More

    ಆಧುನಿಕತೆ ಭರಾಟೆಯಲ್ಲಿ ಜನಪದ ಗೀತೆ ಕಣ್ಮರೆ

    ಭಾಲ್ಕಿ: ಆಧುನಿಕ ಯುಗದ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಗ್ರಾಮೀಣ ಸೊಗಡಿನ ಜನಪದ ಗೀತೆಗಳು ಕಣ್ಮರೆ ಆಗುತ್ತಿವೆ ಎಂದು ಸಾಹಿತಿ ರಾಜಕುಮಾರ ಸಾಲಿ ಕಳವಳ ವ್ಯಕ್ತಪಡಿಸಿದರು.

    ವಳಸಂಗ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಏರ್ಪಡಿಸಿದ್ದ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಳಸಂಗದ ಸಾವಿತ್ರಿಬಾಯಿ ಫುಲೆ ಮಹಿಳಾ ಸಾಂಸ್ಕೃತಿಕ ಸಂಘವು ಜನಪದ ಗೀತೆಗಳನ್ನು ಉಳಿಸಿ ಬೆಳೆಸುತ್ತ ಕನ್ನಡ ಭಾಷೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಕೊಂಡಾಡಿದರು.

    ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿದರು. ಪ್ರಮುಖರಾದ ಮಾರುತಿರಾವ ವಾಘೆ, ಯಾದವರಾವ ಮಾನಕಾರಿ, ವಸಂತರಾವ ಬಿರಾದಾರ, ಶ್ರೀನಿವಾಸ ಮೇತ್ರೆ, ಜನಾಬಾಯಿ ಫುಲೆ, ನಿವೃತ್ತ ಶಿಕ್ಷಕ ವಿಠ್ಠಲರಾವ ಗಾಯಕವಾಡ, ರಾಜು ಗಾಯಕವಾಡ, ಉಮೇಶ ಗಾಯಕವಾಡ, ಐಜಿಕ ಬಂಗಾರೆ, ನಂದಕುಮಾರ ಹಡಪದ, ಶಿವರಾಜ ಪಾಟೀಲ್, ನಂದಕುಮಾರ ಇತರರಿದ್ದರು.

    ಸಾವಿತ್ರಿಬಾಯಿ ಫುಲೆ ಮಹಿಳಾ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ಕುಟ್ಟುವ, ಬೀಸುವ, ಜೋಗುಳ ಪದಗಳನ್ನು ಹಾಡಿ ರಂಜಿಸಿದರು. ಕೋಲಾಟ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts