More

    ಜನಮತ | ಶಿಕ್ಷಣ ಕುರಿತು ಉತ್ತಮ ಲೇಖನ

    ಶಿಕ್ಷಣ ನೀತಿ ಕುರಿತು ಅನಿತಾ ಕರ್ವಾಲ್ ಅವರ ಲೇಖನ (ವಿಜಯವಾಣಿ, ಮಾ.6) ಉತ್ತಮವಾಗಿತ್ತು. ಲೇಖನದಲ್ಲಿ ವ್ಯಕ್ತಪಡಿಸಿರುವ ಅಂಶಗಳನ್ನು ಪೋಷಕರು ಮತ್ತು ಶಿಕ್ಷಕರು ಪರಿಗಣಿಸುತ್ತಾರೆಂದು ನಾನು ಭಾವಿಸುತ್ತೇನೆ. ಇವುಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಇಡೀ ಜಗತ್ತು ಶಾಂತಿಯ ನಂದನವನ ಆಗುವುದರಲ್ಲಿ ಅನುಮಾನವಿಲ್ಲ. ಡಾ. ಮಾಂಟೆಸರಿ ಅವರು ಕೂಡ ಇದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಆ ಕಾರಣದಿಂದಲೇ ಅವರ ತತ್ವಜ್ಞಾನವು ನಮ್ಮ ಹೃದಯಗಳನ್ನು ಸುಲಭವಾಗಿ ತಟ್ಟುತ್ತದೆ. ‘ದಿವಾಸ್ವಪ್ನ’ ಎಂಬುದು ಅವರು ಮಕ್ಕಳೊಂದಿಗೆ ನಡೆಸಿದ ಪ್ರಯೋಗಗಳ ಅನುಭವದ ಸಂಗ್ರಹವಾಗಿದೆ. ಅದು ಇಂದಿಗೂ ಪ್ರಸ್ತುತವಾಗಿದೆ.

    ನಮ್ಮ ದೇಶದಲ್ಲಿ ಹಾಗೂ ಭಾರತದ ಹೊರಗೆ, ಮಾಂಟೆಸರಿ ಶಿಕ್ಷಣ ವಿಧಾನ ಪ್ರಸಾರಕ್ಕೆ ಭಾರತೀಯ ಮಾಂಟೆಸರಿ ಕೇಂದ್ರ (ಐಎಂಸಿ) ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳುವುದಕ್ಕೆ ನನಗೆ ಅತೀವ ಹೆಮ್ಮೆಯಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ನೂರು ವರ್ಷ ಹಳೆಯದಾದರೂ; ಮತ್ತು ಪ್ರಸಕ್ತ ಹೊಸ ಶಿಕ್ಷಣ ನೀತಿಯು ಇದೇ ರೀತಿಯ ಚಿಂತನೆಗಳನ್ನು ಹೊಂದಿದ್ದರೂ, ಈ ವಿಧಾನ ಜನಪ್ರಿಯವಾಗದಿರುವುದು ದುರದೃಷ್ಟಕರ. ಇದನ್ನು ಸರ್ಕಾರ ಮನಗಂಡು, ಈ ವಿಧಾನವು ಇನ್ನಷ್ಟು ಹೆಚ್ಚು ಸಂಖ್ಯೆಯ ಮಕ್ಕಳನ್ನು ತಲುಪುವುದಕ್ಕೆ ನಾವು ನಡೆಸುವ ಪ್ರಯತ್ನಗಳಿಗೆ ಬೆಂಬಲ ನೀಡುತ್ತದೆಂದು ಆಶಿಸುತ್ತೇನೆ.

    | ಶ್ಯಾಮಲಾ ರಾವ್ ಮಹಾ ನಿರ್ದೇಶಕಿ, ಭಾರತೀಯ ಮಾಂಟೆಸರಿ ತರಬೇತಿ ಕೋರ್ಸ್​ಗಳು, ಐಎಂಸಿ

    ಸದ್ಗುರು ಸಮ್ಮುಖದಲ್ಲಿ ಶಿವರಾತ್ರಿ ಸಂಭ್ರಮ; ಆದಿಯೋಗಿ ಸನ್ನಿಧಿಯಲ್ಲಿ ಸಂಗೀತಮಯ ಆಚರಣೆ-ಜಾಗರಣೆ

    ಸರ್ವಾಲಂಕೃತ ಸಿಂಹಾಸನದ ಮೇಲೆ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ದರ್ಶನ; ಆದಿಚುಂಚನಗಿರಿಯಲ್ಲಿ ಶಿವರಾತ್ರಿ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts