More

    ಹುಷಾರ್! ಔಷಧ ಕೊಳ್ಳುವ ಮುಂಚೆ ಅಸಲಿಯೋ ನಕಲಿಯೋ ಗುರುತು ಹಚ್ಚಿ !

    ನವದೆಹಲಿ : ಕರೊನಾದಿಂದಾಗಿ ಲಕ್ಷಾಂತರ ಜನ ನರಳುತ್ತಿರುವ ಈ ಸಮಯದಲ್ಲಿ ಜನರ ಪ್ರಾಣಕ್ಕೂ ಲೆಕ್ಕಿಸದೆ ದುಡ್ಡು ಸಂಪಾದಿಸುವ ಇರಾದೆ ಹೊಂದಿರುವವರಿಗೂ ಕೊರತೆಯಿಲ್ಲ. ಇದಕ್ಕೆ ನಕಲಿ ಔಷಧಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ದುಷ್ಕರ್ಮಿಗಳೇ ನಿದರ್ಶನ. ಇಂತಹ ಖದೀಮರ ಕೈಗೊಂಬೆಯಾಗದಂತೆ ದೆಹಲಿ ಪೊಲೀಸರು ನಾಗರೀಕರಿಗೆ ಎಚ್ಚರಿಕೆ ನೀಡಿದ್ದಾರೆ.

    ಕರೊನಾ ಸೋಂಕಿತರಲ್ಲಿ ವೈರಲ್ ಲೋಡ್ ಕಡಿಮೆ ಮಾಡಲು ಉಪಯೋಗಿಸುವ ಆ್ಯಂಟಿವೈರಲ್ ರೆಮ್​ಡೆಸಿವಿರ್​​ನ ನಕಲಿ ಇಂಜೆಕ್ಷನ್​ಗಳ ಮಾರಾಟವೂ ನಡೆಯುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಿಂದ ಈ ಔಷಧಿ ಕೊಳ್ಳುವ ಮೊದಲು ಜನರು ಎಚ್ಚರಿಕೆ ವಹಿಸಬೇಕೆಂದು ದೆಹಲಿ ಪೊಲೀಸ್ ಅಪರಾಧ ವಿಭಾಗದ ಡಿಸಿಪಿ ಮೋನಿಕಾ ಭರದ್ವಾಜ್ ಟ್ವೀಟ್​ ಮಾಡಿದ್ದಾರೆ.

    ರೆಮ್​ಡೆಸಿವಿರ್​​ನ ಒಂದು ಬ್ರ್ಯಾಂಡ್​ ಆದ ಕೋವಿಫಾರ್​ ಎಂಬ ಇಂಜೆಕ್ಷನ್​ನ ಉದಾಹರಣೆ ನೀಡಿ ನಕಲಿ ಔಷಧದ ಗುರುತು ಹಚ್ಚುವ ಬಗ್ಗೆ ಭರದ್ವಾಜ್ ಮಾಹಿತಿ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಪಡೆಯಬೇಕಾದ ಈ ಔಷಧಿಯ ಅಸಲಿ ಪ್ಯಾಕ್​ ಮೇಲೆ ಆರ್​ಎಕ್ಸ್​ ಎಂದು ಬರೆದಿರುತ್ತದೆ. ಆದರೆ ನಕಲಿ ಪ್ಯಾಕ್​ನಲ್ಲಿ ಅದು ಇಲ್ಲ ಮತ್ತು ಪ್ರಿಂಟ್​ನಲ್ಲಿ ಕೆಲವು ವ್ಯತ್ಯಾಸಗಳಿರುತ್ತವೆ ಎಂದು ತಿಳಿಸಿದ್ದಾರೆ.

    VIDEO | ನಕಲಿ ರೆಮ್​ಡೆಸಿವಿರ್ ತಯಾರಿಸುತ್ತಿದ್ದ ಫ್ಯಾಕ್ಟರಿ! 2000 ಜನರನ್ನು ವಂಚಿಸಿರುವ ಖದೀಮರು !

    ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts