More

    ಶಿವಣ್ಣ ಹುಟ್ಟುಹಬ್ಬಕ್ಕೆ ‘ಭಜರಂಗಿ 2’ ಟೀಸರ್​ ಬಿಡುಗಡೆ …

    ಬೆಂಗಳೂರು: ಇಂದು ಶಿವರಾಜಕುಮಾರ್​ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಹಲವು ಚಿತ್ರತಂಡಗಳು ಅವರಿಗೆ ಶುಭ ಹಾರೈಸಿವೆ. ಈ ಪೈಕಿ ‘ಭಜರಂಗಿ 2’ ಚಿತ್ರತಂಡವು ಶಿವರಾಜಕುಮಾರ್​ ಅವರ ವಿಶೇಷ ಟೀಸರ್​ ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ನಟ ಸುನೀಲ್​ ಶೆಟ್ಟಿ ಅಪಾರ್ಟ್​ಮೆಂಟ್​ ಸೀಲ್!

    ಸೋಮವಾರ ಬೆಳಿಗ್ಗೆ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ‘ಭಜರಂಗಿ 2’ ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ಒಳ್ಳೆಯ ವೀಕ್ಷಣೆ ಪಡೆಯುತ್ತಿದೆ. ಬಿಡುಗಡೆಯಾದ ಎರಡು ತಾಸಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.

    ‘ಭಜರಂಗಿ 2’ ಚಿತ್ರದ ಚಿತ್ರೀಕರಣ ಕಳೆದ ವರ್ಷ ಮೊದಲ ಲಾಕ್​ಡೌನ್​ಗೂ ಮೊದಲೇ ಬಹುತೇಕ ಮುಗಿದಿತ್ತು. ಇನ್ನು, ಲಾಕ್​ಡೌನ್​ ನಂತರ ಉಳಿದ ಭಾಗದ ಚಿತ್ರೀಕರಣ ಮುಗಿದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳೂ ಆಗಿ, ಚಿತ್ರ ಮೇನಲ್ಲಿ ಬಿಡುಗಡೆ ಎಂದು ನಿರ್ಮಾಪಕ ಜಯಣ್ಣ ಘೋಷಿಸಿದ್ದರು. ಆದರೆ, ಎರಡನೆಯ ಲಾಕ್​ಡೌನ್​ನಿಂದಾಗಿ ಚಿತ್ರ ಅನಿರ್ಧಿಷ್ಟಾವಧಿ ಮುಂದಕ್ಕೆ ಹೋಗಿದೆ. ಚಿತ್ರಪ್ರದರ್ಶನ ಪ್ರಾರಂಭವಾಗಿ, ಎಲ್ಲವೂ ಸಹಜ ಸ್ಥಿತಿಗೆ ಬಂದ ನಂತರ ಚಿತ್ರ ಬಿಡುಗಡೆ ಆಗಲಿದೆ. ಬಹುಶಃ ಈ ವರ್ಷದ ಕೊನೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: 59ನೇ ವಸಂತಕ್ಕೆ ಕಾಲಿಟ್ಟ ಕರುನಾಡ ಚಕ್ರವರ್ತಿ: ಸರಳವಾಗಿ ಬರ್ತಡೇ ಆಚರಿಸಿಕೊಂಡ ಶಿವಣ್ಣ

    ಎ. ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರದಲ್ಲಿ ಶಿವರಾಜಕುಮಾರ್​ಗೆ ನಾಯಕಿಯಾಗಿ ಭಾವನಾ ಮೆನನ್​ ನಟಿಸಿದ್ದು, ಮಿಕ್ಕಂತೆ ಶ್ರುತಿ, ‘ಭಜರಂಗಿ’ ಲೋಕಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಸ್ವಾಮಿ ಗೌಡ ಛಾಯಾಗ್ರಹಣ ಮಾಡಿದ್ದಾರೆ.

    BBK8: ನಿರೂಪಕ ಸುದೀಪ್​ಗೆ ಧನ್ಯವಾದ ತಿಳಿಸಿದ ಬಿಗ್​ಬಾಸ್​ ವೀಕ್ಷಕರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts