More

    ಸಹಪಠ್ಯ ಚಟುವಟಿಕೆಯಿಂದ ಜ್ಞಾನ ವೃದ್ಧಿ

    ಕೂಡ್ಲಿಗಿ: ಶಿಕ್ಷಕರಿಗೆ ಕಲಿಕೆಯೇ ಬಂಡವಾಳವಾಗಿದೆ. ಅವರು ಹೆಚ್ಚು ಕ್ರಿಯಾಶೀಲದಿಂದ ಇರಲು ವಿದ್ಯಾರ್ಥಿಯಾಗಿರಬೇಕು ಎಂದು ಬಿಇಒ ಪದ್ಮನಾಭ ಕರಣಂ ಹೇಳಿದರು.

    ಶಿಕ್ಷಕರಿಗೆ ಕಲಿಕೆಯೇ ಬಂಡವಾಳ

    ಪಟ್ಟಣದ ಹಿರೇಮಠ ಪ್ರೌಢಶಾಲೆಯಲ್ಲಿ ಶಿಕ್ಷಕರ ಕಲ್ಯಾಣ ನಿಧಿಯಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳಿಗೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಸಹಪಠ್ಯ ಚಟುವಟಿಕೆ ಸ್ಪರ್ಧೆಗಳು ಕಲಿಕೆಗೆ ಸಹಾಯ ಮಾಡಲಿವೆ. ಅಲ್ಲದೆ ಜ್ಞಾನ ವೃದ್ಧಿಗೆ ಅನುಕೂಲವಾಗಲಿದೆ ಎಂದರು.

    ಇದನ್ನೂ ಓದಿ: ವಿಶ್ವಕಪ್​ ಬಳಿಕ ದೇಶೀಯ ಏಕದಿನ ಕ್ರಿಕೆಟ್​ ಹಬ್ಬಕ್ಕೆ ವೇದಿಕೆ ಸಜ್ಜು; ಇಂದಿನಿಂದ ವಿಜಯ್​ ಹಜಾರೆ ಟ್ರೋಫಿ

    ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಿ.ಶಿವರಾಜ್ ಮಾತನಾಡಿ, ಪಠ್ಯ ಬೋಧನೆ ಜತೆಗೆ ಸಹ ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವುದು ಅಗತ್ಯ. ಇದರಿಂದ ಗುಣಾತ್ಮಕ ಕಲಿಕೆಗೆ ಉತ್ತೇಜನ ನೀಡಿದಂತಾಗಲಿದೆ. ಮಕ್ಕಳ ಪ್ರತಿಭೆ ಅನಾವರಣದಲ್ಲಿ ಶಿಕ್ಷಕರ ಶ್ರಮ ಬಹಳವಿದೆ. ಸಹ ಪಠ್ಯೇತರ ಚಟುವಟಿಕೆ ಸ್ಪರ್ಧೆ ಏರ್ಪಡಿಸಿರುವುದು ಶಿಕ್ಷಕರ ಪ್ರತಿಭೆ ಗುರುತಿಸಲು ಎಂದು ಹೇಳಿದರು.

    ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಗಾಯನ, ರಸಪ್ರಶ್ನೆ, ಭಾವಗೀತೆ, ಜಾನಪದ, ಆಶುಭಾಷಣ, ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳು ನಡೆದವು.
    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಬಿ.ಶಿವಾನಂದ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ದರಾಧ್ಯ, ಸರ್ಕಾರಿ ನೌಕರರ ಸಂಘದ ಖಜಾಂಚಿ ಆರ್.ಬಿ.ಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಟಿ.ಎಚ್.ಎಂ.ಶೇಖರಯ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಎಚ್.ಎಂ.ಶಶಿಧರ, ರಾಜ್ಯ ಪರಿಷತ್ತ ಸದಸ್ಯ ಹರೀಶ್ ಗೌಡ, ಸರ್ಕಾರಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ಪಾಂಡುರಂಗ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾಯಿತ ಪ್ರತಿನಿಧಿ ಕೆ.ಎರ‌್ರಿಸ್ವಾಮಿ, ಕೆ.ಎಸ್.ವೀರೇಶ್,ಇಸಿಒಗಳಾದ ನಾಗರಾಜ, ಮಂಜುನಾಥ, ಸಿಆರ್ ಪಿ ಸಂದೀಪ್,ಬೋರಯ್ಯ ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts