More

    ಪಾಲಕರೇ ಎಚ್ಚರ! ನಿಮ್ಮ ಮಕ್ಕಳು ಆನ್​​ಲೈನ್​ ಗೇಮ್ಸ್​ ಆಡುತ್ತಾರಾ? ಹಾಗಿದ್ದರೆ ಇದನ್ನು ಓದಿ

    ನವದೆಹಲಿ: ಇತ್ತೀಚೆಗೆ ಮಕ್ಕಳಲ್ಲಿ ಜನಪ್ರಿಯವಾಗಿರುವ ಆನ್​ಲೈನ್​ ಗೇಮಿಂಗ್​ನ ವಿಧವಿಧವಾದ ದುಷ್ಪರಿಣಾಮಗಳ ಬಗ್ಗೆ ಪಾಲಕರು ಎಚ್ಚರಿಕೆ ವಹಿಸಬೇಕೆಂದು ಭಾರತ ಸರ್ಕಾರ ಹೇಳಿದೆ. ಗೇಮಿಂಗ್ ಎಂಬುದು ಚಟವಾಗಿ ಬೆಳೆಯದಂತೆ, ಮಕ್ಕಳ ಶಾಲಾ ಕಲಿಕೆ ಮತ್ತು ಸಾಮಾಜಿಕ ಜೀವನವನ್ನು ಹಾಳುಮಾಡದಂತೆ ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ.

    ಕರೊನಾದಿಂದ ಆರಂಭವಾದ ಆನ್​ಲೈನ್​ ಕ್ಲಾಸ್​ಗಳ ಹಿನ್ನೆಲೆಯಲ್ಲಿ ಇಂಟರ್​ನೆಟ್​ ಮತ್ತು ಗ್ಯಾಜೆಟ್​ಗಳ ಮೇಲೆ ಮಕ್ಕಳು ಹೆಚ್ಚಿನ ಹಿಡಿತ ಹೊಂದಿದ್ದಾರೆ. ಇದರಿಂದ ಆನ್​ಲೈನ್​ ಗೇಮಿಂಗ್​ ಕೂಡ ಹೆಚ್ಚಾಗಿದೆ. ಆದರೆ, ಈ ಆಟಗಳನ್ನು ಆಡುವುದು ಒಂದು ಗಂಭೀರವಾದ ಕೆಟ್ಟ ಅಭ್ಯಾಸವಾಗಿ ಬೆಳೆದು ‘ಗೇಮಿಂಗ್​ ಡಿಸಾರ್ಡರ್​’ ಎನ್ನುವ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ಉಂಟುಮಾಡಬಲ್ಲ ಆನ್​ಲೈನ್​ ಗೇಮಿಂಗ್​ನ ದುಷ್ಪರಿಣಾಮಗಳನ್ನು ತಡೆಯಲು ಪಾಲಕರಿಗೆ ಮತ್ತು ಶಿಕ್ಷಕರಿಗೆ ಸರ್ಕಾರ ಹಲವು ಸಲಹೆಗಳನ್ನು ನೀಡಿದೆ. ಏನು ಮಾಡಬೇಕು, ಏನು ಮಾಡಬಾರದು ಎಂಬ ಪಟ್ಟಿ ನೀಡಿರುವ ಈ ಅಡ್ವೈಸರಿಯನ್ನು ಎಲ್ಲರಿಗೂ ತಲುಪುವಂತೆ ಪ್ರಚಾರ ಮಾಡಿ ಎಂದೂ ಹೇಳಿದೆ.

    ಇದನ್ನೂ ಓದಿ: ದುಬೈನಲ್ಲಿ ಕಳವಾಗಿದ್ದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ವಾಚ್ ಅಸ್ಸಾಂನಲ್ಲಿ ಪತ್ತೆ! ಓರ್ವನ ಬಂಧನ

    ಆರ್ಥಿಕ ಅಪಾಯ: ಪಾಲಕರು ಮನೆಯಲ್ಲಿ ಮಕ್ಕಳು ಇಂಟರ್​ನೆಟ್​ನಲ್ಲಿ ಹೆಚ್ಚು ಕಾಲ ಕಳೆಯದಂತೆ ನಿಗಾ ಇಡುವುದರೊಂದಿಗೆ, ಮಕ್ಕಳಲ್ಲಿ ಓದಿನಲ್ಲಿ ಆಸಕ್ತಿ ಕಡಿಮೆಯಾಗುವುದು ಇಲ್ಲವೇ ಮಾರ್ಕ್ಸ್​ ಕಡಿಮೆ ಬರುವುದು ಮುಂತಾದ ಲಕ್ಷಣಗಳ ಬಗ್ಗೆ ಶಿಕ್ಷಕರೂ ಎಚ್ಚರದಿಂದಿರಬೇಕು ಎಂದು ಹೇಳಿದೆ. ಜೊತೆಗೆ, ಗೇಮಿಂಗ್​ ಕಂಪೆನಿಗಳು ಮಕ್ಕಳನ್ನು ಹೆಚ್ಚು ಲೆವೆಲ್​ಗಳನ್ನು ಕೊಳ್ಳುವಂತೆ ಇನ್​-ಆ್ಯಪ್​ ಪರ್ಚೇಸ್​ಗಳನ್ನು ಮಾಡುವಂತೆ ಬಲವಂತ ಮಾಡುವುದೂ ಉಂಟು. ಹೀಗಾಗಿ ನಿಮ್ಮ ಕ್ರೆಡಿಟ್​ ಅಥವಾ ಡೆಬಿಟ್​ ಕಾರ್ಡ್​ಗಳನ್ನು ಆ್ಯಪ್​ಗಳ ಸಬ್​​ಸ್ಕ್ರಿಪ್ಷನ್ನಿಗೆ, ಗೇಮ್​ಗಳ ಪರ್ಚೇಸ್​ಗೆ ಬಳಸಬೇಡಿ ಅಥವಾ ಅಪ್ಪರ್​ ಲಿಮಿಟ್​ ನಿಗದಿಪಡಿಸಿ. ಇನ್ನೂ ಉತ್ತಮವೆಂದರೆ ಇನ್​-ಗೇಮ್​ ಖರೀದಿಗಳನ್ನು ಪೇರೆಂಟಲ್​ ಕನ್ಸೆಂಟ್​ ಇಲ್ಲದೆ ಮಾಡದಂತೆ ಸೆಟ್​ ಮಾಡಿಬಿಡಿ ಎಂದು ಸರ್ಕಾರ ಹೇಳಿದೆ.

    ದುಷ್ಕರ್ಮಿಗಳಿಂದ ಎಚ್ಚರ: ಆನ್​​ಲೈನ್​ ಗೇಮ್​ಗಳನ್ನು ಆಡುವಾಗ ಸ್ವಂತ ಹೆಸರು ಕೊಡಬಾರದು. ಬದಲಿಗೆ ಸ್ಕ್ರೀನ್​ ನೇಮ್​ ಅಥವಾ ಅವತಾರ್​ಗಳನ್ನು ಬಳಸಿ ತಮ್ಮ ಗುರುತನ್ನು ಕಾಪಾಡಿಕೊಳ್ಳಬೇಕು. ಮಲ್ಟಿಪ್ಲೇಯರ್​ ಗೇಮ್​ಗಳಲ್ಲಿ ಯಾವುದಾದರೂ ಆಟಗಾರ ಸಂಪರ್ಕಿಸಲು ಪ್ರಯತ್ನಿಸಿದರೆ ಅಥವಾ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದರೆ ತಕ್ಷಣ ಅವರನ್ನು ಅನ್​​ಫ್ರೆಂಡ್​ ಅಥವಾ ಬ್ಲಾಕ್​ ಮಾಡಬೇಕು. ಆನ್​ಲೈನ್​ ಮೂಲಕ ದೌರ್ಜನ್ಯ ಎಸಗುವ ಅಥವಾ ಕಿರುಕುಳ ನೀಡುವವರಿಂದ ಮಕ್ಕಳನ್ನು ಸುರಕ್ಷಿತವಾಗಿರಿಸಲು ಅಪರಿಚಿತ ವೆಬ್​ಸೈಟ್​ಗಳಿಗೆ ಹೋಗದಂತೆ, ಪಾಪ್​-ಅಪ್​ಗಳಿಗೆ ಪ್ರತಿಕ್ರಿಯಿಸದಂತೆ ಮತ್ತು ಮಕ್ಕಳ ಮೇಲೆ ನಿಗಾ ಇಡುವಂತೆ ಕೂಡ ಸರ್ಕಾರ ಎಚ್ಚರಿಸಿದೆ.

    ಪಾಲಕರೇ ಎಚ್ಚರ! ನಿಮ್ಮ ಮಕ್ಕಳು ಆನ್​​ಲೈನ್​ ಗೇಮ್ಸ್​ ಆಡುತ್ತಾರಾ? ಹಾಗಿದ್ದರೆ ಇದನ್ನು ಓದಿ

    ಮನೆಯಲ್ಲಿ ಎಲ್ಲರೂ ಓಡಾಡುವ ಕಡೆ ಇರಿಸಿದ ಕಂಪ್ಯೂಟರ್​​ನಲ್ಲಿ ಗೇಮ್​ಗಳನ್ನು ಆಡಲು ಜಾಗ ಮಾಡಿ. ಆನ್​ಲೈನ್​ ಗೇಮ್​ಗಳ ಏಜ್​ ರೇಟಿಂಗ್​ ಅಂದರೆ ಎಷ್ಟು ವಯಸ್ಸಿನ ಮಕ್ಕಳಿಗೆ ಆಡಲು ಸೂಕ್ತ ಎಂಬ ವಿವರವನ್ನು ಪರಿಶೀಲಿಸಿಯೇ ಆಡಲು ಅನುಮತಿ ಕೊಡಿ. ಅನಗತ್ಯ ಗೌಪ್ಯತೆ ಅಥವಾ ಏಕಾಂಗಿತನ ಬಯಸುವುದು, ಮೊಬೈಲ್​ ಅಥವಾ ಕಂಪ್ಯೂಟರ್​ ಮುಂದೆ ತುಂಬಾ ಸಮಯ ಕಳೆಯುವುದು ಉತ್ತಮ ಲಕ್ಷಣಗಳಲ್ಲ; ಈ ವರ್ತನೆ ಕಂಡರೆ ತಕ್ಷಣ ಸಹಾಯ ಒದಗಿಸಿ ಅಥವಾ ಪಡೆಯಿರಿ ಎಂದು ಸರ್ಕಾರ ವಿವರಿಸಿದೆ.

    ಪಾಲಕರೇ ಎಚ್ಚರ! ನಿಮ್ಮ ಮಕ್ಕಳು ಆನ್​​ಲೈನ್​ ಗೇಮ್ಸ್​ ಆಡುತ್ತಾರಾ? ಹಾಗಿದ್ದರೆ ಇದನ್ನು ಓದಿ

    ಯಾವುದೇ ಅಹಿತಕರ ಘಟನೆಯಾದಲ್ಲಿ ಅಥವಾ ಹೆಚ್ಚಿನ ವಿವರಗಳಿಗೆ, ಈ ರಾಷ್ಟ್ರೀಯ ಹೆಲ್ಪ್​ಲೈನ್​ ಅನ್ನು ಸಂಪರ್ಕಿಸಬಹುದು –https://cybercrime.gov.in/Webform/Helpline.aspx ಅಥವಾ ರಾಜ್ಯವಾರು ನೋಡಲ್​ ಅಧಿಕಾರಿಗಳನ್ನು ಸಂಪರ್ಕಿಸಬಹುದು – https://cybercrime.gov.in/Webform/Crime_NodalGrivanceList.aspx.

    ವಿಕಿ-ಕತ್ರಿನಾ ಮದುವೆಯ ಅಪರೂಪದ ದೃಶ್ಯಗಳು ಇಲ್ಲಿವೆ ನೋಡಿ…

    ಶಿಕ್ಷಕನ ತಲೆ ಮೇಲೆ ಕಸದಬುಟ್ಟಿ ಹಾಕಿ ಪುಂಡಾಟ ಮೆರೆದಿದ್ದ 6 ವಿದ್ಯಾರ್ಥಿಗಳ ವಿರುದ್ಧ ದಾಖಲಾಯ್ತು ಪೊಲೀಸ್​ ಕೇಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts