ್ಮಥಧಾಮದ ಶ್ರೀ ಡಾ.ವಿರೂಪಾಕ್ಷ ಶಿವಾಚಾರ್ಯ ಪ್ರತಿಪಾದಿಸಿದರು.

    ಚಳಕಾಪುರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ೧೮೮ನೇ ಜಯಂತಿ ಮಹೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ೬ನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಸಾನ್ನಿಧ್ಯ ವಹಿಸಿದ್ದ ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠ ಬೀದರ್‌ನ ಸದ್ಗುರು ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿ ಮಾತನಾಡಿ, ಸಹೋ ವಾಚಾ ನ ವಾ ಅರೆ ಪತ್ಯುಃ ಕಾಮಾಯ ಪತಿಃ ಪ್ರಿಯೋ ಭವತಿ ವಿಷಯದ ಬಗ್ಗೆ ವಿವರವಾಗಿ ತಿಳಿಸಿದರು.

    ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮೀಜಿ, ಕಲಬುರಗಿಯ ಮಾತೋಶ್ರೀ ಲಕ್ಷ್ಮೀದೇವಿ, ಶ್ರೀ ಜಡಿಸಿದ್ಧೇಶ್ವರ ಸ್ವಾಮೀಜಿ, ಶ್ರೀ ಗಣೇಶಾನಂದ ಸ್ವಾಮೀಜಿ, ಮಾತೋಶ್ರೀ ಸಿದ್ಧೇಶ್ವರಿ, ಮಾತೋಶ್ರೀ ಅಮೃತಾನಂದಮಯಿ, ಶ್ರೀ ಪೂರ್ಣಾನಂದ ಸ್ವಾಮೀಜಿ, ಶ್ರೀ ಸದ್ರೂಪಾನಂದ ಭಾರತಿ ಸ್ವಾಮೀಜಿ, ಶ್ರೀ ಪರಮಾನಂದ ಸ್ವಾಮೀಜಿ ಮಾತನಾಡಿದರು.

    ಪ್ರಸಾದ ಸೇವೆಗೆ ಸಹಾಯ ಮಾಡುತ್ತಿರುವ ಭಕ್ತರನ್ನು ಪೂಜ್ಯರು ವಿಭೂತಿ, ಪ್ರಸಾದ ನೀಡಿ ಆಶೀರ್ವದಿಸಿದರು. ಶ್ರೀ ಶಿವಕುಮಾರ ಸ್ವಾಮೀಜಿ ಪ್ರಸಾದ ದಾನಿಗಳನ್ನು ಸತ್ಕರಿಸಿದರು. ಅನೇಕ ಭಕ್ತರು ಸದ್ಗುರು ಶ್ರೀ ಸಿದ್ಧಾರೂಢರ ಮೂರ್ತಿ ಮತ್ತು ಶ್ರೀ ಶಿವಕುಮಾರ ಮಹಾಸ್ವಾಮಿಗಳ ತುಲಾಭಾರ ಸೇವೆ ಸಲ್ಲಿಸಿದರು.

    ಶ್ರೀ ಶಂಕರಾನಂದ ಸ್ವಾಮೀಜಿ ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಪಾಟೀಲ್ ನಿರೂಪಣೆ ಮಾಡಿದರು. ಪ್ರಭು ಮಾಸಲದಾರ, ಗುಂಡಪ್ಪ, ಸೋಮನಾಥ ಶೀಲವಂತ, ಬಸವರಾಜ ಹುಲೆಪ್ಪನೋರ ಅವರಿಂದ ಸಂಗೀತ ಸೇವೆ ನಡೆಯಿತು.

    ರಥೋತ್ಸವ ಇಂದು: ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠ ಚಳಕಾಪುರದಲ್ಲಿ ರಾಮನವಮಿ ಮತ್ತು ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ೧೮೮ನೇ ಜಯಂತಿ ಮಹೋತ್ಸವ ಸಮಾರೋಪ ನಿಮಿತ್ತ ಬುಧವಾರ ಸಂಜೆ ೪ಕ್ಕೆ ವೈಭವದ ರಥೋತ್ಸವ ಜರುಗಲಿದೆ. ಬೆಳಗ್ಗೆ ೮ರಿಂದ ಮಧ್ಯಾಹ್ನ ೧೨ರವರೆಗೆ ಪ್ರವಚನ ನಡೆದ ನಂತರ ಪ್ರಸಾದ ವ್ಯವಸ್ಥೆ ಇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts